+91 8255-266211
info@shreeodiyoor.org

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಮಹಾಸಭೆ

ನಿರ್ಮಲ ಮನಸ್ಸಿನ ಗ್ರಾಹಕರ ವ್ಯವಹಾರ ಸಂಘದ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಹಕಾರಿ ಕ್ಷೇತ್ರ ನಿತ್ಯ ನಿರಂತರ ಹರಿಯುವ ನೀರಿನಂತಿದ್ದರೆ ಮಾತ್ರ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಬಹುದು. ಪಡೆದ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವುದು ಸಾಲ ಪಡೆದವರ ಕರ್ತವ್ಯ. ಸಹಕಾರಿಯು ಗ್ರಾಮವಿಕಾಸ ಯೋಜನೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆ ಮೂಲಕ ನೂರಾರು ಉದ್ಯೋಗ ಸೃಷ್ಟಿ, ಸಾಮಾಜಿಕ ಸೇವೆಯೊಂದಿಗೆ ಸಂಘವು ಬೆಳೆಯುತ್ತಿರುವುದು ಪ್ರಂಸನೀಯ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿ ನಿಯಮಿತ 2017 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಮಾತಾನಂದಮಯೀ ಈ ಸುಸಂದರ್ಭ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಶ್ರೀ ಲ|ಎಂ.ಜೆ.ಎಫ್.| ಸುರೇಶ್ ರೈಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಲೆಕ್ಕ ಪರಿಶೋಧಕ ಶ್ರೀ ಶಾಂತಾರಾಮ ಶೆಟ್ಟಿ, ಶ್ರೀ ಶಿವಕುಮಾರ್ ಕೆ., ತಾಂತ್ರಿಕ ಇಂಜಿನಿಯರ್ ಶ್ರೀ ಜಗದೀಶ್ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಸಲಹೆಗಳನ್ನು ನೀಡಿದರು. ಮಹಾಪ್ರಬಂಧಕ ಶ್ರೀ ಭಾಸ್ಕರ ಮಂಗಲ್ಪಾಡಿ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಶ್ರೀ ಟಿ. ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಶ್ರೀ ಎಚ್.ಕೆ. ಪುರುಷೋತ್ತಮ, ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ಪಿ. ಲಿಂಗಪ್ಪ ಗೌಡ, ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಲೋಕನಾಥ ಶೆಟ್ಟಿ, ಶ್ರೀ ಬಿ.ಕೆ. ಚಂದ್ರಶೇಖರ್, ಶ್ರೀಮತಿ ಸರಿತಾ ಅಶೋಕ್‌ಕುಮಾರ್, ಶ್ರೀ ದೇವಪ್ಪ ನೋಂಡ, ಶ್ರೀ ಗಣೇಶ್‌ಕುಮಾರ್ ರೈ, ಶ್ರೀಮತಿ ಶಾರದಾಮಣಿ ಎಸ್. ರೈ, ಶ್ರೀ ತಾರಾನಾಥ ಶೆಟ್ಟಿ ಒಡಿಯೂರು, ಎ.ಜಿ.ಎಂ. ಶ್ರೀ ತಾರಾನಾಥ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಜಯಂತ್ ಜೆ. ಕೋಟ್ಯಾನ್ ವಂದನಾರ್ಪಣೆಗೈದರು, ಪಂಪುವೆಲ್ ಶಾಖಾ ವ್ಯವಸ್ಥಾಪಕಿ ಶ್ರೀಮತಿ ಅಶ್ವಿತಾ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top