+91 8255-266211
info@shreeodiyoor.org

ಶ್ರೀ ದತ್ತ ಜಯಂತಿ ಮಹೋತ್ಸವ

 

ಶಾಂತತೆಯ ಗುಟ್ಟು ಅರಿವಿನಲ್ಲಿ ಅಡಗಿದೆ. ಅರಿವು ಎಂದರೆ ಜ್ಞಾನ, ತಿಳುವಳಿಕೆ. ದಿಕ್ಸೂಚಿಯಂತೆ ನಮ್ಮ ಮನಸ್ಸೂ ಸಹ ಸ್ಥಿರತೆಯಲ್ಲಿರಬೇಕಾದರೆ ಅರಿವಿರಬೇಕು. ಆಗಲೇ ನಮ್ಮಲ್ಲಿ ಮಾನವೀಯ ಮೌಲ್ಯಯೂ ತುಂಬುತ್ತದೆ. ಆ ಮೂಲಕ ಮನುಷ್ಯ ಮನುಷ್ಯನಾಗಲು ಸಾಧ್ಯ. ಇದಕ್ಕೆ ಪೂರಕವೆಂಬಂತೆ ದತ್ತ ತತ್ತ್ವ ಎಂದರೆ ಸಮರಸ ತತ್ತ್ವ. ದತ್ತ ಅಂದರೆ ಕೊಡಲ್ಪಟ್ಟದ್ದು. ದತ್ತ ಸಂಪ್ರದಾಯಕ್ಕೆ ಅತಿವರ್ಣೀಯ ಆಶ್ರಮ ಎಂದೂ ಕರೆಯುತ್ತಾರೆ. ವಸ್ರವನ್ನೇ ಅಂಬರವಾಗಿಸಿದವನು ದತ್ತ. ಆ ಕಾರಣದಿಂದಲೇ ಅವನನ್ನು ದಿಗಂಬರ ಎಂದರು ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ದತ್ತ ಜಯಂತ್ಯುತ್ಸವದ ಸುಸಂದರ್ಭ ಶ್ರೀ ಒಡಿಯೂರು ಸಂಸ್ಥಾನದಲ್ಲಿ ನಡೆದ ಶ್ರೀ ಗುರುಚರಿತ್ರೆ ಪ್ರವಚನ ಸಪ್ತಾಹದ ಸಂದರ್ಭ ಸಂದೇಶ ನೀಡಿದರು. ಪತ್ರಕರ್ತ ಶ್ರೀ ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನಗೈದರು.
ಶ್ರೀ ಟಿ. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top