+91 8255-266211
info@shreeodiyoor.org

ಪೂಜೆಗಳು

ಶ್ರೀ ಸಂಸ್ಥಾನದ ಪೂಜಾ ಸಮಯ

ಶ್ರೀ ಸಂಸ್ಥಾನದಲ್ಲಿ ಪ್ರತಿ ದಿನ ಎರಡು ಹೊತ್ತು ಮಹಾಪೂಜೆ ನಡೆಯುವುದು. ಬೆಳಿಗ್ಗೆ 8.00 ಗಂಟೆಗೆ ಬೆಳಗಿನ ಪೂಜೆ, ರಾತ್ರಿ 8.00ಕ್ಕೆ ರಾತ್ರಿ ಪೂಜೆ ಜರಗುವುದು. ಬಹುತೇಕ ದಿನಗಳಲ್ಲಿ ಪೂಜ್ಯ ಶ್ರೀಗಳೇ ಪೂಜೆ ನೆರವೇರಿಸಿ ಪ್ರಸಾದ ನೀಡುವರು. ಶ್ರೀ ದತ್ತ, ಆಂಜನೇಯ, ಸುಬ್ರಹ್ಮಣ್ಯ ದೇವರ ಬೇರೆ ಬೇರೆ ಸೇವೆಗಳು ಇಲ್ಲಿ ನಡೆಯುತ್ತದೆ. ಸಂಕ್ರಮಣದಂದು ಸಾಮೂಹಿಕ ಗಾಯತ್ರಿ ಹೋಮ ಜರಗುವುದು.

ಶ್ರೀ ಸಂಸ್ಥಾನಕ್ಕೆ ಬರುವ ಭಕ್ತರಿಗೆ ಎರಡೂ ಹೊತ್ತು ಅನ್ನದಾನದ ವ್ಯವಸ್ಥೆ ಇದೆ. ಅದಕ್ಕಾಗಿ ಶಾಶ್ವತ ಅನ್ನದಾನದ ವ್ಯವಸ್ಥೆಯ ಯೋಜನೆ ರೂಪಿಸಲಾಗಿದೆ.

ಶ್ರೀ ಸಂಸ್ಥಾನದಲ್ಲಿ ಶಾಶ್ವತ ಪೂಜೆಯ ವ್ಯವಸ್ಥೆ ಇದೆ. ಭಕ್ತರು ರೂ.1,501/-ನ್ನು ತೆತ್ತು ತಮ್ಮ ಅನುಕೂಲ ಹಾಗೂ ಅಪೇಕ್ಷಿತ ದಿನಗಳಲ್ಲಿ ಪೂಜೆ ಮಾಡಿಸಬಹುದಾಗಿದೆ. ನಿಗದಿತ ಪಡಿಸಿದ ದಿನದಂದು ಸನ್ನಿಧಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಸಾದ ಪಡಕೊಳ್ಳಬಹುದು. ಹಾಜರಾಗಲು ಅನಿವಾರ್ಯ ಕಾರಣವಿದ್ದರೆ ನೋಂದಣಿದಾರರ ಹೆಸರಿನಲ್ಲಿ ಪೂಜೆ ನಡೆಸಿ, ಅವರಿಗೆ ಅಂಚೆ ಮೂಲಕ ಪ್ರಸಾದ ಕಳುಹಿಸಲಾಗುತ್ತದೆ. ವಿಶೇಷ ಪರ್ವ ದಿನಗಳಲ್ಲಿ ರಂಗಪೂಜೆ ನಡೆಯುವುದು. ಶ್ರೀ ಸಂಸ್ಥಾನದಲ್ಲಿ ಬೆಳ್ಳಿ ರಥ ಸೇವೆ, ಆಶ್ಲೇಷ ಬಲಿ, ಸುದರ್ಶನ ಹೋಮ, ಸ್ವಯಂವರ ಪಾರ್ವತೀ ಪೂಜೆ, ಗುರುಪೂಜೆ, ಮಹಾಮೃತ್ಯುಂಜಯ ಹವನ, ಪವಮಾನ ಹೋಮ, ಗ್ರಹದೋಷಗಳ ನಿವಾರಣೆ ಮಾಡುವ ಪೂಜೆ-ಹವನ ಮೊದಲಾದ ಸೇವೆಗಳಿಗೆ, ಸಮಯಾನುಸಾರ ಅನ್ನ ಪ್ರಾಶನಾದಿ ಸೇವೆಗಳನ್ನು ಮಾಡಿಸುವ ಅವಕಾಶವಿದೆ.

ಬದುಕಿನ ಸಮಸ್ಯಾ ಪರಿಹಾರ

ಪ್ರತೀ ಗುರುವಾರ, ಶನಿವಾರ, ರವಿವಾರ ದಿನಗಳಲ್ಲಿ ಪೂಜ್ಯ ಸ್ವಾಮೀಜಿಯವರು ಶ್ರೀ ಗುರುದೇವದತ್ತ ಪೀಠದಲ್ಲಿ ಭಕ್ತ ಜನರ ಭೇಟಿಗೆ ಲಭ್ಯರಿದ್ದು, ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು.

