+91 8255-266211
info@shreeodiyoor.org

ಉತ್ಸವಗಳು

ಹನುಮ ಜಯಂತಿ:

ಶ್ರೀರಾಮ ನವಮಿಯಿಂದ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭಗೊಂಡು ಶ್ರೀ ಸಂಸ್ಥಾನದ ಆರಾಧ್ಯಮೂರ್ತಿ ಹನುಮ ಜಯಂತಿಯಂದು ಸಮಾಪನಗೊಳ್ಳುವುದು. ಶ್ರೀಮದ್ರಾಮಾಯಣ ಯಜ್ಞ, ಧಾರ್ಮಿಕ ಗೋಷ್ಠಿ, ವಿಶೇಷ ವೈದಿಕ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿ ಸಂಪನ್ನಗೊಳ್ಳುವುದು.

ನಾಗರಪಂಚಮಿ :

ಶ್ರೀ ಸುಬ್ರಹ್ಮಣ್ಯ ದೇವರ ವಿಶೇಷ ಸಾನಿಧ್ಯವಿರುವ ಶ್ರೀ ಸಂಸ್ಥಾನದಲ್ಲಿ ನಾಗರಪಂಚಮಿಯಂದು ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ಜರಗುವುದು. ನಾಗದೋಷ ಪರಿಹಾರಕ್ಕೆ ಸಂಬಂಧಿಸಿದ ಸೇವೆ ಆರಾಧನೆಗಳು ಈ ಸಂದರ್ಭದಲ್ಲಿ ಶ್ರೀ ಸುಬ್ರಾಯ ದೇವರಿಗೆ ಸಲ್ಲಿಸುವುದು ವಿಶೇಷವಾಗಿದೆ.

ಲಲಿತಾಪಂಚಮಿ :

ನವರಾತ್ರಿಯ ಪರ್ವಕಾಲದಲ್ಲಿ ಪ್ರಸನ್ನಾತ್ಮಿಕೆಯಾದ ಶ್ರೀ ಲಲಿತಾಂಬಿಕೆ ಆರಾಧನೋತ್ಸವವಾಗಿ ಶ್ರೀ ಸಂಸ್ಥಾನದಲ್ಲಿ ಲಲಿತಾ ಪಂಚಮಿಯನ್ನು ಆಚರಿಸಲಾಗುತ್ತಿದೆ. ಶ್ರೀ ದೇವಿಗೆ ಪ್ರಿಯವಾದ ಶ್ರೀ ಚಂಡಿಕಾಯಾಗ, ಶ್ರೀ ಲಲಿತಾಸಹಸ್ರನಾಮ ಪಠನ, ಸಪ್ತಶತಿ ಪಾರಾಯಣ, ಅಷ್ಟಾವಧಾನ ಸೇವೆ ಮೊದಲಾದ ಉಪಾಸನೆಗಳು ಜರಗುವುದು.
ನವರಾತ್ರಿಯಲ್ಲಿ ಶ್ರೀ ಶಾರದಾದೇವಿಯ ಆರಾಧನೆ, ಸಾಮೂಹಿಕ ವಿದ್ಯಾರಂಭ, ಶ್ರೀ ಸರಸ್ವತಿ ಹವನ ಪೂಜ್ಯಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಜರಗುವುದು.

ದತ್ತ ಜಯಂತಿ :

ದತ್ತಜಯಂತಿ ಉತ್ಸವವು ಒಂದು ವಾರಗಳ ದತ್ತಮಹಾಯಾಗದೊಂದಿಗೆ ಜರಗುವುದು. ಗುರುಚರಿತ್ರೆ ಪಾರಾಯಣ, ‘ಸಪ್ತಾಹ ವಿಧಿ’ಯಂತೆ ದತ್ತಾರಾಧನೆ, ದತ್ತಮಾಲಾಧಾರಣೆ ನಡೆಯುವುದು. ಪೌರ್ಣಮಿಯ ದಿನ ಶ್ರೀ ದತ್ತ ಮಹಾಯಾಗ ಪೂರ್ಣಾಹುತಿಯಾದ ಬಳಿಕÀ ಪೂಜ್ಯ ಶ್ರೀಗಳವರಿಂದ ಮಧುಕರೀ ಸೇವೆ ಜರಗುವುದು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top