+91 8255-266211
info@shreeodiyoor.org

ಮಕ್ಕಳನ್ನು ಸಂಸ್ಕøತಿಯ ವಾರಿಸುದಾರರನ್ನಾಗಿಸಬೇಕು- ಒಡಿಯೂರು ಶ್ರೀಗಳು

“ಕಲೆಯ ಆರಾಧನೆ ಅದು ದೇವಿಯ ಆರಾಧನೆಯಾಗಿದೆ. ನವರಾತ್ರಿಯಲ್ಲಿ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾ ಶಕ್ತಿಯ ಸಮ್ಮಿಳಿತವಾಗುತ್ತದೆ. ಕಲಾವಿದರನ್ನು ಒಟ್ಟಾಗಿಸಿದರೆ ಅದು ಒಂದೊಂದು ಮಣಿಯನ್ನು ದೇವರಿಗೆ ಸಮರ್ಪಿಸಿದ ಫಲವಾಗಿದೆ. ಮಕ್ಕಳನ್ನು ಸಂಸ್ಕøತಿಯ ವಾರಿಸುದಾರರನ್ನಾಗಿಸಬೇಕು. ಆಸೆಯ ತ್ಯಾಗವೇ ಆನಂದದ ಮೂಲವಾಗಿದೆ. ಸನಾತನ ಸಂಸ್ಕøತಿಯನ್ನು ಉಳಿಸಿದಾಗ ಧರ್ಮದ ಪುನರುತ್ಥಾನವಾಗಬಹುದು. ಸಮಾಜದ ಋಣ ಸಂತನಿಗೂ ಇದ್ದು, ಅದು ಸಂತರ ಕರ್ತವ್ಯವೂ ಆಗಿದೆ” ಎಂದು ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನÀದಲ್ಲಿ ಜರಗಿದ ಶ್ರೀ ಲಲಿತಾ ಪಂಚಮಿ ಮಹೋತ್ಸವ-ಶ್ರೀ ಚಂಡಿಕಾ ಮಹಾಯಾಗ ಹಾಗೂ ಶ್ರೀ ಹನುಮಗಂಗಾ ಪುಷ್ಕರಿಣಿಯ ಸಮರ್ಪಣೆಯ ಸಂದರ್ಭ ನಡೆದ ಧರ್ಮಸಭೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಶ್ರೀ ಗುರುದೇವಾನುಗ್ರಹ ಪುರಸ್ಕಾರ ನೀಡಿ ಪೂಜ್ಯ ಶ್ರೀಗಳವರು ಸಂದೇಶ ನೀಡಿದರು.

ಸಾಧ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದು, ಮುಖ್ಯ ಅತಿಥಿಗಳಾಗಿ ಬಸವನಹಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಮತಿ ನಂದಿನಿ ಎಸ್. ಶೆಟ್ಟಿ ಭಾಗವಹಿಸಿ ಶುಭಹಾರೈಸಿದರು. ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಉಪಸ್ಥಿತರಿದ್ದರು. ವಿದುಷಿ ಸಾವಿತ್ರಿ ಈಶ್ವರ ಭಟ್, ಚಲನಚಿತ್ರ ನಟ, ರಂಗಭೂಮಿ ಕಲಾವಿದ ಶ್ರೀ ಕಾಸರಗೋಡು ಚಿನ್ನ, ಯಕ್ಷಗಾನ ಕಲಾವಿದ ಶ್ರೀ ಸೀತಾರಾಮ ಕುಮಾರ್ ಕಟೀಲು, ತುಳು ನಾಟಕ ನಿರ್ದೇಶಕ, ರಚನೆಗಾರ, ನಿರ್ಮಾಪಕ ಶ್ರೀ ಕೃಷ್ಣ ಜಿ. ಮಂಜೇಶ್ವರ, ಚಿತ್ರಕಲಾ ಶಿಕ್ಷಕ ಶ್ರೀ ತಾರಾನಾಥ ಕೈರಂಗಳ, ಅಬ್ಬಕ್ಕ ಟಿ.ವಿ. ಆಡಳಿತ ನಿರ್ದೇಶಕ ಶ್ರೀ ಶಶಿಧರ ಪೊಯ್ಯತ್ತಬೈಲ್ ಇವರು ಶ್ರೀ ಗುರುದೇವಾನುಗ್ರಹ ಪುರಸ್ಕಾರ ಸ್ವೀಕರಿಸಿದರು.

