+91 8255-266211
info@shreeodiyoor.org

ಜನ್ಮದಿನೋತ್ಸವದ ಗ್ರಾಮೋತ್ಸವ ಗುರುವಂದನ ಕಾರ್ಯಕ್ರಮ

ಸಂಪತ್ತನ್ನು ಸೇವೆಗಾಗಿ ವಿನಿಯೋಗ ಮಾಡಬೇಕು.ಕಾಮನೆಗಳನ್ನು ತ್ಯಜಿಸಿ ಶಾಂತಿ, ನೆಮ್ಮದಿ ಪಡೆದುಕೊಳ್ಳಬಹುದು. ಆತ್ಮೋನ್ನತಿಯೊಳಗೆ ಸಮಾಜದ ಉನ್ನತಿಯ ಬೇರು ಅಡಗಿದೆ. ಧರ್ಮದ ಪಥದಲ್ಲಿ ಸಾಗಿದರೆ ಬದುಕು ಸುಂದರವಾಗಿರುತ್ತದೆ. ಸಾಧಕನ ಬದುಕು ಇತರರ ಬದುಕನ್ನು ಬೆಳಗುವಂತಾಗಬೇಕು. ಧರ್ಮ ಪ್ರಜ್ಞೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ಕಾಣಿಸಿಕೊಳ್ಳುತ್ತಿದೆ.ಅಹಂಕಾರ ಮತ್ತು ಬೇಡಿಕೆ ಕಡಿಮೆಯಾದಾಗ ಶಾಂತಿ ನೆಲೆಸಲು ಸಾಧ್ಯ ಸಮಾಜೋನ್ನತಿಯ ಬೇರು ಆತ್ಮೋನ್ನತಿಯಲ್ಲಿದೆ ಎಂದು ಪೂಜ್ಯ ಶ್ರೀಗಳವರು ಪೂಜ್ಯರ ಜನ್ಮದಿನೋತ್ಸವದ ಗ್ರಾಮೋತ್ಸವ ಗುರುವಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಅನ್ಯ ಭಾಷೆಯ ವ್ಯಾಮೋಹದಲ್ಲಿ ಮಾತೃ ಸಂಸ್ಕೃತಿಯನ್ನು ಮರೆಯದೇ ಬೆಳೆಸಬೇಕಾಗಿದೆ. ನಮ್ಮೊಳಗಿನ ಕಲ್ಪನೆಯನ್ನು ಆಧ್ಯಾತ್ಮದ ಮೂಲಕ ಹೊರ ತರುವ ಕಾರ್ಯವಾಗಬೇಕು. ಬಂಗಾರದ ಮನಸ್ಸು ಎಲ್ಲರಲ್ಲಿ ತುಂಬಿಕೊಳ್ಳುವುದರಿಂದ ಚಿನ್ನದಂತಹ ಸಮಾಜವನ್ನು ಕಾಣಬಹುದು. ಸಂಪಾದಿಸಿದ ಸಂಪತ್ತಿನಲ್ಲಿ ಕೊಂಚವಾದರೂ ಸೇವಾ ಕಾರ್ಯಗಳಿಗೆ ಸಧ್ವಿಯೋಗಿಸಿದಾಗ ಮಾತ್ರ ಸಾರ್ಥಕತೆ ಇದೆ ಎಂದು ಜನ್ಮದಿನದ ಸಂದೇಶ ನೀಡಿದರು.

