+91 8255-266211
info@shreeodiyoor.org

ಹನುಮೋತ್ಸವ

ಆಮಂತ್ರಣ ಪತ್ರಿಕೆಯನ್ನು ವೀಕ್ಷಿಸಲು ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ

Read More

ಉಚಿತ ದಂತ-ಕಣ್ಣು-ಮಧುಮೇಹ ತಪಸಣಾ ಮತ್ತು ಚಿಕಿತ್ಸಾ ಶಿಬಿರ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ತಾ.24-03-2019ನೇ ಆದಿತ್ಯವಾರ ಬೆಳಿಗ್ಗೆ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಹಯೋಗದಲ್ಲಿ ರೋಟರಿ ಕ್ಲಬ್ ವಿಟ್ಲ ಮತ್ತು ಜೇಸಿಐ ವಿಟ್ಲ, ಇಂಡಿಯನ್ ಡೆಂಟಲ್ ಎಸೋಸಿಯೇಶನ್, ಪುತ್ತೂರು ಇದರ ವತಿಯಿಂದ ಉಚಿತ ದಂತ-ಕಣ್ಣು-ಮಧುಮೇಹ ತಪಸಣಾ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ.

Read More

ತಾಯಿ ಭಾರತೀಯ ಸಂಸ್ಕೃತಿಯ ರಾಯಭಾರಿ–ಒಡಿಯೂರು ಶ್ರೀ

‘ಭಾರತೀಯಸಂಸ್ಕೃತಿಯ ರಾಯಭಾರಿ ತಾಯಿಯಾಗಬೇಕು, ತಾಯಿಯಲ್ಲಿ ದೇವರನ್ನು ಕಾಣಬೇಕು. ಒಂದು ಆದರ್ಶ ಶಾಲೆಯ ಹಿಂದೆ ಪೋಷಕರ ಪಾತ್ರವಿದೆ. ಹಿತಮಿತವಾಗಿದ್ದು ನಮ್ಮನ್ನು ನಾವು ಸರಿಯಾಗಿರಿಸಿಕೊಳ್ಳಬೇಕು.

Read More

ಒಡಿಯೂರಿನಲ್ಲಿ ಶತರುದ್ರಾಭಿಷೇಕ

ಮಾ.04ರಂದು ರಾತ್ರಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ನಡೆಯಲಿದೆ.

Read More

ಒಡಿಯೂರು ಶ್ರೀ ಕಿಷ್ಕಿಂದೆಗೆ

ಫೆ.24ರಿಂದ 27ರ ತನಕ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕಿಷ್ಕಿಂದೆ, ಹಂಪಿ ಮುಂತಾದ ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಲಿದ್ದಾರೆ. ಸದ್ರಿ ದಿನಗಳಲ್ಲಿ ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.

Read More

“ಉಗ್ರರ ಧಮನಕ್ಕೆ ಯೋಧರಿಗೆ ಭಗವಂತ ಭೀಮಬಲ ಕರುಣಿಸಲಿ” -ಒಡಿಯೂರು ಶ್ರೀ

“ಜೀವನ ರಥ ಸಾಗಲು ಧರ್ಮದ ಪಥ ಅಗತ್ಯ. ಕಷ್ಟಗಳನ್ನು ಸಮಸ್ಯೆಗಳನ್ನು ಮೆಟ್ಟಿಲುಗಳನ್ನಾಗಿಸಿ ಮುನ್ನಡೆಯಬೇಕು. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ, ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಬದುಕು ಸುಸೂತ್ರವಾಗುತ್ತದೆ. ಯೋಧರ ಹತ್ಯೆಯನ್ನು ನಾವು ಖಂಡಿಸುವುದರ ಜೊತೆಗೆ ಇದಕ್ಕೆ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು. ಉಗ್ರರಿಗೆ ಯಾವತ್ತೂ ಭಗವಂತನ ಅನುಗ್ರಹವಿರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಸಮಾಜ ಮಾಡಬೇಕು. ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭೀಮಬಲ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಆತ್ರೇಯ ಮಂಟಪದಲ್ಲಿ ನಡೆದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ವಿಜ್ಞಾನ ಮಾದರಿಗಳ ಪ್ರದರ್ಶನ

ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಫೆಬ್ರವರಿ 14 ಮತ್ತು 15ರಂದು ವಿಜ್ಞಾನ ಮಾದರಿಗಳ ಪ್ರದರ್ಶನ ಜನಮನವನ್ನು ಆಕರ್ಷಿಸಿದೆ. ಪ್ರದರ್ಶನವನ್ನು ಉದ್ಘಾಟಿಸಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು “ವಿಜ್ಞಾನದ ಆವಿಷ್ಕಾರಗಳೊಂದಿಗೆ ಅಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವುದರಿಂದ ಭವಿಷ್ಯದಲ್ಲಿ ಸತ್ಪ್ರಜೆಗಳನ್ನು ನಿರ್ಮಾಣ ಮಾಡಿ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ” ಎಂದು ಶುಭಹಾರೈಸಿದರು.

Read More

‘ತುಳು ಬದ್ಕ್‍ದ ನಿಲೆ-ಬಿಲೆ’ – 19ನೇ ತುಳು ಸಾಹಿತ್ಯ ಸಮ್ಮೇಳನ

“ಸಮಾಜ ಕಟ್ಟುವ ಸಾಹಿತ್ಯ ನಿರ್ಮಾಣವಾಗಬೇಕು. ಧರ್ಮಗ್ರಂಥಗಳನ್ನು ಸುಡಬೇಕು ಎನ್ನುತ್ತಾ ಸಮಾಜವನ್ನು ವಿಘಡನೆ ಮಾಡುವ ಕೆಲವು ಸಾಹಿತಿಗಳ ನಡೆ ಸರಿಯಲ್ಲ. ತುಳುನಾಡಿನಲ್ಲಿ ತುಳು ಭಾಷೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಬಾರದು. ತುಳು ಭಾಷೆಯಲ್ಲಿ ಎಂಎ. ಪರೀಕ್ಷೆ ಬರೆಯುತ್ತಿರುವುದು, ತುಳುವಿನಲ್ಲೇ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ. ತುಳು ಭಾಷೆಯ ಸಂಪತ್ತನ್ನು ಅರ್ಥೈಸಿ ಉಳಿಸಿ-ಬೆಳೆಸುವ ಪ್ರಯತ್ನ ನಡೆಯಬೇಕು”

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top