+91 8255-266211
info@shreeodiyoor.org

“ಜೀವನ ಮೌಲ್ಯದ ವೃದ್ಧಿಗೆ ಬದುಕಿನಲ್ಲಿ ಮಧುರತೆಯಿರಬೇಕು” – ಒಡಿಯೂರು ಶ್ರೀ

“ನಮ್ಮ ಬದುಕಿನಲ್ಲಿ ಆತ್ಮವಿಶ್ವಾಸ ಹಾಗೂ ಸಂಸ್ಕಾರ ಶಿಕ್ಷಣ ವೃದ್ಧಿಸಲು ಗ್ರಾಮವಿಕಾಸ ಯೋಜನೆಯ ಉದಯವಾಯಿತು. ಮಧುರತೆ ಇದ್ದಲ್ಲಿ ಜೀವನ ಮೌಲ್ಯ ವೃದ್ಧಿಯಾಗುತ್ತದೆ. ಯೋಜನೆಯ ಪ್ರಥಮ ಆಧ್ಯತೆ ಬುದುಕಿನ ಶಿಕ್ಷಣಕ್ಕಾಗಿಯೇ ಮೀಸಲಿರಿಸುವುದು.

Read More

“ಜಾತ್ರೆ – ಉತ್ಸವಗಳ ಮೂಲಕ ಮಾನವ ಧರ್ಮ ಬಲಗೊಳ್ಳುತ್ತದೆ”

ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕು ಚಕ್ರಗಳು ಅಥವಾ ಕಂಬಗಳು. ಒಂದು ಕಂಬ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಧರ್ಮವೆಂಬ ಕಂಬ ಸಮರ್ಪಕವಾಗಿದ್ದಾಗ ಉಳಿದ ಕಂಬಗಳೆಲ್ಲವೂ ಸಮರ್ಪಕವಾಗಿರುತ್ತವೆ. ಅದು ಬದುಕಿನ ಯಶಸ್ಸು. ಆದುದರಿಂದ ಧರ್ಮದ ಆಧಾರದಲ್ಲಿ ಬದುಕಿನ ರಥ ಸಾಗಬೇಕು. ಜಾತ್ರೆ, ಉತ್ಸವಗಳ ಮೂಲಕ ಮಾನವಧರ್ಮ ಗಟ್ಟಿಯಾಗುತ್ತದೆ.

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಗಣರಾಜ್ಯೋತ್ಸವ ಆಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲ ಇವರು ಜನವರಿ 26ನೇ ಶನಿವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.

Read More

ಒಡಿಯೂರು ಶ್ರೀಗಳಿಂದ ಸಂತಾಪ

ಭಕ್ತಮಾನಸದಲ್ಲಿ ಅಚ್ಚಳಿಯದೆ ಉಳಿದ ಶತಮಾನದ ಪುಣ್ಯಪುರುಷ, ಸಾಮರಸ್ಯದ ಹರಿಕಾರ, ಶಿಕ್ಷಣ ಸಂಸ್ಥೆಯನ್ನು ದೇಶ-ವಿದೇಶಗಳಲ್ಲಿಯೂ ಸ್ಥಾಪಿಸಿದ್ದ ಸಿದ್ಧಗಂಗಾ ಶ್ರೀಗಳ ಶಿಕ್ಷಣ ಪ್ರೀತಿ ಹಾಗೂ ಅನ್ನದಾಸೋಹ ಅನನ್ಯವಾದುದು.

Read More

ಒಡಿಯೂರಿನಲ್ಲಿ ಶ್ರೀ ದತ್ತ ಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ

‘ಗುರು’ ಎಂದರೆ ಜ್ಯೇಷ್ಠ, ದೊಡ್ಡದು ಎಂಬ ಅರ್ಥಗಳಿವೆ. ಗುರು ಯಾವತ್ತೂ ಲಘುವಾಗುವುದಿಲ್ಲ. ‘ಗು’ ಎಂದರೆ ಅಂಧಾಕಾರ, ‘ರು’ ಎಂದರೆ ಬೆಳಕು. ಅಂಧಾಕಾರವನ್ನು ನಿವಾರಿಸಿ ಸುಜ್ಞಾನದ ಬೆಳಕನ್ನು ನೀಡುವವನೇ ಗುರು. ವಿಷ್ಣುವಿನ 6ನೇ ಅವತಾರವೇ ಗುರುದತ್ತಾತ್ರೇಯರು. ಅತ್ರಿಯ ಮಗನಾದುದರಿಂದ ಆತ್ರೇಯನಾದ. ದೇವನೇ ಗುರುವಾಗಿ ಧರೆಯಲ್ಲಿ ಅವತರಿಸಿದ.

