+91 8255-266211
info@shreeodiyoor.org

‘ತುಳು ಬದ್ಕ್‍ದ ನಿಲೆ-ಬಿಲೆ’ – 19ನೇ ತುಳು ಸಾಹಿತ್ಯ ಸಮ್ಮೇಳನ

“ಸಮಾಜ ಕಟ್ಟುವ ಸಾಹಿತ್ಯ ನಿರ್ಮಾಣವಾಗಬೇಕು. ಧರ್ಮಗ್ರಂಥಗಳನ್ನು ಸುಡಬೇಕು ಎನ್ನುತ್ತಾ ಸಮಾಜವನ್ನು ವಿಘಡನೆ ಮಾಡುವ ಕೆಲವು ಸಾಹಿತಿಗಳ ನಡೆ ಸರಿಯಲ್ಲ. ತುಳುನಾಡಿನಲ್ಲಿ ತುಳು ಭಾಷೆಯನ್ನು ಹುಡುಕುವ ಪರಿಸ್ಥಿತಿ ಸೃಷ್ಟಿಯಾಗಬಾರದು. ತುಳು ಭಾಷೆಯಲ್ಲಿ ಎಂಎ. ಪರೀಕ್ಷೆ ಬರೆಯುತ್ತಿರುವುದು, ತುಳುವಿನಲ್ಲೇ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ. ತುಳು ಭಾಷೆಯ ಸಂಪತ್ತನ್ನು ಅರ್ಥೈಸಿ ಉಳಿಸಿ-ಬೆಳೆಸುವ ಪ್ರಯತ್ನ ನಡೆಯಬೇಕು” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತುಳುನಾಡ್ದ ಜಾತ್ರೆ 2019 – ಶ್ರೀ ಒಡಿಯೂರು ರಥೋತ್ಸವದಂಗವಾಗಿ ಆಯೋಜಿಸಿದ್ದ ‘ತುಳು ಬದ್ಕ್‍ದ ನಿಲೆ-ಬಿಲೆ’ 19ನೇ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಸಂಶೋಧಕಿ ಡಾ. ಇಂದಿರಾ ಹೆಗ್ಡೆ ಅವರು ಮಾತನಾಡಿ “ಮಹಿಳೆಯರು ಓದಬೇಕು, ಬರೆಯಬೇಕು. ದೈವಾರಾಧನೆಯನ್ನು ಚಿತ್ರೀಕರಿಸಿ ಪಸರಿಸುವುದು ಸರಿಯಲ್ಲ. ಇದು ತುಳುನಾಡಿನ ಮಾನಹಾನಿಗೆ ಕಾರಣವಾಗುತ್ತದೆ. ವಿಶೇಷ ಆರ್ಥಿಕ ವಲಯ ತುಳುನಾಡಿನ ವಿನಾಶಕ್ಕೆ ಕಾರಣವಾಗಿದೆ” ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ ಮಾತನಾಡಿ “ತುಳು ಭಾಷೆಯಲ್ಲಿ 20ಮಂದಿ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದಾರೆ. 45 ಶಾಲೆಗಳಲ್ಲಿ ಕಲಿಸಲಾಗುತ್ತದೆ. 660 ವಿದ್ಯಾರ್ಥಿಗಳು ತುಳು ಭಾಷೆಯಲ್ಲಿ ಎಸೆಸ್ಸೆಲ್ಸಿ ಬರೆಯುತ್ತಿದ್ದಾರೆ. ಮುಂದಿನ ಸಾಲಿನಲ್ಲಿ ತುಳು ಭಾಷೆಯಲ್ಲಿ ಪದವಿ ಪಡೆಯುವುದಕ್ಕೆ ತುಳು ಅಕಾಡೆಮಿ ಅವಕಾಶ ನೀಡಲಿದೆ. ತುಳು ಭಾಷೆಯ ಅಭಿವೃದ್ಧಿಯು ಚಿಂತನೆ, ಅಭಿಮಾನ ಇಟ್ಟುಕೊಂಡು ನಿರಂತರ ಚಟುವಟಿಕೆಗಳನ್ನು ಒಡಿಯೂರಿನಲ್ಲಿ ನಡೆಸಲಾಗುತ್ತಿರುವುದು ಅಭಿನಂದನೀಯ ಎಂದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಶ್ರೀ ಸೀತಾರಾಮ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀ ಉಗ್ಗಪ್ಪ ಪೂಜಾರಿ ಬರೆದ ‘ಅಜ್ಜಿ ನಡ್ತಿನ ಗೋಳಿಮರ’ ಎಂಬ ಕೃತಿ ಹಾಗೂ ತುಳು ಪತ್ರಿಕೆ ‘ಪೂವರಿ’ಯ 56ನೇ ಸಂಚಿಕೆಯನ್ನು ಪೂಜ್ಯ ಶ್ರೀಗಳವರು ಬಿಡುಗಡೆಗೊಳಿಸಿದರು.

ಸಮ್ಮೇಳನದ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ ಪ್ರಸ್ತಾವನೆಗೈದರು. ತುಳುಕೂಟದ ಸ್ಥಾಪಕಾಧ್ಯಕ್ಷ ಶ್ರೀ ಮಲಾರು ಜಯರಾಮ ರೈ ಸ್ವಾಗತಿಸಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿ ಶ್ರೀ ವಿಶ್ವನಾಥ ಶೆಟ್ಟಿ ವಂದಿಸಿದರು. ಶ್ರೀ ಪ್ರದೀಪ್ ಆಳ್ವ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top