+91 8255-266211
info@shreeodiyoor.org

ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ 60 ಸರಣಿ ಕಾರ್ಯಕ್ರಮಗಳ ಉದ್ಘಾಟನೆ

ನವಿಮುಂಬಯಿ, ಮಾ.4 : ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ವತಿಯಿಂದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮುಂಬಯಿಯಲ್ಲಿ 60 ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದು, ಇದರ ಉದ್ಘಾಟನಾ ಸಮಾರಂಭವು ನೆರೂಲ್‍ನ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆಯಿತು.ನೆರೂಲ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಶ್ರೀ ರಮೇಶ್ ಎಂ ಪೂಜಾರಿ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಶ್ರೀ ಸೂರಜ್ ಭಟ್, ಗೌರವ ಅತಿಥಿಯಾದ ಶ್ರೀ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ಜಿ ಶೆಟ್ಟಿ, ನೆರೂಲ್ ಶ್ರೀ ಬಾಲಾಜಿ ಮಂದಿರದ ಅಧ್ಯಕ್ಷ ಶ್ರೀ ಗೋಪಾಲ ವೈ ಶೆಟ್ಟಿ, ಶ್ರೀ ಅಯ್ಯಪ್ಪ ದುರ್ಗಾದೇವಿ ಮಂದಿರ ನೆರೂಲ್ ಇದರ ಕಾರ್ಯಾಧ್ಯಕ್ಷ ಶ್ರೀ ರವಿ ಆರ್ ಶೆಟ್ಟಿ, ಬಿಲ್ಲವ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಸಮಿತಿಯ ಕಾಯಾಧ್ಯಕ್ಷ ಶ್ರೀ ವಿಶ್ವನಾಥ ಕೆ ಪೂಜಾರಿ ಉಪಸ್ಥಿತರಿದ್ದರು.

ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಪ್ರಸ್ತಾವಿಸಿದರು. ಗುರುದೇವ ಸೇವಾಬಳಗದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಶ್ರೀ ಕೃಷ್ಣ ಎಲ್ ಶೆಟ್ಟಿ, ಷಷ್ಠ್ಯಬ್ದ ಕಾರ್ಯಕ್ರಮದ ಮುಂಬೈ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಶೆಟ್ಟಿ, ಅದ್ಯಪಾಡಿಗುತ್ತು ಶ್ರೀ ಕರುಣಾಕರ ಎಸ್. ಆಳ್ವ, ಯಕ್ಷಗಾನ ಅರ್ಥದಾರಿ ಶ್ರೀ ಕೆ ಕೆ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸಕೇಂದ್ರ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಮಾಜಿ ಅಧ್ಯಕ್ಷೆ ಶ್ರೀಮತಿ ಸುವಾಸಿನಿ ಶೆಟ್ಟಿ ಮೊದಲಾದವರು ಶುಭ ಹಾರೈಸಿದರು.ಕಾರ್ಯಕ್ರಮದ ಸಂಯೋಜಕರಾದ ರಂಗ ಕಲಾವಿದ ಶ್ರೀ ಅನಿಲ್ ಹೆಗ್ಡೆ ಪೆರ್ಡೂರು ನಿರೂಪಿಸಿದರು. ಅದ್ಯಪಾಡಿ ಶ್ರೀ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಶ್ರೀ ಪ್ರಭಾಕರ ಎಸ್ ಹೆಗ್ಡೆ ವಂದಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಶೆಟ್ಟಿ ಹಾಗೂ ಶ್ರೀಮತಿ ಸುಪ್ರಿಯ ಅನಿಲ್ ಹೆಗ್ಡೆ ಅವರು ಪ್ರಾರ್ಥನೆಗೈದರು. ಶ್ರೀ ವಿ.ಕೆ.ಸುವರ್ಣ ಪಡುಬಿದ್ರಿ, ಶ್ರೀ ಜಗದೀಶ್ ಶೆಟ್ಟಿ ಪನ್ವೆಲ್, ಶ್ರೀ ತಾರಾನಾಥ ಶೆಟ್ಟಿ ಪುತ್ತೂರು, ಶ್ರೀ ರವಿಶಂಕರ್ ಆಚಾರ್ಯ ಮೊದಲಾದವರು ಸಹಕರಿಸಿದರು. ಪ್ರಥಮ ಕಾರ್ಯಕ್ರಮದ ಅಂಗವಾಗಿ ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್ ವತಿಯಿಂದ ದಾಸರ ಭಜನೆ ಕಾರ್ಯಕ್ರಮ ಜರಗಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top