+91 8255-266211
info@shreeodiyoor.org

“ಉಗ್ರರ ಧಮನಕ್ಕೆ ಯೋಧರಿಗೆ ಭಗವಂತ ಭೀಮಬಲ ಕರುಣಿಸಲಿ” -ಒಡಿಯೂರು ಶ್ರೀ

 

 

“ಜೀವನ ರಥ ಸಾಗಲು ಧರ್ಮದ ಪಥ ಅಗತ್ಯ. ಕಷ್ಟಗಳನ್ನು ಸಮಸ್ಯೆಗಳನ್ನು ಮೆಟ್ಟಿಲುಗಳನ್ನಾಗಿಸಿ ಮುನ್ನಡೆಯಬೇಕು. ದೇಹ ಎನ್ನುವ ರಥವನ್ನು ಮನಸ್ಸೆಂಬ ಹಗ್ಗದಿಂದ ಕಟ್ಟಿ, ಬುದ್ಧಿ ಎಂಬ ಸಾರಥಿಯ ಕೈಗೆ ನೀಡಿದಾಗ ಬದುಕು ಸುಸೂತ್ರವಾಗುತ್ತದೆ. ಯೋಧರ ಹತ್ಯೆಯನ್ನು ನಾವು ಖಂಡಿಸುವುದರ ಜೊತೆಗೆ ಇದಕ್ಕೆ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು. ಉಗ್ರರಿಗೆ ಯಾವತ್ತೂ ಭಗವಂತನ ಅನುಗ್ರಹವಿರುವುದಿಲ್ಲ. ಯೋಧರಿಗೆ ಸಾಂತ್ವನ ಹೇಳುವ ಕಾರ್ಯವನ್ನು ಸಮಾಜ ಮಾಡಬೇಕು. ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭೀಮಬಲ ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಆತ್ರೇಯ ಮಂಟಪದಲ್ಲಿ ನಡೆದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2019ರ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.

ವೇದಿಕೆಯಲ್ಲಿ ಪರಮಪೂಜ್ಯ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿಯವರು ಆಶೀರ್ವಚನಗೈದು “ನಂಬಿಕೆಯೇ ಸಂಪತ್ತಿನ ಮೂಲ. ಸಂತರು ಇರುವಲ್ಲಿ ಆನಂದ ತುಂಬಿರುತ್ತದೆ. ಸಮಷ್ಟಿಯ ಉದ್ಧಾರವೇ ಶ್ರೀ ಗುರುಗಳ ಆಶಯ. ಯೋಧರಿಗೆ ದುರ್ಗಾಶಕ್ತಿ ಆವಾಹಹನೆಯಾಗಲಿ” ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ “ಒಡಿಯೂರು ಗ್ರಾಮವಿಕಾಸ ಯೋಜನೆ ನೂರಾರು ಸೇವಾ ಕಾರ್ಯಗಳನ್ನು ಆಯೋಜಿಸಿದುದು ಪ್ರಶಂಸನೀಯ. ಶ್ರೀ ಸಂಸ್ಥಾನಕ್ಕೆ ಆಗಮಿಸುವ ರಸ್ತೆಯ ವಿಸ್ತರಣೆ ಕಾರ್ಯಗಳಿಗೆ ಸರಕಾರದ ವತಿಯಿಂದ ಅನುದಾನ ತರಲು ಪ್ರಯತ್ನಿಸುತ್ತೇನೆ” ಎಂದು ಭರವಸೆಯಿತ್ತರು.

ವಿಶಾಖಪಟ್ಟಣದ ಆದಾಯ ತೆರಿಗೆ ಇಲಾಖೆ ಕಮಿಶನರ್ ಶ್ರೀ ಟಿ.ಎನ್.ಎಸ್. ಮೂರ್ತಿ ದಂಪತಿ, ಮೈಸೂರು ಪೊಲೀಸ್ ತರಬೇತಿಯ ಶಾಲೆಯ ಪ್ರಾಂಶುಪಾಲೆ, ಪೊಲೀಸ್ ವರಿಷ್ಠಾಧಿಕಾರಿ ಡಾ. ಧರಣಿದೇವಿ ಮಾಲಗತ್ತಿ, ಮುಂಬೈನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಶ್ರೀ ವಿಶ್ವನಾಥ ಶೆಟ್ಟಿ ಕರ್ನಿರೆ ಇವರು ಶುಭಹಾರೈಸಿದರು.

ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ|ಎಂ.ಜೆ.ಎಫ್.| ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಪುಣೆ ಘಟಕದ ಮಾಜಿ ಅಧ್ಯಕ್ಷ ಶ್ರೀ ಉಷಾಕುಮಾರ್ ಶೆಟ್ಟಿ, ದಾವಣಗೆರೆ ಘಟಕದ ಅಧ್ಯಕ್ಷ ಶ್ರೀ ಸಿದ್ದರಾಮಪ್ಪ, ತಿರುವನಂತಪುರ ಘಟಕದ ಶ್ರೀ ಅಜಿತ್ ಕುಮಾರ್ ಪಂದಳಮ್, ಹೂವಿನಹಡಗಲಿ ಘಟಕದ ಶ್ರೀ ನೀಲಕಂಠಪ್ಪ, ನೆಟ್ಲಮುಡ್ನೂರು ಘಟಕದ ಶ್ರೀ ವೆಂಕಪ್ಪ ರೈ ಕುರ್ಲೆತ್ತಿಮಾರ್, ಮಂಗಳೂರು ವಲಯದ ಶ್ರೀ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ದಾವಣಗೆರೆ ಘಟಕದ ಶ್ರೀಮತಿ ಸುಮಾ ರಾಜಶೇಖರ್, ಪುತ್ತೂರು ಘಟಕದ ಶ್ರೀಮತಿ ನಯನಾ ರೈ ಉಪಸ್ಥಿತರಿದ್ದರು.

ಕು| ನಿತ್ಯಶ್ರೀ ಎಸ್.ರೈ ಆಶಯಗೀತೆ ಹಾಡಿದರು. ಹಿರಿಯ ಪತ್ರಕರ್ತ ಶ್ರೀ ಯಶವಂತ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಫಲಾನುಭವಿಗಳ ಪಟ್ಟಿ ವಾಚಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ವೈಷ್ಣವಿ ನಾಟ್ಯಾಲಯ ಪುತ್ತೂರು ಇವರಿಂದ ‘ನೃತ್ಯಾರ್ಪಣಂ’ ಪ್ರದರ್ಶನಗೊಂಡಿತು. ಬಳಿಕ ದ.ಕ. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ಮಾಯಕದ ಬಿನ್ನೆದಿ’ ಎಂಬ ತುಳು ಯಕ್ಷಗಾನ ತಾಳಮದ್ದಳೆ ಬಹಳ ಸುಂದರವಾಗಿ ಮೂಡಿಬಂತು.

ರಾತ್ರಿ ರಂಗಪೂಜೆಯ ಬಳಿಕ ಶ್ರೀ ದತ್ತಂಜನೇಯ ದೇವರ ರಥೋತ್ಸವವು ಚೆಂಡೆಮೇಳ, ಚಿಂಗಾರಿಮೇಳ, ತಾಲೀಮು ಪ್ರದರ್ಶನ, ಕೀಲುಬೊಂಬೆ ಕುಣಿತ, ವಿವಿಧ ಜನಾಕರ್ಷಕ ಸ್ತಬ್ಧಚಿತ್ರಗಳು, ಭಜನೆ, ಸಿಡಿಮದ್ದಿನ ಪ್ರದರ್ಶನದೊಂದಿಗೆ ವೈಭವೋಪೇತವಾಗಿ ಸಂಪನ್ನಗೊಂಡಿತು.

ಕನ್ಯಾನದಲ್ಲಿ ಶ್ರೀ ಶ್ರೀಧರ ಶೆಟ್ಟಿ ಗುಬ್ಯಗುತ್ತು ಇವರ ಪ್ರಾಯೋಜಕತ್ವದಲ್ಲಿ ತುಳುನಾಟಕ, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ನೇತೃತ್ವದಲ್ಲಿ ರಸಮಂಜರಿ, ಹಾಗೂ ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿಯ ಸಂಯೋಜನೆಯಲ್ಲಿ ಭಕ್ತಿ ಸಿಂಚನ ಕಾರ್ಯಕ್ರಮವು ನಡೆಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top