+91 8255-266211
info@shreeodiyoor.org

“ಸಂಸ್ಕೃತಿ ಹರಿಯುವಂತದ್ದು ಜ್ಞಾನ ಬೆಳಗುವಂತದ್ದು” -ಒಡಿಯೂರು ಶ್ರೀ

ಪೈವಳಿಕೆ ಮಾ.28: “ಅಶುದ್ಧವಿದ್ದರೆ ಶುದ್ಧವು ಬೆಳಕಿಗೆ ಬರುವುದು, ಬೆಳಕಿನ ಬೆರಗು ಭಾರತವನ್ನು ಬೆಳಗಲಿ, ಹಣದ ಪ್ರೀತಿಗಿಂತ ಜನರ ಪ್ರೀತಿ ಶಾಶ್ವತ, ಭಜನೆಯಿಂದ ಸಂಸ್ಕಾರ ಇದು ಮನೆಯನ್ನು ಬೆಳಗಲು ಸಾಧ್ಯ. ಹನುಮಾನ್ ಚಾಲೀಸ ಮನಸ್ಸನ್ನು ಬೆಳಗಿಸುತ್ತದೆ, ಮಾತ್ರವಲ್ಲ ಮನಸ್ಸಿನ ಅಂಧಕಾರವನ್ನು ದೂರ ಮಾಡುವುದು. ಇಂದ್ರಿಯ ಗೋಚರ ಬದುಕಿಗಿಂತ ತ್ಯಾಗದ ಬದುಕು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು” ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪಂಚಲಿಂಗೇಶ್ವರ ದೇವಸ್ಥಾನ ಬಾಯಾರಿನಲ್ಲಿ ಆಯೋಜಿಸಿದ ಷಷ್ಠ್ಯಬ್ದ ಸಂಭ್ರಮ ಸಮಿತಿ ಪೈವಳಿಕೆ ಘಟಕದ ಸರಣಿ […]

Read More

ಮಂಗಳಾದೇವಿ: ಒಡಿಯೂರು ಶ್ರೀ ಷಷ್ಠ್ಯಬ್ದ ಸಪ್ತಕಾರ್ಯಕ್ರಮ ಉದ್ಘಾಟನೆ

ಮಂಗಳೂರು ಮಾ.26 : “ಬದುಕಿನ ಅತೀ ದೊಡ್ಡ ಸಂಪತ್ತು ಸಂತೃಪ್ತಿ. ಇದು ಆತ್ಮಜ್ಞಾನದಿಂದ ಲಭಿಸುತ್ತದೆ. ಆತ್ಮಜ್ಞಾನದ ಮೂಲ ಆಧ್ಯಾತ್ಮ. ಆಧ್ಯಾತ್ಮ ನೆಲೆಯಲ್ಲಿ ಬದುಕು ಕಟ್ಟಿದಾಗ ಸಾರ್ಥಕ್ಯ ಪಡೆಯುತ್ತದೆ” ಎಂದು ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮಂಗಳೂರು ವಲಯ ಸಮಿತಿಯಿಂದ ನಗರದ ಮಂಗಳಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಪ್ತ ಕಾರ್ಯಕ್ರಮಗಳಾದ ಆರೋಗ್ಯ, ಭರತನಾಟ್ಯ, ಸಂಗೀತ, ಯಕ್ಷಗಾನ, ತುಳಸಿ ಸೇವೆ, ಮನೆಗೊಂದು ಗಂಧದ ಮರ ಚಾಲನೆ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು […]

