+91 8255-266211
info@shreeodiyoor.org

ರಥೋತ್ಸವ-ತುಳುನಾಡ್ದ ಜಾತ್ರೆ 2018

 

ದ್ವೇಷವೆಂಬ ಗಾಯಕ್ಕೆ ಪ್ರೀತಿ ಎಂಬ ಔಷಧಿ ಹಚ್ಚಿದಾಗ ಗಾಯ ವಾಸಿಯಾಗಬಹುದು. ಧರ್ಮವೆಂಬ ವೃಕ್ಷದಡಿಯಲ್ಲಿ ನಾವು ಇವೆಲ್ಲವನ್ನು ಕಲಿಯಲು ಸಾಧ್ಯ. ಪ್ರತಿಯೊಂದು ಕಾರ್ಯಕ್ಕೆ ಧರ್ಮದ ತಳಪಾಯ ಬೇಕು. ಧರ್ಮಾನುಷ್ಠಾನವಾದರೆ ದೇಶದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಜೀವನ ರಥವನ್ನು ಎಳೆಯಲು ಧರ್ಮಮಾರ್ಗದ ಅಗತ್ಯವಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2018 ಧರ್ಮಸಭೆಯನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಆಶೀರ್ವಚನಗೈದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಮಾತನಾಡಿ ಅಧ್ಯಾತ್ಮದ ಪ್ರೇಮ ಪ್ರತಿಯೊಬ್ಬರೂ ಹುಟ್ಟಬೇಕು. ಆರ್ಥಿಕತೆಯೊಂದಿಗೆ ಪಾರಮಾರ್ಥಿಕತೆಯನ್ನು ಬೆಳೆಸಿಕೊಳ್ಳಬೇಕೆನ್ನುವ ಸದುದ್ದೇಶದಿಂದ ಪೂಜ್ಯ ಶ್ರೀಗಳವರು ಗ್ರಾಮವಿಕಾಸ ಯೋಜನೆಗೆ ಚಾಲನೆ ನೀಡಿದರು. ಸಂತೃಪ್ತ ಜೀವನದಿಂದ ಸಂತೋಷ ಲಭಿಸುತ್ತದೆ. ಧರ್ಮದ ನೆಲೆಯಿಂದ ಸಾಗಿದಾಗ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ಎಂದು ಆಶೀರ್ವಚನಗೈದರು.

ಕರ್ನಾಟಕ ರಾಜ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಶ್ ಬಿ.ಅಡಿ ಯವರು ಆರ್ಥಿಕ ನೆರವು ಹಸ್ತಾಂತರಿಸಿ ಮಾತನಾಡಿ ಮಾನವೀಯತೆ ಎಂಬ ವಿಚಾರ ತುಳುನಾಡಿನವರಲ್ಲಿ ಅಪ್ಯಾಯಮಾನವಾಗಿದೆ. ತುಳುನಾಡು ಕರ್ನಾಟಕದ ವಜ್ರಮಾಲೆಯಂತಿದೆ. ಗುರುವಿನ ಮಾರ್ಗದರ್ಶನವಿಲ್ಲದೆ ಸಮಾಜ ಇರಲಾರದು. ಗುರುವೇ ದೇವರು. ಗುರುಗಳ ಸಂಸರ್ಗದಿಂದ ಜೀವನ ಸುಭದ್ರವಾಗುತ್ತದೆ. ಸಮಾಜದ ಏಳಿಗೆಯನ್ನು ಬಯಸುವ ಸ್ವಾಮೀಜಿಗಳು ಸಿಕ್ಕಿರುವುದು ಎಲ್ಲರ ಭಾಗ್ಯ. ಜೀವನದಲ್ಲಿ ನಂಬಿಕೆ ಮತ್ತು ಭಾವನೆಯೇ ಮುಖ್ಯ ಎಂದರು.