Read More

ಕೃಷಿಭೂಮಿಯಲ್ಲಿ‌ ನಾಟಿ ಪ್ರಾತ್ಯಕ್ಷಿಕೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 9ನೇ ತರಗತಿ‌ ವಿದ್ಯಾರ್ಥಿಗಳಿಗೆ ಗುರುದೇವದತ್ತ ಸಂಸ್ಥಾನಮ್ ಒಡಿಯೂರಿನ  ಕೃಷಿಭೂಮಿಯಲ್ಲಿ‌ ನಾಟಿ ಪ್ರಾತ್ಯಕ್ಷಿಕೆಯನ್ನು ದಿನಾಂಕ 06/12/2018 ರಂದು ನೀಡಲಾಯಿತು.ಶಾಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು. 

Read More

ಪೂಜ್ಯ ಶ್ರೀಗಳವರು ಮುಂಬೈಗೆ

ತಾ.08-12-2018ರಂದು ಶನಿವಾರ ಮುಂಬೈ ಬಂಟರ ಭವನದಲ್ಲಿ ಜರಗುವ ಕನ್ನಡ ವೆಲ್‍ಫೇರ್ ಸೋಸೈಟಿನ ಸುವರ್ಣ ಸಂಭ್ರಮೋತ್ಸವದಲ್ಲಿ ಪೂಜ್ಯ ಶ್ರೀಗಳವರು ದಿವ್ಯ ಸಾನ್ನಿಧ್ಯವನ್ನು ಕರುಣಿಸಲಿರುವುದರಿಂದ ಶ್ರೀ ಸಂಸ್ಥಾನದಲ್ಲಿ ಶನಿವಾರ ಹಗಲು ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ. ರಾತ್ರಿ ಎಂದಿನಂತೆ ಪರಿಹಾರ ಪೂಜಾದಿಗಳು ನಡೆಯಲಿರುವುದು.

Read More

“ಕೌಶಲ್ಯದ ಬದುಕು ಶ್ರೇಷ್ಠ ಬದುಕು”- ಪುಣೆಯಲ್ಲಿ ಒಡಿಯೂರು ಶ್ರೀ

“ಬದುಕು ಮತ್ತು ಜೀವನ ಮೌಲ್ಯವನ್ನು ಸಂಸ್ಕಾರಯುತವಾಗಿ ವಿಕಸನಗೊಳಿಸಬಹುದು. ಪರಿಶುದ್ಧ ಹೃದಯದಿಂದ ಸಂಸ್ಕಾರಯುತವಾಗಿ ಬಾಳುವ ಆತ್ಮವಿಶ್ವಾಸದೊಂದಿಗೆ ನಾವು ನಮ್ಮ ಬದುಕನ್ನು ಅಧ್ಯಾತ್ಮದಿಂದ ವೃದ್ಧಿಸಲು ಸಾಧ್ಯ.

Read More

“ಕೌಶಲ್ಯದ ಬದುಕು ಶ್ರೇಷ್ಠ ಬದುಕು” – ದಾವಣಗೆರೆಯಲ್ಲಿ ಒಡಿಯೂರು ಶ್ರೀ

“ಸಮಾಜದಲ್ಲಿ ಎರಡು ತರದ ಜನರಿರುತ್ತಾರೆ. ಕೆಲವರು ರೇಷ್ಮೆಹುಳು ತರ, ಇನ್ನು ಕೆಲವರು ಜೇಡನ ತರ. ರೇಷ್ಮೆ ಹುಳು ತಾನೇ ಕಟ್ಟಿದ ಗೂಡಿನೊಳಗೆ ನಾಶವಾಗುತ್ತದೆ. ಜೇಡ ತಾನೇ ಕಟ್ಟಿದ ಬಲೆಯಲ್ಲಿ ಜೀವನ ನಡೆಸುತ್ತದೆ. ಯಾವತ್ತೂ ಜೇಡ ತಾನೇ ಕಟ್ಟಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top