Read More

‘ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ’ – ಒಡಿಯೂರು ಶ್ರೀಗಳು

ತಲೇಕಳ, ಮಾ.24: “ಯೌವನದ ಸಮಯದಲ್ಲಿ ಒಳ್ಳೆಯ ಸಂಸ್ಕಾರ ಸಿಕ್ಕಿದಾಗ ಸುಭದ್ರ ದೇಶ ಕಟ್ಟಬಹುದು. ಭಜನೆಯಿಂದ ಪ್ರೀತಿ ಭಾವ ಮೂಡಿಬರಲು ಸಾಧ್ಯ. ಕ್ಷಣ ಕ್ಷಣದಲ್ಲಿ ಶಿಕ್ಷಣವನ್ನು ನೀಡಿದಾಗ ಸಮಾಜ ಉತ್ತಮವಾಗಿ ಮೂಡಿ ಬರುತ್ತದೆ, ಉತ್ತಮ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದು ತಲೇಕಳದಲ್ಲಿ ಆಯೋಜಿಸಿದ ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಭಜನೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಚಾಲನೆ ನೀಡಿ ಆಶೀರ್ವಚನ ಮಾಡಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಸಾಮೂಹಿಕ ಹನುಮಾನ್ ಚಾಲೀಸವನ್ನು ಪಠಿಸಿ ಆಶೀರ್ವಚನ ನೀಡಿದರು. […]

Read More

ಒಡಿಯೂರು ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ| ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. 

Read More

ರಾಮಮಂದಿರ ಶಿಲಾನ್ಯಾಸದ ಸವಿನೆನಪಿಗೆ ಒಡಿಯೂರು ಶ್ರೀಗಳವರಿಂದ ಕದಂಬವನಕ್ಕೆ ಚಾಲನೆ

  ಕೋಟಿ ಕೋಟಿ ಭಾರತೀಯರ ಕನಸಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಸಂಪನ್ನಗೊಳ್ಳುತ್ತಿರುವ ಐತಿಹಾಸಿಕ ಸುಮುಹೂರ್ತದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು “ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ, ಈ ಐತಿಹಾಸಿಕ ದಿನದ ಸವಿನೆನಪಿಗಾಗಿ ಒಡಿಯೂರು ಶ್ರೀ ಸಂಸ್ಥಾನದ ಪರಿಸರದಲ್ಲಿ ‘ಕದಂಬವನ’ವನ್ನು ನಿರ್ಮಿಸಲು ಚಾಲನೆ ನೀಡಿ, ಪ್ರಕೃತಿ ಸಂರಕ್ಷಣೆಯ ಸಂಕಲ್ಪ ಮಾಡಿ” ಅನುಗ್ರಹ ಸಂದೇಶವಿತ್ತರು. ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ […]

Read More

ಧಾರ್ಮಿಕ ಆಚರಣೆಗಳು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುತ್ತದೆ – ಒಡಿಯೂರು ಶ್ರೀ

“ಸಂಪತ್ತು ಎಂದರೆ ಹಣ ಮಾತ್ರವಲ್ಲ. ಇದರಲ್ಲಿ ಅಷ್ಟ ಐಶ್ವರ್ಯಗಳು ಸೇರಿವೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ. ಸಂಪತ್ತನ್ನು ಹೇಗೆ ಬಳಸಬೇಕೆಂಬುದನ್ನು ಅಧ್ಯಾತ್ಮಿಕತೆ ತಿಳಿಸುತ್ತದೆ. ಧರ್ಮಪ್ರಜ್ಞೆಯ ಸಂಪತ್ತಿನೊಂದಿಗೆ ಜ್ಞಾನವೂ ನಮ್ಮಲ್ಲಿ ಇರಬೇಕು. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾ ಶಕ್ತಿಗಳು ಸೇರಿಕೊಂಡಾಗ ಜೀವನಮೌಲ್ಯ ವೃದ್ಧಿಸುತ್ತದೆ. ಶ್ರಾವಣ ಮಾಸದ ಮೊದಲ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯನ್ನು ಆಚರಿಸುವುದು ವಾಡಿಕೆ. ಇಂತಹ ಆಚರಣೆಗಳು ರಾಷ್ಟ್ರೀಯ ಭಾವನೆಯನ್ನು ಮೂಡಿಸುತ್ತದೆ. ಸಮುದ್ರ ಮಥನದಿಂದ ವಿಷ-ಅಮೃತ ಇತ್ಯಾದಿ ದೊರೆತಂತೆ ಬದುಕಿನ ಮಂಥನದಿಂದ ಸುಖ-ದುಃಖಗಳು ಪ್ರಾಪ್ತವಾಗುತ್ತವೆ. ತಾನೂ ಬದುಕಿ ಇತರರನ್ನು ಬದುಕಬಿಡುವುದೇ […]

