+91 8255-266211
info@shreeodiyoor.org

“ಸಂಸ್ಕೃತಿ ಹರಿಯುವಂತದ್ದು ಜ್ಞಾನ ಬೆಳಗುವಂತದ್ದು” -ಒಡಿಯೂರು ಶ್ರೀ

ಪೈವಳಿಕೆ ಮಾ.28: “ಅಶುದ್ಧವಿದ್ದರೆ ಶುದ್ಧವು ಬೆಳಕಿಗೆ ಬರುವುದು, ಬೆಳಕಿನ ಬೆರಗು ಭಾರತವನ್ನು ಬೆಳಗಲಿ, ಹಣದ ಪ್ರೀತಿಗಿಂತ ಜನರ ಪ್ರೀತಿ ಶಾಶ್ವತ, ಭಜನೆಯಿಂದ ಸಂಸ್ಕಾರ ಇದು ಮನೆಯನ್ನು ಬೆಳಗಲು ಸಾಧ್ಯ. ಹನುಮಾನ್ ಚಾಲೀಸ ಮನಸ್ಸನ್ನು ಬೆಳಗಿಸುತ್ತದೆ, ಮಾತ್ರವಲ್ಲ ಮನಸ್ಸಿನ ಅಂಧಕಾರವನ್ನು ದೂರ ಮಾಡುವುದು. ಇಂದ್ರಿಯ ಗೋಚರ ಬದುಕಿಗಿಂತ ತ್ಯಾಗದ ಬದುಕು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು” ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪಂಚಲಿಂಗೇಶ್ವರ ದೇವಸ್ಥಾನ ಬಾಯಾರಿನಲ್ಲಿ ಆಯೋಜಿಸಿದ ಷಷ್ಠ್ಯಬ್ದ ಸಂಭ್ರಮ ಸಮಿತಿ ಪೈವಳಿಕೆ ಘಟಕದ ಸರಣಿ ಕಾರ್ಯಕ್ರಮದ ಶುಭಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಮಾಣಿಲ ಶ್ರೀಧಾಮದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮನೆ ಮನೆಯ ಭಜನೆಗೆ, ಕುಣಿತ ಭಜನೆಗೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಹನುಮಾನ್ ಚಾಲೀಸಾ ಪಠಿಸಿದರು. ಬದಿಯಾರಿನಿಂದ ಪೈವಳಿಕೆ ಪಂಚಾಯತಿನ ವಿವಿಧ ಭಜನಾ ಮಂಡಳಿಗಳ ಭಜನಾ ಮೆರವಣಿಗೆ ನಡೆಯಿತು. ವಿವೇಕಾನಂದ ಸಾಂಸ್ಕøತಿಕ ಕೇಂದ್ರ ಬೆರಿಪದವು ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ಜರಗಿತು.
ಸಭೆಯಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟಿ,್ಟ ಕದ್ರಿ ಮಂಜೇಶ್ವರ ವಲಯ ಸಮಿತಿಯ ಗೌರವಾಧ್ಯಕ್ಷ ಶ್ರೀ ಶ್ರೀಧರ ಭಟ್ ಉಪ್ಪಳ, ಅಧ್ಯಕ್ಷ ಶ್ರೀ ಶಶಿಧರ ಶೆಟ್ಟಿ ಜಮ್ಮದ ಮನೆ, ಪ್ರಧಾನ ಕಾರ್ಯದರ್ಶಿ ಶ್ರೀ ಅರವಿಂದಾಕ್ಷ ಭಂಡಾರಿ, ಪೈವಳಿಕೆ ಪಂಚಾಯತಿ ಗೌರವಾಧ್ಯಕ್ಷ ಶ್ರೀ ಗಣಪತಿ ಭಟ್ ಆವಳ ಮಠ, ಗೌರವ ನಿರ್ದೇಶಕ ಶ್ರೀ ವೆಂಕಟೇಶ್ ಭಟ್ ಹಿರಣ್ಯ, ಅಧ್ಯಕ್ಷ ಶ್ರೀ ಕಿಶೋರ ನಾೈಕ್, ಶ್ರೀ ರಾಮಕೃಷ್ಣ ಭಟ್ ಪೆರ್ವೊಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಶೇಖರ ಶೆಟ್ಟಿ ಬದಿಯಾರು ಸ್ವಾಗತಿಸಿ ಶ್ರೀ ಲೋಹಿತ್ ಭಂಡಾರಿ ಕುರಿಯ ಗುತ್ತು ವಂದಿಸಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಬಲ್ಲಾಳ್ ಚಿಪ್ಪಾರು ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top