+91 8255-266211
info@shreeodiyoor.org

ಉತ್ಸವ ಆಚರಣೆ ಆತ್ಮರಂಜನೆಗೆ ಪೂರಕವಾಗಿರಬೇಕು-ಒಡಿಯೂರು ಶ್ರೀ

ಸ್ವಾತಂತ್ರ್ಯಪೂರ್ವದಲ್ಲಿ ಸಂಘಟಿತರಾಗಲು ತಿಲಕರು ಆರಂಭಿಸಿದ ಗಣೇಶೋತ್ಸವ ಇಂದು ದೇಶದಾದ್ಯಂತ ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.ಎಲ್ಲಾ ನಾಯಕರಿಗೂ ನಾಯಕ ವಿನಾಯಕ.ಪ್ರತಿಯೊಂದು ಕಾರ್ಯಗಳನ್ನು ಆರಂಭಿಸುವಾಗಲೂ ವಿಘ್ನವಿನಾಶಕನನ್ನು ಆರಾಧಿಸುವುದು ರೂಢಿ.ಸ್ಥೂಲ ಶರೀರಕ್ಕೆ ಸೂಕ್ಷ್ಮ ಕಣ್ಣುಗಳನ್ನು ಹೊಂದಿರುವ ಗಣಪತಿಯ ಪ್ರತಿಯೊಂದು ಅಂಗಗಳಲ್ಲಿ ಒಂದೊಂದು ವಿಚಾರಗಳನ್ನು ಕಾಣಬಹುದು.ಒಳ್ಳೆಯಗುಣಗಳನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು ಎಂಬುದೇ ಗಣಪತಿತತ್ತ್ವವಾಗಿದೆ. ಮನುಷ್ಯ ಉತ್ಸವಪ್ರಿಯ. ಉತ್ಸವಗಳು ಆತ್ಮೋನ್ನತಿಗೆ ದಾರಿಯೂ ಹೌದು. ಆಚರಣೆಗಳು ಆತ್ಮರಂಜನೆಗೆ ಪೂರಕವಾಗಿರಬೇಕು.ದೈವತ್ವವನ್ನು ನ್ಮಮಲ್ಲಿ ಮೈಗೂಡಿಸಿಕೊಳ್ಳಬೇಕು ಎನ್ನುವುದೇ ಮಣ್ಣಿನ ಮೂರ್ತಿಯಲ್ಲಿ ಗಣಪತಿಯನ್ನು ಆವಾಹಿಸಿ ಪೂಜಿಸುವ ಉದ್ದೇಶವಾಗಿದೆ.ಇತರ ರಾಸಾಯನಿಕ ವಸ್ತುಗಳನ್ನು ಬಳಸದೆ ಮಣ್ಣಿನ ಮೂರ್ತಿಯನ್ನೇ ಮಾಡಿ ಪೂಜಿಸಬೇಕು ಎಂದು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಈ ಸುಸಂದರ್ಭ ಉಪಸ್ಥಿತರಿದ್ದರು.ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಮತ್ತು ಬಳಗದವರಿಂದ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top