ಸಂಸದ ಶ್ರೀ ನಳಿನ್‌ಕುಮಾರ್ ಕಟೀಲು ಮಾತನಾಡಿ ರಾಜಪೀಠಕ್ಕಿಂತ ಗುರುಪೀಠ ಶ್ರೇಷ್ಠವಾದದ್ದು. ಸರಕಾರ ಮಾಡತಕ್ಕಂತಹ ಕಾರ್ಯಗಳನ್ನು ಇಂದು ಒಡಿಯೂರಿನಲ್ಲಿ ಪೂಜ್ಯ ಶ್ರೀಗಳವರು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಮಠಗಳ ರಕ್ಷಣೆಗೆ ಸಮಾಜ ನಿಲ್ಲಬೇಕು. ಸಂಸ್ಕೃತಿಯನ್ನು ಉಳಿಸುವ ಕಾರ್ಯ ಒಡಿಯೂರು ಕ್ಷೇತ್ರದಲ್ಲಾಗುತ್ತಿದೆ. ತುಳುವನ್ನು ೮ನೇ ಪರಿಚ್ಛೇದಕ್ಕೆ ಸೇರಿಸಲು ೧೧ಮಂದಿ ಸಂಸದರು ಪಕ್ಷ ಬಿಟ್ಟು ಪ್ರಯತ್ನ ಮಾಡುತ್ತೇವೆ. ಒಡಿಯೂರು ಶ್ರೀಗಳ ಜತೆಗೆ ಸಂಸದರನ್ನು ಒಗ್ಗೂಡಿಸಿಕೊಂಡು ದಿಲ್ಲಿಯಲ್ಲಿ ಪ್ರಧಾನಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಲೋಕಾಯುಕ್ತ ಡೆಪ್ಯುಟಿ ರಿಜಿಸ್ಟ್ರಾರ್ ಶ್ರೀ ಶಿವಪ್ಪ ಸಾಲೆಗಾರ್, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್, ನವಿಮುಂಬೈ ವಾಶಿಯ ಉದ್ಯಮಿ ಶ್ರೀ ಶಂಕರ ಆರ್. ಶೆಟ್ಟಿ ಅಣ್ಣಾವರ, ವಿಟ್ಲ ಪುಷ್ಪಕ್ ಕ್ಲಿನಿಕ್‌ನ ಖ್ಯಾತ ವೈದ್ಯರಾದ ಡಾ. ವಿ.ಕೆ. ಹೆಗ್ಡೆ, ಬಿ.ಸಿ.ರೋಡ್‌ನ ನೋಟರಿ ಮತ್ತು ನ್ಯಾಯವಾದಿಗಳಾದ ಶ್ರೀ ಜಯರಾಮ ರೈ, ಸ್ವಾಗತ ಸಮಿತಿಯ ಸದಸ್ಯರಾದ ಶ್ರೀ ವಾಮಯ್ಯ ಬಿ. ಶೆಟ್ಟಿ ಮತ್ತು ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಘಟಕದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್, ಮುಂಬೈ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್. ಶೆಟ್ಟಿ, ಮಂಗಳೂರು ಘಟಕದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ದಾವಣಗೆರೆ ಘಟಕದ ಶ್ರೀ ಸಿದ್ದರಾಮಪ್ಪ, ತಿರುವನಂತಪುರ ಘಟಕದ ಅಧ್ಯಕ್ಷ ಶ್ರೀ ಅಜಿತ್‌ಕುಮಾರ್ ಪಂದಳಮ್, ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಮೋನಪ್ಪ ಪೂಜಾರಿ ಕಾವು, ಪುಣೆ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಹೂವಿನಹಡಗಲಿ ಘಟಕದ ಅಧ್ಯಕ್ಷ ಶ್ರೀ ನೀಲಕಂಠಪ್ಪ, ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿ.ದ ಅಧ್ಯಕ್ಷ ಲ| ಎ. ಸುರೇಶ್ ರೈ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಒಡಿಯೂರು ಘಟಕದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಿ. ಶೆಟ್ಟಿ, ದಾವಣಗೆರೆ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಾ ರಾಜಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಡಿಯೂರ‍್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ ಹಾಗೂ ಸದಸ್ಯರು ತುಳು ಸಮ್ಮೇಳನದಲ್ಲಿ ಮಂಡನೆಯಾದ ಠರಾವನ್ನು ಪ್ರಧಾನಮಂತ್ರಿಗಳಿಗೆ ನೀಡಲು ಪೂಜ್ಯ ಶ್ರೀಗಳವರ ಮೂಲಕ ಮಾನ್ಯ ಸಂಸದರಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಸುಮಾರು ೪೩ಮಂದಿ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಸಮಾರಂಭಕ್ಕೆ ಪ್ರಾಯೋಜಕರಾಗಿ ಸಹಕರಿಸಿದ ಬಂಧುಗಳಿಗೆ, ಸ್ವಯಂಸೇವಕರಿಗೆ ಫಲಮಂತ್ರಾಕ್ಷತೆಯಿತ್ತು ಪೂಜ್ಯ ಶ್ರೀಗಳವರು ಹರಸಿದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ತುಳು ಸಮ್ಮೇಳನ ಸಮಿತಿಯ ಸದಸ್ಯ ಶ್ರೀ ಯಶವಂತ್ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ತಾಲೂಕು ವಿಸ್ತರಾಣಾಧಿಕಾರಿ ಶ್ರೀ ಸದಾಶಿವ ಅಳಿಕೆ ವಂದಿಸಿದರು.

