+91 8255-266211
info@shreeodiyoor.org

“ಸದ್ಗುಣ ಮೈಗೂಡಿಸಿಕೊಂಡರೆ ಸುಂದರ ಸ್ವಸ್ಥ ಸಮಾಜ ನಿರ್ಮಾಣ” ಕೋವಿಡ್ 19 ವ್ಯಸನ ಜಾಗೃತಿ ಅಭಿಯಾನ ಉದ್ಘಾಟಿಸಿ ಒಡಿಯೂರು ಶ್ರೀ

ಮಂಗಳೂರು, ಮಾ.30: “ಜನರು ದುವ್ರ್ಯಸನದಿಂದ ದೂರವಿದ್ದು ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಸುಂದರ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ಕೆಟ್ಟ ವಿಚಾರಗಳ ದಾಸರಾಗುತ್ತಿದ್ದಾರೆ. ಇವರನ್ನು ಎಚ್ಚರಿಸಲು ವ್ಯಸನ ಜಾಗೃತಿ ಅಭಿಯಾನ ಪೂರಕವಾಗಿ ಕೆಲಸಮಾಡಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮದ ಅಂಗವಾಗಿ ಮಂಗಳೂರು ನಗರ ಸಮಿತಿ ಆಶ್ರಯದಲ್ಲಿ ಪಿ.ವಿ.ಎಸ್ ಸೆಂಟಿನರಿ ಬಿಲ್ಡಿಂಗ್‍ನಲ್ಲಿ ಆಯೋಜಿಸಲಾದ ಕೋವಿಡ್-19 ಹಾಗೂ ವ್ಯಸನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.
“ಶಾಲಾ-ಕಾಲೆÉೀಜು ಹಂತದಲಿ ಗಾಂಜಾ ಬಳಕೆ ಬಗ್ಗೆ ದೂರು ಇದ್ದ ಕಾರಣದಿಂದ ಅಂತಹ 60 ಪ್ರಕರಣವನ್ನು ಪತ್ತೆಹಚ್ಚಿ ಕೇಸ್ ಮಾಡಲಾಗಿದೆ. ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ಈ ಬಗ್ಗೆ ಕಣ್ಗಾವಲು ಇರಿಸಲಾಗಿದೆ. ರ್ಯಾಗಿಂಗ್ ಪಿಡುಗು ಕೂಡಾ ಇಲ್ಲದಿರುವುದರಿಂದ 22 ವಿದ್ಯಾರ್ಥಿಗಳನ್ನು ಬಂಧಿಸಿ 3 ಪ್ರಕರಣ ದಾಖಲಿಸಲಾಗಿದೆ” ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರು ನಗರ ಪೋಲಿಸ್ ಆಯುಕ್ತ ಶ್ರೀ ಎನ್. ಶಶಿಕುಮಾರ್ ಹೇಳಿದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಮಹಾಬಲೇಶ್ ಶೆಟ್ಟಿ ಜಾಗೃತಿ ಉಪನ್ಯಾಸ ನೀಡಿದರು. ಒಡಿಯೂರು ಶ್ರೀಗಳ ಷಷ್ಠ್ಯಬ್ದ ಮಂಗಳೂರು ನಗರ ಸಮಿತಿ ಅಧ್ಯಕ್ಷ ಶ್ರೀ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರಿ ಸಿ.ಎ. ರಾಮ್‍ಮೋಹನ್ ರೈ, ಮಂಗಳೂರು ನಗರ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀ ತಾರಾನಾಥ ಶೆಟ್ಟಿ ಬೋಳಾರ, ಪತ್ರಕರ್ತ ಶ್ರೀ ಬಿ. ರವೀಂದ್ರ ಶೆಟ್ಟಿ, ಕೇಂದ್ರಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ, ಬ್ರ್ರಿಲಿಯಂಟಿನ ಪ್ರಾಂಶುಪಾಲರಾದ ಡಾ| ಬಿಂದುಸಾರಾ ಶೆಟ್ಟಿ, ಸಮಿತಿ ಸಂಚಾಲಕರಾದ ಶ್ರೀ ನಾಗರಾಜ ಆಚಾರ್ಯ, ಶ್ರೀ ಪ್ರದೀಪ್ ಆಳ್ವ ಉಪಸ್ಥಿತರಿದ್ದರು. ಶಿಕ್ಷಣ ವಿಭಾಗದ ಸಂಚಾಲಕ ಶ್ರೀ ಅವಿಕ್ಷಿತ್ ರೈ ಸ್ವಾಗತಿಸಿದರು. ಮಂಗಳೂರು ನಗರ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಜಿತೇಂದ್ರ ಎಸ್ ಕೊಟ್ಟಾರಿ ಪ್ರಸ್ತಾಪಿಸಿದರು. ಶಿಕ್ಷಕಿ ಶ್ರೀಮತಿ ರವಿಪ್ರಭಾ ವಂದಿಸಿದರು. ಕು.ವಾರುಣಿ ಆಚಾರ್ಯ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top