+91 8255-266211
info@shreeodiyoor.org

ಸ್ವಚ್ಛತೆ ನಮ್ಮ ಕರ್ತವ್ಯವಾಗಬೇಕು – ಒಡಿಯೂರು ಶ್ರೀ

“ಯಾವುದೇ ವ್ಯಕ್ತಿಗೆ ಸಂಸ್ಕಾರ ಸಿಕ್ಕಾಗ ಮಾತ್ರ ಅವರ ವಿಕಾಸ ಸಾಧ್ಯ. ಈ ಸಂಸ್ಕಾರ ಮನೆಯಿಂದಲೇ ಮೊದಲುಗೊಂಡು ಸಿಗಬೇಕು. ಸಂಸ್ಕಾರ, ಸಹಕಾರದ ಮೂಲಕ ಸಮೃದ್ಧಿಯನ್ನು ಹೊಂದುವುದೇ ನಮ್ಮ ಉದ್ದೇಶವಾಗಿದೆ. ಜೀವನದಲ್ಲಿ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳುವ ವಿವೇಚನೆ ತೋರಬೇಕು. ಸ್ವಚ್ಛತೆ ನಮ್ಮ ಕರ್ತವ್ಯವಾಗುವ ಜೊತೆಗೆ ಒಗ್ಗಟ್ಟು ನಮ್ಮ ಮಂತ್ರವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುತ್ತೂರು ಘಟಕ ಹಾಗೂ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪುತ್ತೂರು ತಾಲೂಕು ಇದರ ಜಂಟಿ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯದತ್ತವ್ರತಪೂಜೆಯ ಸಮಾರಂಭದಲ್ಲಿ ದೀಪ ಪ್ರಜ್ವಲಿಸಿ ಆಶೀರ್ವಚನಗೈದರು.

ವೇದಿಕೆಯಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಶ್ರೀ ಹೇಮನಾಥ ಶೆಟ್ಟಿ ಮಾತನಾಡಿ “ಒಡಿಯೂರು ಟ್ರಸ್ಟ್‍ನ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಘಗಳು ಸಮಾಜಮುಖಿ ಕೆಲಸವನ್ನು ಮಾಡುವ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡುತ್ತಿದೆ. ಒಡಿಯೂರು ಶ್ರೀಗಳ ಆಶೀರ್ವಾದಿಂದ ಕಷ್ಟದಿಂದ ಹೊರಬಂದು ಸುಖದ ಜೀವನ ನಡೆಸಲು ಸಾಧ್ಯ” ಎಂದರು. ವೇದಿಕೆಯಲ್ಲಿ ಉಪನ್ಯಾಸಕಿ ಶ್ರೀಮತಿ ಹರಿಣಿ ಪುತ್ತೂರಾಯ, ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾಲಯದ ಸಂಚಾಲಕ ಶ್ರೀ ದಯಾನಂದ ರೈ ಮನವಳಿಕೆ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಶ್ರೀ ಅಬ್ರಹಾಂ ವರ್ಗೀಸ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎಂ.ಜೆ.ಎಫ್.| ಎ. ಸುರೇಶ್ ರೈ ಉಪಸ್ಥಿತರಿದ್ದು ಶುಭಹಾರೈಸಿದರು. ಉದ್ಯಮಿ ಶ್ರೀ ಪ್ರತಾಪಸಿಂಹ ವರ್ಮ, ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಯು. ಕಿರಣ್ ಉಪಸ್ಥಿತರಿದ್ದರು.

ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಜಯಾನಂದ ಬಂಟ್ರಿಯಾಲ್, ನಿವೃತ್ತ ಸೈನಿಕ ಶ್ರೀ ರಾಧಾಕೃಷ್ಣ ಗೌಡ, ದೈವ ನರ್ತಕ ಶ್ರೀ ಕರುಣಾಕರ ಪಿಕಟೆಮಜಲು, ಹೈನುಗಾರಿಕೆ ಕ್ಷೇತ್ರದ ಶ್ರೀ ವಸಂತ ಅಲೆಕ್ಕಾಡಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ನಗರಸಭೆಯ ಪೌರಕಾರ್ಮಿಕರಾದ ಯಶೋದಾ ಮತ್ತು ದಯಾನಂದ ಅವರನ್ನು ಗುರುತಿಸಲಾಯಿತು.

ಪುತ್ತೂರು ಸೇವಾ ಬಳಗದ ಅಧ್ಯಕ್ಷ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ನಯನಾ ರೈ ವಂದಿಸಿದರು. ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಸತ್ಯದತ್ತವ್ರತ ಪೂಜೆ ನೆರವೇರಿತು. ಮಹಿಳಾವಿಕಾಸ ಕೇಂದ್ರದ ಸದಸ್ಯೆಯರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ಏರ್ಪಟ್ಟಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top