+91 8255-266211
info@shreeodiyoor.org

ಶ್ರೀ ದತ್ತಮಹಾಯಾಗ ಸಪ್ತಾಹ

ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸು ದೃಢವಾಗುವುದಕ್ಕೆ ಸಾಧ್ಯ. ಗುರು ಅಜ್ಞಾನದ ಅಂಧಾಕಾರ ನಿವಾರಣೆಗೆ ಮಾಡುತ್ತಾನೆ. ಗುರುವಿನ ಮಹತ್ತ್ವವನ್ನು ಅರಿತು, ಕೋಪ, ತಾಪ ಬಿಟ್ಟು ಮಾಲಾಧಾರಣೆ ಮಾಡಿದರೆ ಇನ್ನಷ್ಟು ಅನುಭವ ನಮಗಾಗುತ್ತದೆ. ಅನುಮಾನ ಮತ್ತು ಅನುಭವ ಒಟ್ಟಾಗುವುದಕ್ಕೆ ಸಾಧ್ಯವಿಲ್ಲ, ಅನುಮಾನಕ್ಕೆ ಉತ್ತರ ಅನುಭವದಲ್ಲಿದೆ. ಪರಿಶ್ರಮದಿಂದ ಯಾವುದೇ ಕಾರ್ಯ ಸಫಲವಾಗುವುದರಲ್ಲಿ ಸಂದೇಹ ಇಲ್ಲ. ಬುದಕಿನುದ್ದಕ್ಕೂ ಜಾಗೃತಿ ಇದ್ದಾಗ ಜೀವನ ಸಾರ್ಥಕ್ಯವಾಗುತ್ತದೆ. ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತಮಹಾಯಾಗ ಸಪ್ತಾಹ ಆರಂಭದ ಸುಸಂದರ್ಭ ದತ್ತಮಾಲಾಧಾರಣೆ ಮಾಡಿ ಸಂದೇಶ ನೀಡಿದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ಒಡಿಯೂರು ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು, ಸುಮಾರು 170 ಮಂದಿ ಗುರುಭಕ್ತರು ಶ್ರೀ ದತ್ತ ಮಲಾಧಾರಣೆ ಮಾಡಿ ಸಪ್ತಾಹ ಪರ್ಯಂತ ವೃತಾಚರಣೆಯಲ್ಲಿ ಪಾಲ್ಗೊಂಡರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತಮಹಾಯಾಗ ಸಪ್ತಾಹ ಆರಂಭಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top