ಬಾಧಾ ನಿವೃತ್ತಿ, ಗ್ರಹದೋಷ ನಿವಾರಣೆ ಮಾಡುವ ಪೂಜೆ-ಹವನ ಮತ್ತಿತರ ದೇವಾತಾರಾಧನೆ ಸೇವೆಗಳಿಗೆ ಶ್ರೀ ಸಂಸ್ಥಾನದಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು .

ಹೆಚ್ಚಿನ ಮಾಹಿತಿಗಳನ್ನು ಸೇವಾ ವಿಭಾಗದಲ್ಲಿ ಪಡೆಯಬಹುದು.

ಪೂಜೆಗಳು

1 ಶನಿವಾರ ಮತ್ತು ಸಂಕ್ರಮಣದ ದಿನಗಳಲ್ಲಿ ಅನ್ನದಾನ ಸಹಿತ ವಿಶೇಷ ಸೇವೆ ರೂಪಾಯಿ. 25001.00
2 ಒಂದು ದಿನದ ಸಂಪೂರ್ಣ ಸೇವೆ (ಅನ್ನದಾನ ಸಹಿತ) ರೂಪಾಯಿ. 10001.00
3 ಶಾಶ್ವತ ನಿತ್ಯ ಪೂಜೆ ರೂಪಾಯಿ. 1501.00
4 ರಂಗಪೂಜೆ ರೂಪಾಯಿ. 1501.00
5 ಸರ್ವಸೇವೆ ರೂಪಾಯಿ. 501.00
6 ಕಲ್ಪೋಕ್ತ ಪೂಜೆ ರೂಪಾಯಿ. 501.00
7 ಶ್ರೀ ಗಾಯತ್ರೀ ಹವನ (ಸಂಕ್ರಮಣದಂದು) ರೂಪಾಯಿ. 501.00
8 ಶನಿವಾರದ ವಿಶೇಷ ಪೂಜೆ ರೂಪಾಯಿ. 251.00
9 ಸಂಕ್ರಮಣದ ವಿಶೇಷ ಪೂಜೆ ರೂಪಾಯಿ. 251.00
10 ತುಲಾಭಾರ ಸೇವೆ (ಪೌರ್ಣಮಿಯಂದು-ಸಾಮಾಗ್ರಿ ಹೊರತು) ರೂಪಾಯಿ. 101.00
11 ರುದ್ರಾಭಿಷೇಕ (ಶನಿವಾರದಂದು ಬೆಳಿಗ್ಗೆ) ರೂಪಾಯಿ. 101.00
12 ಶ್ರೀ ಗಣಪತಿ ಹವನ(ಸಂಕಷ್ಟ ಹರ ಚತುರ್ಥಿ ದಿನ ಬೆಳಿಗ್ಗೆ) ರೂಪಾಯಿ. 101.00
13 ಶ್ರೀ ದತ್ತಾಂಜನೇಯ ಪೂಜೆ ರೂಪಾಯಿ. 101.00
14 ಶ್ರೀ ಗುರುಪಾದುಕಾಪೂಜೆ (ಶನಿವಾರ) ರೂಪಾಯಿ. 101.00
15 ಶ್ರೀ ಆಂಜನೇಯ ಸ್ವಾಮಿ ವಿಶೇಷ ಪೂಜೆ ರೂಪಾಯಿ. 51.00
16 ಶ್ರೀ ಗುರುಪೂಜೆ ರೂಪಾಯಿ. 51.00
17 ಶ್ರೀ ವಜ್ರಮಾತೆಗೆ ವಿಶೇಷಪೂಜೆ ರೂಪಾಯಿ. 51.00
18 ನಾಗತಂಬಿಲ (ಸಂಕ್ರಮಣದಂದು ಬೆಳಿಗ್ಗೆ) ರೂಪಾಯಿ. 51.00
19 ಹಣ್ಣುಕಾಯಿ ರೂಪಾಯಿ. 35.00
20 ಪುಷ್ಪಾಂಜಲಿ ರೂಪಾಯಿ. 25.00
21 ಅಪ್ಪಕಜ್ಜಾಯ(ಸಂಕಷ್ಟ ಹರ ಚತುರ್ಥಿಯಂದು) ರೂಪಾಯಿ. 25.00
22 ಲಡ್ಡುಸೇವೆ ರೂಪಾಯಿ. 21.00
23 ಪಂಚಕಜ್ಜಾಯ ರೂಪಾಯಿ. 15.00
24 ಕುಂಕುಮಾರ್ಚನೆ ರೂಪಾಯಿ. 12.00
25 ಸಿಂಧೂರಾರ್ಚನೆ ರೂಪಾಯಿ. 12.00
26 ಕಾರ್ತಿಕ ಪೂಜೆ ರೂಪಾಯಿ. 12.00
27 ಅನ್ನಪ್ರಾಶನ (ಸಂಕ್ರಮಣದಂದು ಮಧ್ಯಾಹ್ನ) ರೂಪಾಯಿ. 12.00
28 ತೀರ್ಥ ಪ್ರಸಾದ ರೂಪಾಯಿ. 12.00

 

*ವಿಶೇಷ ಬೆಳ್ಳಿರಥ ಸೇವೆ ನಡೆಸುವರಿಗೆ ಶ್ರೀ ಸಂಸ್ಥಾನದಲ್ಲಿ ಅವಕಾಶವಿದೆ.

