+91 8255-266211
info@shreeodiyoor.org

“ಮಹಿಳೆಯಿಂದ ಸಮಾಜಕ್ಕೆ ಸಂಸ್ಕಾರ”-ಸಾಧ್ವಿ ಶ್ರೀ ಮಾತಾನಂದಮಯೀ

ಬದಿಯಡ್ಕ ಫೆ.14: “ಮಹಿಳೆಯಿಂದಲೇ ಸಮಾಜಕ್ಕೆ ಸಂಸ್ಕಾರ ಲಭಿಸುತ್ತದೆ. ಸಂಸ್ಕಾರಯುತ ಸಮಾಜದಿಂದ ರಾಷ್ಟ್ರೋತ್ಥಾನವಾಗಿ ವಿಶ್ವಮಾನವ ಧರ್ಮದ ಸಾಕ್ಷಾತ್ಕಾರವಾಗುತ್ತದೆ” ಎಂದು ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ಹೇಳಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಸಂಭ್ರಮ ಅಂಗವಾಗಿ ಕಾಸರಗೋಡು ವಲಯ ಸಮಿತಿ ಮತ್ತು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ನೇತೃತ್ವದಲ್ಲಿ ಪಾರೆಕಟ್ಟೆ ಕನ್ನಡ ಗ್ರಾಮದಲ್ಲಿ ಮಹಿಳಾ ಕ್ರೀಡೋತ್ಸವ, ಆಹಾರೋತ್ಸವ, ಸಂಕೀರ್ತನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾಸರಗೋಡು ನಗರಸಭಾ ಸದಸ್ಯೆ ಶ್ರೀಮತಿ ಸವಿತಾ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಷಷ್ಠ್ಯಬ್ದ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ, ಕೌನ್ಸಿಲರ್‍ಗಳಾದ ಶ್ರೀಮತಿ ಶಾರದಾ ಬಿ, ಶ್ರೀಮತಿ ಶ್ರೀಲತಾ, ಮಧೂರು ಗ್ರಾ.ಪಂ. ಸದಸ್ಯೆ ಶ್ರೀಮತಿ ಉಷಾ ಸುರೇಶ್, ವಲಯ ಸಮಿತಿ ಅಧ್ಯಕ್ಷ ಶ್ರೀ ಕೆ. ಎನ್. ವೆಂಕಟ್ರಮಣ ಹೊಳ್ಳ, ಕಾರ್ಯಾಧ್ಯಕ್ಷ ಶ್ರೀ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಸಂಘಟನಾ ಕಾರ್ಯದರ್ಶಿ ಶ್ರೀ ಗುರು ಪ್ರಸಾದ್ ಕೋಟೆಕಣಿ, ಕೇಂದ್ರ ಸಮಿತಿ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಗ್ರಾಮ ಮಹಿಳಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಾವ್ಯ ಕುಶಲ ಸ್ವಾಗತಿಸಿದರು. ಕಾಸರಗೋಡು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಶಿವರಾಮ ಕಾಸರಗೋಡು ಪ್ರಸ್ತಾವನೆಗೈದರು. ಶ್ರೀಮತಿ ಪ್ರೀತಿಕಾ ನವೀನ ಜೆ.ಪಿ.ನಗರ ವಂದಿಸಿದರು. ಶ್ರೀಮತಿ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top