+91 8255-266211
info@shreeodiyoor.org

ಮಕ್ಕಳು ತನ್ನಲ್ಲಿರುವ ಅಂತಃಶಕ್ತಿಯನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು

“ಮಕ್ಕಳು ತನ್ನಲ್ಲಿರುವ ಅಂತಃಶಕ್ತಿಯನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು”
ಒಡಿಯೂರು ಶ್ರೀ ಗುರುವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಒಡಿಯೂರು ಶ್ರೀ ಆಶೀರ್ವಚನ
“ಮಕ್ಕಳು ಬಾಹ್ಯ ಪ್ರಲೋಭನೆಗೆ ಒಳಗಾಗದೆ ತನ್ನಲ್ಲಿರುವ ಅಂತಃಶಕ್ತಿಯನ್ನು ಸಾಧನೆಯ ಮೂಲಕ ಕಂಡುಕೊಳ್ಳಬೇಕು. ಧೀರರಾಗಿ, ಧರ್ಮಮಾರ್ಗದಲ್ಲಿ ನಡೆದು ದೇಶಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು “ಮಕ್ಕಳು ಜೀವನದಲ್ಲಿ ಶಿಸ್ತು, ಸಂಯಮದ ಮೂಲಕ ಗುರುಭಕ್ತಿ, ಹಿರಿಯರಲ್ಲಿ ಪೂಜ್ಯ ಭಾವನೆ, ಪರಮಾತ್ಮನಲ್ಲಿ ನಂಬಿಕೆ, ತಮ್ಮಲ್ಲಿ ಆತ್ಮವಿಶ್ವಾಸವನ್ನಿರಿಸಿಕೊಂಡು, ಸಮಾಜದಲ್ಲಿ ಪರೋಪಕಾರಿಗಳಾಗಿ ಬಾಳಿ ಜೀವನದಲ್ಲಿ ಸಫಲತೆಯನ್ನು ಕಾಣಬೇಕು” ಎಂದರು.
ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಮಾತನಾಡಿ ಮಕ್ಕಳಿಗೆ ಮಾರ್ಗದರ್ಶನವಿತ್ತರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಅವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ಅರ್ಚನಾ ಭಟ್ ಹಾಗೂ ಕು| ಗಂಗಾ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಂಸ್ಕೃತ ಮತ್ತು ನೀತಿಬೋಧೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿನಿ ಕು| ಕೃಪಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಸುದೀಪ್ ಸ್ವಾಗತಿಸಿ, ಶ್ರೀಜಿತ್ ವಂದನಾರ್ಪಣೆಗೈದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top