ಶ್ರೀ ಸಂಸ್ಥಾನದಲ್ಲಿ ಧಾರ್ಮಿಕ – ವೈದಿಕ ಕ್ರಿಯಾ ಕಲಾಪಗಳು

ಪರ್ವ ದಿನಗಳಲ್ಲದೆ ಇತರ ದಿನಗಳಲ್ಲಿ ಪರ್ವಭಾವಿಯಾಗಿ ನಿಗದಿಗೊಳಿಸಿ ಭಕ್ತ ಜನರ ಇಚ್ಛೆಯಂತೆ ವಿಶೇಷ ಸೇವೆಗಳನ್ನು ಮಾಡಿಸಲು ಅವಕಾಶ ನೀಡಲಾಗುತ್ತದೆ. ರಂಗಪೂಜೆ, ಭದ್ರಕಾಳಿ ಸೇವೆ, ಗಣಪತಿ ಹವನ, ಸ್ವಯಂವರ ಪಾರ್ವತೀ ಪೂಜೆ, ಆಶ್ಲೇಷ ಬಲಿ, ಗಾಯತ್ರಿ ಯಜ್ಞ, ಗುರುಪಾದುಕಾ ಪೂಜೆ, ಸುದರ್ಶನ ಹೋಮ, ಮಹಾಮೃತ್ಯುಂಜಯ ಹವನ, ಪವಮಾನ ಹೋಮ ಮೊದಲಾದ ಸೇವೆಗಳನ್ನು ಸಮಯಾವಕಾಶ ಹೊಂದಿ ಭಕ್ತ ಜನತೆ ಮಾಡಿಸಬಹುದು.

ಹಾಲು ಪಾಯಸ, ರುದ್ರಾಭಿಷೇಕ ಸೇವೆಗಳಿಗೂ ವ್ಯವಸ್ಥೆ ಮಾಡಲಾಗುತ್ತದೆ. ವಡೆ ಸೇವೆ, ಎಳನೀರು ಅಭಿಷೇಕ, ವೀಳ್ಯ ಸೇವೆ, ಬೆಣ್ಣೆ ಸೇವೆಯಂತಹ ವಿಶಿಷ್ಟ ಸೇವೆಗಳ ಬಗ್ಗೆ ಮುಂಚಿತವಾಗಿ ತಿಳಿಸುವುದು ಅಗತ್ಯ. ವೇದಪಾರಾಯಣ, ಗುರುಚರಿತ್ರೆ ಪಾರಾಯಣಗಳನ್ನು ಮಾಡಿಸುವರೆ ಶ್ರೀ ಕ್ಷೇತ್ರದಲ್ಲಿ ಅವಕಾಶವಿದೆ. ಪುಷ್ಪಾಂಜಲಿ, ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಲಡ್ಡು ಸೇವೆ, ಪಂಚಕಜ್ಜಾಯ, ತೀರ್ಥ ಪ್ರಸಾದ ಇವೆಲ್ಲ ಸಾಮಾನ್ಯ ಎಲ್ಲ ದಿನಗಳಲ್ಲೂ ಲಭ್ಯವಿರುವ ಸೇವಾ ಪ್ರಕಾರಗಳಾಗಿರುತ್ತದೆ.

ವಿಶೇಷ ಸೂಚನೆ:

* ಅವರವರ ಸಂಕಲ್ಪದ ಪ್ರಕಾರ ಪೂಜೆಯನ್ನು ನೆರವೇರಿಸುವರೇ ಅಂಚೆ ಮೂಲಕ ಅಥವಾ ಬ್ಯಾಂಕ್ ಖಾತೆ ಸಂಖ್ಯೆ: 01662200017341, ಸಿಂಡಿಕೇಟ್ ಬ್ಯಾಂಕ್, ಕನ್ಯಾನ ಶಾಖೆ (IFSC 0000166) ಗೆ ಹಣ ಸಂದಾಯ ಮಾಡಬಹುದು. ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು.
* ಸಾರ್ವಜನಿಕ ಅನ್ನಸಂತರ್ಪಣೆಗೆ ದೇಣಿಗೆ ನೀಡುವವರು ಶ್ರೀ ಸಂಸ್ಥಾನದ ಸೇವಾ ವಿಭಾಗದಲ್ಲಿ ವಿಚಾರಿಸಬಹುದು. 

ವಿಶೇಷ ಪೂಜೆಗಳಿಗೆ ಮುಂಗಡವಾಗಿ ಕಾಯಿದಿರಿಸಲು ನಮಗೆ ಸಂಪರ್ಕಿಸಿ ಅಥವಾ ಕರೆ ಮಾಡಿ.

ಫೋನ್:+91-8255-266211, 266 282

ಮೊಬೈಲ್: +91 9448 177 811

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top