+91 8255-266211
info@shreeodiyoor.org

ದ. 5ರಿಂದ 11ರ ತನಕ ಶ್ರೀದತ್ತ ಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ – ಯಕ್ಷಗಾನ ಬಯಲಾಟ ಸಪ್ತಾಹ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-12-2019 ರಿಂದ ತಾ.11-12-2019ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ವೈದಿಕ – ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಸಾ೦ಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ಬಯಲಾಟ ಸಪ್ತಾಹವು ಜರಗಲಿರುವುದು.

ಪ್ರತಿದಿನ ಶ್ರೀ ಗುರುಚರಿತ್ರೆ ಪಾರಾಯಣ, ವೇದ ಪಾರಾಯಣ, ಶ್ರೀ ಗುರುಚರಿತಾಮೃತ ಪ್ರವಚನ. ಪ್ರವಚನಕಾರರಾಗಿ ಪ್ರೊ. ಚಂದ್ರಪ್ರಭಾ ಹೆಗ್ಡೆ, ನಿವೃತ್ತ ಪ್ರಾಂಶುಪಾಲರು, ಶಿರ್ವ, ಶ್ರೀ ಸೂರ್ಯನಾರಾಯಣ ಭಟ್ ಕಶೆಕೋಡಿ, ಡಾ. ಭಾಸ್ಕರ ಭಟ್ ಸೋಂದಾ, ಉಡುಪಿ, ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು, ಡಾ. ಗುರುದಾಸ್ ಎಸ್.ಪಿ., ಮಂಗಳೂರು, ವಿದ್ವಾನ್ ವಿ.ಬಿ. ಹಿರಣ್ಯ ಭಾಗವಹಿಸಲಿರುವರು.

ಮಧ್ಯಾಹ್ನ ಘಂಟೆ 12.30ಕ್ಕೆ ಮಹಾಪೂಜೆ, ಮಹಾಸಂತರ್ಪಣೆ. ಅಪರಾಹ್ನ ಘಂಟೆ 2.00ರಿಂದ ಯಕ್ಷಗಾನ ಬಯಲಾಟ. ರಾತ್ರಿ ಘಂಟೆ 7ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಪ್ರಸಾದ ವಿತರಣೆ.

ದಶಂಬರ 5ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ನಾಗತಂಬಿಲ ನಡೆಯಲಿದೆ. ಬೆಳಿಗ್ಗೆ ಘಂಟೆ 9.00ರಿಂದ ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ. ಬಳಿಕ ಗುರುಭಜಕರಿಗೆ ಪೂಜ್ಯ ಶ್ರೀಗಳವರಿಂದ ಶ್ರೀ ದತ್ತ ಮಾಲಾಧಾರಣೆ. ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕಿ ಉತ್ಸವ.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top