Read More

ಒಡಿಯೂರು ಶ್ರೀ ಸಂಸ್ಥಾನದ ಪ್ರಕಟಣೆ

ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವವನ್ನು (ಜುಲೈ 17, 2020) ಗುರುಬಂಧುಗಳು ಮನೆ-ಮನಗಳಲ್ಲಿ ಗುರುವಂದನೆಯನ್ನು ನಡೆಸುವ ಮೂಲಕ ಪೂಜ್ಯ ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಪ್ರಕಟಣೆ ನೀಡಿದೆ. ಗುರುಬಂಧುಗಳು ತಮ್ಮ ಆರೋಗ್ಯವನ್ನು ಕಾಯ್ದುಕೊಂಡು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪೂಜ್ಯ ಶ್ರೀಗಳವರು ಕರೆ ನೀಡಿದ್ದಾರೆ. ಮಹಾಮಾರಿಯ ಬಗ್ಗೆ ಭಯ ಪಡದೆ ನಿರ್ಭೀತರಾಗಿ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸರಕಾರದ ನಿಯಮಗಳಿಗೆ ಬದ್ಧರಾಗಿ ತಾನು ಬದುಕಿ ಇತರರನ್ನು ಬದುಕಬಿಡೋಣ […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜೂ.22ರಿಂದ ದೇವರ ದರ್ಶನ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ತಾ.22-06-2020ರಿಂದ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ ಘಂಟೆ 10ರಿಂದ 12ರ ತನಕ ಅಂತರವನ್ನು ಕಾಯ್ದುಕೊಂಡು ಪೂಜ್ಯ ಶ್ರೀಗಳವರ ಭೇಟಿಗೆ ಅವಕಾಶವಿದೆ. ಪ್ರವೇಶಕ್ಕೆ ಮಾಸ್ಕ್ ಧಾರಣೆ, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಸ್ವಚ್ಛತೆ ಕಡ್ಡಾಯ. ಹೆಚ್ಚಿನ ಮಾಹಿತಿಗೆ 08255-266211/298282/9448177811 ಸಂಪರ್ಕಿಸಬಹುದು.

Read More

ಪಾಲ್ಗರ್ ಸಂತರ ಹತ್ಯೆಗೆ ಒಡಿಯೂರು ಶ್ರೀಗಳ ಖಂಡನೆ:

ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ ಅಮಾನುಷವಾಗಿ ಈರ್ವರು ಸಂತರ ಹತ್ಯೆ ನಡೆದಿರುವುದು ಖಂಡನೀಯ. ಭಾರತ ದೇಶದ ಮೌಲ್ಯವೆಂದರೆ ಸಾಧು-ಸಂತರು. ಸದುದ್ದೇಶಕ್ಕಾಗಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದು ದುಃಖಕರ. ಸಂತರ ಹತ್ಯೆ ಎಂದರೆ ಸಂಸ್ಕೃತಿಯ ಹತ್ಯೆಯಂತೆ. ಬದುಕಿ-ಬದುಕಬಿಡುವ ಸಂತರ ಬದುಕನ್ನೇ ಕಸಿದುಕೊಳ್ಳುವುದು ಉಚಿತವಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇಂತಹ ಕೃತ್ಯಗೈದ ದುಷ್ಟರಿಗೆ ಕೂಡಲೇ ಕಠಿಣ ಶಿಕ್ಷೆಯಾಗಬೇಕು. ಸಾಧು-ಸಂತರು ಎಚ್ಚೆತ್ತುಕೊಂಡು ಇದರ ಬಗ್ಗೆ ಕೂಡಲೇ ಗಮನಹರಿಸಬೇಕು. ಸರಕಾರವು ಕೂಲಂಕುಷವಾಗಿ ತನಿಖೆ ನಡೆಸಿ ನ್ಯಾಯ ದೊರಕಿಸಬೇಕಾಗಿ ವಿನಂತಿಸುತ್ತೇವೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top