+91 8255-266211
info@shreeodiyoor.org

2014 – ವಿಜಯ ರಜತ ಸಂಭ್ರಮ

ಶ್ರೀ ಸಂಸ್ಥಾನದ ಬೆಳ್ಳಿ ಹಬ್ಬ ಸವಿನೆನಪಿಗಾಗಿ ತುಳುನಾಡಿನಾದ್ಯಂತ “ತುಳುನಾಡ್ದ ಜಾತ್ರೆ” ಬಲೇ…. ತೇರ್ ಒಯಿಪುಗ ಕಾರ್ಯಕ್ರಮವನ್ನು ಹಮ್ಮಿಕೊಂಡು ಪೂರ್ವ ಘಟ್ಟದ ತಪ್ಪಲಿನಿಂದ ಪಶ್ಚಿಮದ ಕಡಲತಡಿಯವರೆಗೆ, ದಕ್ಷಿಣದ ಚಂದ್ರಗಿರಿಯಿಂದ ಉತ್ತರದ ಬಾರ್ಕೂರ್‍ನ ವರೆಗೆ ಎಲ್ಲಾ ತುಳುವರನ್ನು ಒಗ್ಗೂಡಿಸಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ ದಿನಾಂಕ 05-01-2014 ರಂದು ನಡೆದ ತುಳುನಾಡ್ದ ಜಾತ್ರೆ ಕಾರ್ಯಕ್ರಮ ತುಳು ಭಾಷೆ ಸಂಸ್ಕøತಿ ಉದ್ವೀಪನಕ್ಕಾಗಿ ಯಶಸ್ವಿಯಾಗಿ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಿಂದ ಬರೆದ ಕೀರ್ತಿಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಗೆ ಸಲ್ಲಬೇಕು.

Read More

ಶ್ರೀ ಗುರುದೇವ ಕಲ್ಯಾಣ ಮಂಟಪ

ದೇವತಾರಾಧನೆಯೊಂದಿಗೆ ಸಾಮಾಜಿಕವಾಗಿ ಸ್ಪಂದಿಸುವ ಕೆಲಸ ಶ್ರೀ ಸಂಸ್ಥಾನದಲ್ಲಿ ನಡೆದು ಬಂದಿದೆ.  ಜನಸಾಮಾನ್ಯರಿಗೆ ಕೈಗೆಟಕುವ ಖರ್ಚು ವೆಚ್ಚದಲ್ಲಿ ವಿವಾಹ ಮೊದಲಾದ ಶುಭ ಸಮಾರಂಭ, ಧಾರ್ಮಿಕ – ಸಾಂಸ್ಕøತಿಕ ಕಾರ್ಯ ನಡೆಸುವ ಅನುಕೂಲ ಕಲ್ಪಿಸಿ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪ ನಿರ್ಮಿಸಲಾಯಿತು. ಸುಮಾರು ಒಂದು ಸಾವಿರ ಜನರು ಏಕಕಾಲಕ್ಕೆ ಒಟ್ಟಾಗಿ ಉಣ್ಣಬಹುದಾದ ಸ್ಥಳಾವಕಾಶದೊಂದಿಗೆ ಎಲ್ಲ್ಲ ವ್ಯವಸ್ಥೆಗಳೂ ಇಲ್ಲಿ ಇದೆ. ಇದರ ಪಕ್ಕದಲ್ಲೇ ಶ್ರೀ ನಿತ್ಯಾನಂದ ಮಂದಿರ ನಿರ್ಮಿಸಲಾಗಿದೆ.

Read More

ಗೋಪಾಲನೆ

ಪೂಜ್ಯಶ್ರೀಗಳ ಅನನ್ಯ ಗೋ ಪ್ರೀತಿಯ ಪ್ರತೀಕವಾಗಿ ಶ್ರೀ ಸಂಸ್ಥಾನದಲ್ಲಿ ವಿಸ್ತಾರವಾದ ಸುಸಜ್ಜಿತ ಗೋ ಶಾಲೆಯನ್ನು ನಿರ್ಮಿಸಲಾಗಿದೆ. ಗೋ ಸಂರಕ್ಷಣೆಯ ಮತ್ತು ಹೈನುಗಾರಿಕೆ ಕಾಳಜಿಯ ಪ್ರಾಮಾಣಿಕ ಪ್ರಯತ್ನದ ಹಿನ್ನೆಲೆಯಲ್ಲಿ ಶ್ರೀ ಸಂಸ್ಥಾನದಲ್ಲಿ ಗೋಪಾಲನೆ ಶ್ರದ್ದೆಯಿಂದ ನಡೆಯುತ್ತಿದೆ. ಸುಮಾರು 200ಕ್ಕೂ ಹೆಚ್ಚಿನ ಗೋ ಸಂಪತ್ತು ಶ್ರೀ ಸಂಸ್ಥಾನದಲ್ಲಿದೆ.

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top