+91 8255-266211
info@shreeodiyoor.org

ಮಂಗಳಾದೇವಿ: ಒಡಿಯೂರು ಶ್ರೀ ಷಷ್ಠ್ಯಬ್ದ ಸಪ್ತಕಾರ್ಯಕ್ರಮ ಉದ್ಘಾಟನೆ

ಮಂಗಳೂರು ಮಾ.26 : “ಬದುಕಿನ ಅತೀ ದೊಡ್ಡ ಸಂಪತ್ತು ಸಂತೃಪ್ತಿ. ಇದು ಆತ್ಮಜ್ಞಾನದಿಂದ ಲಭಿಸುತ್ತದೆ. ಆತ್ಮಜ್ಞಾನದ ಮೂಲ ಆಧ್ಯಾತ್ಮ. ಆಧ್ಯಾತ್ಮ ನೆಲೆಯಲ್ಲಿ ಬದುಕು ಕಟ್ಟಿದಾಗ ಸಾರ್ಥಕ್ಯ ಪಡೆಯುತ್ತದೆ” ಎಂದು ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮಂಗಳೂರು ವಲಯ ಸಮಿತಿಯಿಂದ ನಗರದ ಮಂಗಳಾದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಪ್ತ ಕಾರ್ಯಕ್ರಮಗಳಾದ ಆರೋಗ್ಯ, ಭರತನಾಟ್ಯ, ಸಂಗೀತ, ಯಕ್ಷಗಾನ, ತುಳಸಿ ಸೇವೆ, ಮನೆಗೊಂದು ಗಂಧದ ಮರ ಚಾಲನೆ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ “ಸಂತರ ಬಯಕೆ ಸಮಾಜದ ಹಿತವಾಗಿರುತ್ತದೆ. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಮೂಲಕ ಹಲವಾರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.
ಒಡಿಯೂರು ಶ್ರೀ ಸಾಧ್ವಿ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು. ಶ್ರೀ ಕ್ಷೇತ್ರ ಮಂಗಳಾದೇವಿಯ ಆಡಳಿತ ಮೊಕ್ತೇಸರ ಶ್ರೀ ರಮಾನಾಥ ಹೆಗ್ಡೆ, ಸಂಸ್ಕಾರ ಭಾರತಿ ಅಡ್ಯಾರ್ ಶ್ರೀ ಪುರುಷೋತ್ತಮ ಭಂಡಾರಿ, ಉದ್ಯಮಿ ಶ್ರೀ ಅಶೋಕ್ ಕುಮಾರ್, ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಪದಾಧಿಕಾರಿಗಳಾದ ಶ್ರೀ ಬೋಳಾರ ತಾರಾನಾಥ ಶೆಟ್ಟಿ, ಶ್ರೀ ಪುರುಷೋತ್ತಮ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ, ಶ್ರೀ ನಾಗರಾಜ ಆಚಾರ್ಯ, ಶ್ರೀ ಸುರೇಶ್ ಶೆಟ್ಟಿ, ಶ್ರೀ ದಿನೇಶ್ ಎಂ.ಪಿ. ಉಪಸ್ಥಿತರಿದ್ದರು. ಸಾಧಕರಾದ ಶ್ರೀಮತಿ ಪ್ರೇಮಲತಾ ಆಚಾರ್ಯ, ಶ್ರೀ ಲೋಕಯ್ಯ ಶೆಟ್ಟಿ ಹಾಗೂ ಶ್ರೀ ಕುಂಬಯ್ಯ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಲಯ ಸಮಿತಿಯ ಅಧ್ಯಕ್ಷ ಶ್ರೀ ಪುಷ್ಪರಾಜ ಜೈನ್ ಸ್ವಾಗತಿಸಿದರು, ಕಾರ್ಯಾಧ್ಯಕ್ಷ ಶ್ರೀ ಜಿತೇಂದ್ರ ಕೊಟ್ಟಾರಿ ಪ್ರಸ್ತಾವನೆಗೈದರು. ಸಂಚಾಲಕ ಶ್ರೀ ಪ್ರದೀಪ್ ಆಳ್ವ ವಂದಿಸಿದರು, ಶ್ರೀ ಕದ್ರಿ ನವನೀತ್ ಶೆಟ್ಟಿ ನಿರೂಪಿಸಿದರು.
ಶ್ರೀಧರ ಹೊಳ್ಳ ನಿರ್ದೇಶನದಲ್ಲಿ ನೃತ್ಯ ಸೌಂದರ್ಯ, ಯಕ್ಷಾಂಗಣ ಮಂಗಳೂರು ಸಂಯೋಜನೆಯಲ್ಲಿ ‘ಶ್ರೀರಾಮ ಹನುಮ ತಾಳಮದ್ದಳೆ’ ಜರುಗಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top