+91 8255-266211
info@shreeodiyoor.org

‘ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ’ – ಒಡಿಯೂರು ಶ್ರೀಗಳು

ತಲೇಕಳ, ಮಾ.24: “ಯೌವನದ ಸಮಯದಲ್ಲಿ ಒಳ್ಳೆಯ ಸಂಸ್ಕಾರ ಸಿಕ್ಕಿದಾಗ ಸುಭದ್ರ ದೇಶ ಕಟ್ಟಬಹುದು. ಭಜನೆಯಿಂದ ಪ್ರೀತಿ ಭಾವ ಮೂಡಿಬರಲು ಸಾಧ್ಯ. ಕ್ಷಣ ಕ್ಷಣದಲ್ಲಿ ಶಿಕ್ಷಣವನ್ನು ನೀಡಿದಾಗ ಸಮಾಜ ಉತ್ತಮವಾಗಿ ಮೂಡಿ ಬರುತ್ತದೆ, ಉತ್ತಮ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ” ಎಂದು ತಲೇಕಳದಲ್ಲಿ ಆಯೋಜಿಸಿದ ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮದ ಭಜನೆ ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಚಾಲನೆ ನೀಡಿ ಆಶೀರ್ವಚನ ಮಾಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಸಾಮೂಹಿಕ ಹನುಮಾನ್ ಚಾಲೀಸವನ್ನು ಪಠಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ಮೀಂಜ ಪಂಚಾಯಿತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಕೆ. ಶೆಟ್ಟಿ ಕಡಂಬಾರು, ಹಿರಿಯ ಕೃಷಿಕ ಶ್ರೀ ಮಾರಪ್ಪ ಭಂಡಾರಿ ಕೌಡೂರು ಬೀಡು ಕಾರ್ಮಿಕ ಶ್ರೀ ತನಿಯಪ್ಪ ಶೆಟ್ಟಿಗಾರ, ಭಜಕರಾದ ಶ್ರೀ ಸದಾಶಿವ ಮಡಿವಾಳ ಹನಿಮಾನ್ ಚಾಲೀಸು ನಿತ್ಯ ಪಠಣಕಾರರಾದ ಕು. ಪ್ರೇರಣಾ ರೈ ಶಿಕ್ಷಣ ಸೇವಾಕೃತ ಶ್ರೀ ಶ್ರೀಧರ ರಾವ್ ಆರ್.ಎಂ. ಮೀಯಪದವು, ಕಳೆದ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಪಡೆದ ಕು. ಮಿಥಿಲಾ ಶೆಟ್ಟಿ, ರಸಪ್ರಶ್ನೆ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆÀ ಕು.ಸಂಭ್ರಮ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಶ್ರೀ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿ ಕೋಶಾಧಿಕಾರಿ ಶ್ರೀ ಸುರೇಶ್ ರೈ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮೀಂಜ ಸಮಿತಿ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ, ತೊಟ್ಟೆತ್ತೋಡಿ ವಲಯ ಉಪಾಧ್ಯಕ್ಷ ಶ್ರೀ ಸತೀಶ್ ಅಡಪ ಸಂಕಬೈಲು ಉಪಸ್ಥಿತರಿದ್ದರು.
ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ನೇತೃತ್ವದಲ್ಲಿ ಮದಂಗಲ್ಲು ಶ್ರೀ ಮಹಾಗಣಪತಿ ಭಜನಾ ಮಂಡಳಿ, ಕಡಂಬಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಇವರಿಂದ ಭಜನೆ ಜರಗಿತು. ತಲೇಕಳ ತರವಾಡು ಶ್ರೀ ರವಿಶಂಕರ್ ಶೆಟ್ಟಿ ಸ್ವಾಗತಿಸಿದರು. ಪುಷ್ಪರಾಜ್ ಶೆಟ್ಟಿ ತಲೇಕಳ ಸಮ್ಮಾನಿತರನ್ನು ಪರಿಚಯಿಸಿದರು. ಶ್ರೀ ಸುಬ್ಬಣ್ಣ ಭಂಡಾರಿ ತಲೇಕಳ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top