ಶ್ರೀ ಹನುಮಗಂಗಾ ಪುಷ್ಕರಿಣಿಯನ್ನು ಸಮರ್ಪಿಸಿದ ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ ಮತ್ತು ಶ್ರೀಮತಿ ರೇವತಿ ವಿ. ಶೆಟ್ಟಿ ದಂಪತಿ ಹಾಗೂ ತಾಂತ್ರಿಕ ನಿರ್ವಹಣೆಗೈದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್‍ಕುಮಾರ್ ಎ. ದಂಪತಿಗಳನ್ನು ಪೂಜ್ಯ ಶ್ರೀಗಳವರು ಸಮ್ಮಾನಿಸಿ ಹರಸಿದರು.

ಒಡಿಯೂರು ಶ್ರೀ ಗುರುದೇವ ಗುರುಕುಲದ ಶಿಕ್ಷಕಿ ಶ್ರೀಮತಿ ಸಾಯೀಶ್ವರೀ ಡಿ. ಶೆಟ್ಟಿ, ಒಡಿಯೂರು ಶ್ರೀ ಸೌ.ಸ.ನಿಯಮಿತದ ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ, ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಒಡಿಯೂರು, ಶ್ರೀ ಗುರುದೇವ ಪ್ರೌಢಶಾಲಾ ಮುಖ್ಯಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ, ಶಿಕ್ಷಕಿ ಕು| ಸವಿತಾ ಅವರು ಶ್ರೀ ಗುರುದೇವಾನುಗ್ರಹ ಪುರಸ್ಕಾರ ಪಡೆದ ಸಾಧಕರ ಪರಿಚಯವನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಬಾಕ್ರಬೈಲ್‍ನ ನೆರೆ ಸಂತ್ರಸ್ತರಾದ ಶ್ರೀಮತಿ ಶೋಭಾ ಹಾಗೂ ಶ್ರೀಮತಿ ಪ್ರಮೀಳಾ ಅವರಿಗೆ ಪರಿಹಾರ ಧನ ರೂಪಾಯಿ 25,000/- ದಂತೆ ಚೆಕ್ ವಿತರಿಸಲಾಯಿತು.

ಶ್ರೀ ಗುರುದೇವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ ನಿರೂಪಿಸಿ, ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು.

ಧಾರ್ಮಿಕ ಕಾರ್ಯಕ್ರಮ:
ಬೆಳಿಗ್ಗೆ ಆರಾಧ್ಯದೇವರಿಗೆ ಮಹಾಪೂಜೆ, ನಾಗಸನ್ನಿಧಿಯಲ್ಲಿ ನಾಗತಂಬಿಲದ ಬಳಿಕ ಪೂಜ್ಯ ಶ್ರೀಗಳವರು ಹಾಲು ಎರೆಯುವ ಮೂಲಕ ಶ್ರೀ ಹನುಮಗಂಗಾ ಪುಷ್ಕರಿಣಿ ಸಮರ್ಪಣೆಗೊಂಡಿತು. ಮಧ್ಯಾಹ್ನ ಶ್ರೀ ಚಂಡಿಕಾ ಯಾಗದ ಪೂರ್ಣಾಹುತಿ, ಮಹಾಪೂಜೆ ನೆರವೇರಿತು. ಅಪರಾಹ್ಣ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ ಯಕ್ಷಗಾನ ಪ್ರದರ್ಶನಗೊಂಡಿತು. ಸಂಜೆ ಸಾರ್ವಜನಿಕ ಶ್ರೀ ಸ್ವಯಂವರ ಪಾರ್ವತೀ ಪೂಜೆ, ಅಷ್ಟಾವಧಾನ ಸೇವೆ, ರಾತ್ರಿ ರಂಗಪೂಜೆ, ಶ್ರೀ ಭದ್ರಕಾಳಿಗೆ ವಿಶೇಷ ಪೂಜೆ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top