+91 8255-266211
info@shreeodiyoor.org

ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣವಾಗಬೇಕು – ಒಡಿಯೂರು ಶ್ರೀ

ನಿರಂತರವಾಗಿ ಹರಿಯುವ ನೀರಿನಂತೆ ನಮ್ಮ ಬದುಕಾಗಿರಬೇಕು. ಗಾಂಧೀ ತತ್ವವನ್ನು ಆಚರಿಸಬೇಕು. ಭಾರತೀಯ ಸಂಸ್ಕೃತಿಯನ್ನು ಜಾಗೃತ ಮಾಡಲು, ಶಾಸ್ತ್ರ ತೇಜಸ್ಸು ಜ್ಞಾನವೃದ್ಧಿಯಾಗಬೇಕು ಮನಸ್ಸಿನಲ್ಲಿ ಏಕಾಗ್ರತೆ ಇರಬೇಕು ಮಕ್ಕಳು ಧೀರರಾಗಬೇಕು, ಸ್ವಚ್ಛತೆಯೇ ಬದುಕಿನ ಧ್ಯೇಯ ವಾಕ್ಯವಾಗಬೇಕು ರಾಷ್ಟ್ರ ಉತ್ತಮವಾಗಲು ಪ್ರಜೆಗಳು ಪ್ರಜ್ಞಾವಂತರಾಗಬೇಕು. ಆಗ ಮಾತ್ರ ಆದರ್ಶ ಪೂರ್ಣವಾದ ಸಮಾಜವನ್ನು ಬೆಳೆಸಬಹುದು. ಈ ಶಿಬಿರವು ಬದುಕನ್ನು ಬೆಳಗಿಸಲು ಸಹಕಾರಿಯಾಗಬಹುದು. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕೆಲಸ ನಮ್ಮಿಂದಾಗಬೇಕು. ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಸಂಪನ್ನಗೊಂಡ ಶರದೃತು ಸಂಸ್ಕಾರ ಶಿಬಿರದ ಉದ್ಘಾಟನೆಯನ್ನು ದೀಪೋಜ್ವಲನದ ಮುಖೇನ ನೆರವೇರಿಸಿದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವದಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಯಶವಂತ ವಿಟ್ಲ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ, ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಮುಖ್ಯೋಪಾದ್ಯಾಯರಾದ ಜಯಪ್ರಕಾಶ್ ಶೆಟ್ಟಿ , ಮೈತ್ರೇಯಿ ಗುರುಕುಲದ ಭಗಿನಿಯಾದ ಶ್ರೀಮತಿ ಚಂಪಕ, ಕೆ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ನಾಯಕ ಯತಿನ್ ಮತ್ತು ವಿದ್ಯಾರ್ಥಿ ನಾಯಕಿ ಕು. ಶರಣ್ಯ ಉಪಸ್ಥಿತರಿದ್ದರು.

ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿ ಮಂಜುನಾಥ ಸ್ವಾಗತಿಸಿ ವಿದ್ಯಾರ್ಥಿನಿ ದಿವ್ಯಶ್ರೀ ನಿರೂಪಿಸಿದರು, ಹಾಗೂ ವಿದ್ಯಾರ್ಥಿ ಸುಜಿತ್ ಧನ್ಯವಾದವಿತ್ತರು.

ಈ ಸಂದರ್ಭ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕರು ಹಾಗೂ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳು ಸಹಕರಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top