ಸಭಾಕಾರ್ಯಕ್ರಮದ ಬಳಿಕ ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಂಡಿತು. ಸನಾತನ ನಾಟ್ಯಾಲಯ ಮಂಗಳೂರು ಇವರು ರಾಷ್ಟ್ರದೇವೋಭವ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು.

ಮಿತ್ತನಡ್ಕದಲ್ಲಿ ಹಿಂದೂ ಸೇವಾ ಸಮಿತಿಯ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಕನ್ಯಾನ ಶ್ರೀ ನಿತ್ಯಾನಂದ ಮಂದಿರದ ಬಳಿ ಶ್ರೀ ಶ್ರೀಧರ ಶೆಟ್ಟಿ ಗುಬ್ಯಮೇಗಿನಗುತ್ತು ಇವರ ಪ್ರಾಯೋಕತ್ವದಲ್ಲಿ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ಶ್ರೀಮತಿ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆರಾಧ್ಯದೇವರ ಮಹಾಪೂಜೆಯ ಬಳಿಕ ಉತ್ಸವ ಮೂರ್ತಿಗೆ ಸಕಲ ವೈದಿಕ ವಿಧಿವಿಧಾನ ನೆರವೇರಿಸಿ, ಪೂಜ್ಯ ಶ್ರೀಗಳವರಿಂದ ಪೂಜೆ ನಡೆದ ಬಳಿಕ ನವರತ್ನ ಖಚಿತ ಗುರುಪಾದುಕೆಗಳೊಂದಿಗೆ ಶ್ರೀ ದತ್ತಾಂಜನೇಯ ದೇವರ ರಥವು ಮಿತ್ತನಡ್ಕ ಶ್ರೀಮಲರಾಯಿ ದೈವಸ್ಥಾನಕ್ಕೆ ವಾದ್ಯಘೋಷ, ಪೂರ್ಣಕುಂಭ, ಚೆಂಡೆಮೇಳ, ಬೊಂಬೆ ಪ್ರದರ್ಶನ, ತಾಲೀಮು ಪ್ರದರ್ಶನದೊಂದಿಗೆ ಹೊರಟಿತು. ಮಿತ್ತನಡ್ಕದಿಂದ ಕನ್ಯಾನ ಪೇಟೆ ಸವಾರಿಯಾಗಿ ಸದ್ಗರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷಪೂಜೆ ಸಲ್ಲಿಸಿ ಶ್ರೀ ಸಂಸ್ಥಾನಕ್ಕೆ ವೈಭವೋಪೇತವಾಗಿ ಹಿಂತಿರುಗಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top