ಹೂವಿನ ಹಡಗಲಿ ಮಲ್ಲನಕೇರಿ ವಿರಕ್ತ ಮಠದ ಶ್ರೀ ಮ. . ಪ್ರ. ಅಭಿನವ ಚೆನ್ನಬಸವ ಸ್ವಾಮಿಜಿ ಆಶೀರ್ಚವನ ನೀಡಿ ನೈಜ ಭಕ್ತಿ ಶ್ರದ್ಧೆಯನ್ನು ಜನರು ಮೈಗೂಡಿಸಿಕೊಂಡಾಗ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಒಳ್ಳೆಕೆಲಸ ಮಾಡಿದಾಗ ಉಸಿರು ನಿಂತ ಬಳಿಕವೂ ಹೆಸರು ಉಳಿದುಕೊಳ್ಳುತ್ತದೆ. ಪೂಜೆ ಪುನಸ್ಕಾರಗಳಿಂದ ಸಮಾಜದಲ್ಲಿ ಸುಭಿಕ್ಷೆ ನೆಲೆಸಲು ಸಾಧ್ಯ. ಒಡಿಯೂರು ಶ್ರೀಗಳವರಂತಹ ಮಹಾತ್ಮರಿಂದ ಸಮಾಜಕ್ಕೆ ಮಹಾನ್ ಕೊಡುಗೆ ಸಲ್ಲುತ್ತದೆ ಎಂದು ಹೇಳಿದರು.

ಹೂವಿನ ಹಡಗಲಿ ಮಠದ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನದ ಶ್ರೀ ಡಾ. ಹರಿಶಾಂತ ವೀರ ಸ್ವಾಮೀಜಿ ಆಶೀರ್ವಚನ ಮಾಡಿ ಸಂಸ್ಕಾರ ಹೀನರನ್ನು ಸಂಸ್ಕಾರ ವಂತರನ್ನಾಗಿಸುವ ಕಾರ್ಯ ಸಂತರದ್ದಾಗಿದೆ. ಸಂಸ್ಕಾರ – ಸಂಸ್ಕೃತಿ ನಾಡಿನಲ್ಲಿ ಇರುವುದಕ್ಕೆ ಮಕ್ಕಳು ಸಾಕ್ಷಿಯಾಗುತ್ತಾರೆ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುಂತಹ ಮಾದರಿ ಕಾರ್ಯಕ್ರಮವನ್ನು ನಾವು ಒಡಿಯೂರಿನಲ್ಲಿ ಕಾಣಬಹುದು ಎಂದು ತಿಳಿಸಿದರು.

ಸಾಧ್ವೀ ಶ್ರೀ ಮಾತಾನಂದಮಯೀಯವರ ನೇತೃತ್ವದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ್ ದಂಪತಿಗಳಿಂದ ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಶ್ರೀ ಗುರುಪಾದುಕಾರಾಧನೆ-ಪಾದಪೂಜೆ ನಡೆಯಿತು. ಕರ್ನಾಟಕ ರಾಜ್ಯ ಜೋಗಿ ಸಮಾಜದ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಶ್ರೀ ಗಣಪತಿ ಹವನ, ಆರಾಧ್ಯ ದೇವರಿಗೆ ವಿಶೇಷ ಪೂಜೆ, ವನಮಹೋತ್ಸವ, ನವಧಾನ್ಯದಿಂದ ಪೂಜ್ಯ ಶ್ರೀಗಳವರ ತುಲಾಭಾರ ಮತ್ತು ಉಯ್ಯಾಲೆ ಸೇವೆ, ಭಕ್ತರಿಂದ, ಗುರುಬಂಧುಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಒಡಿಯೂರು ಶ್ರೀ ಗುರುದೇವ ಗುರುಕುಲದ ಪುಟಾಣಿಗಳಿಂದ ಗುರುನಮನ ಕಾರ್ಯಕ್ರಮ ನಡೆಯಿತು.

ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ ಮುಂಬೈ, ಜನ್ಮದಿನೋತ್ಸವ ಸಮಿತಿ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್ ಬಿಜೈ, ಮಂಗಳೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಜಯಂತ್ ಜೆ ಕೋಟ್ಯಾನ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಶ್ರೀ ಎ. ಸುರೇಶ್ ರೈ, ನಿರ್ದೇಶಕರಾದ ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ಬಿ. ಕೆ. ಚಂದ್ರಶೇಖರ್, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಸ್ವಾಗತ ಸಮಿತಿಯ ಶ್ರೀ ವಾಸುದೇವ ಆರ್. ಕೊಟ್ಟಾರಿ, ಶ್ರೀ ದಾಮೋದರ ಶೆಟ್ಟಿ ಪಟ್ಲಗುತ್ತು, ಶ್ರೀ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಶ್ರೀ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ಕೆ. ಪಿ. ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ವೇದಿಕೆ ಸಮಿತಿ ಸಂಚಾಲಕ ಶ್ರೀ ಸಂತೋಷ ಭಂಡಾರಿ, ಹಿರಿಯರಾದ ಶ್ರೀ ಮಲಾರು ಜಯರಾಮ ರೈ, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್, ವಿವಿಧ ಸೇವಾ ಬಳಗಗಳ ಅಧ್ಯಕ್ಷರು, ಗ್ರಾಮವಿಕಾಸ ಯೋಜನೆಯ ಮಂಡಲ ಹಾಗೂ
ಘಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ಅಪರಾಹ್ಣ ಜರಗಿದ ಸಭಾಕಾರ್ಯಕ್ರಮ
ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಂತರ ಪಾತ್ರ ಮಹತ್ವದ್ದು. ಆಯುಧಗಳಿಂದ ಯಾವುದೇ ಸಮಸ್ಯೆಗೆ ಪರಿಹಾರ ಇರುವುದಿಲ್ಲ. ಆಧ್ಯಾತ್ಮದಿಂದ ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಬಹುದು. ಧರ್ಮ ಸಂಸ್ಕೃತಿಯ ಮೂಲಕ ಪ್ರತಿಯೊಬ್ಬರಲ್ಲಿ ಪ್ರೀತಿಯ ಭಾವ ತುಂಬುವ ಕಾರ್ಯವಾಗಬೇಕು. ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಕ್ಕಾಗ ಆದರ್ಶ ಸಮಾಜ ಕಟ್ಟಲು ಸಾಧ್ಯ. ಭಾರತದ ಆಂತರ್ಯ ಆಧ್ಯಾತ್ಮವಾಗಿದ್ದು, ಸಾಮರಸ್ಯ ಉಳಿಯಲು ನಮ್ಮತನವಿರಬೇಕು. ರಾಷ್ಟ್ರಕ್ಕೆ ತೊಂದರೆಯಾಗುವ ಸಮಯ ಒಗ್ಗಟ್ಟಿನಿಂದ ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಧರ್ಮದ ಸಂರಕ್ಷಣೆ ನಮ್ಮೆಲ್ಲರ ಕೈಯಲ್ಲಿದ್ದು, ಅದನ್ನು ಉಳಿಸುವ ಕಾರ್ಯವಾಗಬೇಕು. ಪ್ರಜ್ಞಾವಂತ ಪ್ರಜೆಗಳ ನಿರ್ಮಾಣವಾದಾಗ ರಾಷ್ಟ್ರೋತ್ಥಾನವಾಗುತ್ತದೆ. ಯುವ ಸಮಾಜದಿಂದ ಭ್ರಷ್ಟಾಚಾರ ಹಾಗೂ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಗ್ರಾಮಾಭ್ಯುದಯ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡುತ್ತಾ ಗ್ರಾಮೋತ್ಸವದ ಮೂಲಕ ಉತ್ತಮ ಸಮಾಜ ಸೇವೆ ನಡೆಯುತ್ತಿದ್ದು, ಮೂರು ಜಿಲ್ಲೆಗಳ ಸೀಮೋಲ್ಲಂಘನವಾಗಿದೆ. ಸೇವಾ ಮನೋಭಾವದ ಭಕ್ತರ ಮೂಲಕ ಮಹಾತ್ಕಾರ್ಯವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಕ್ಷೇತ್ರದ ಜತೆಗೆ ಕೈಜೋಡಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲು ಮಾತನಾಡಿ ಸಜ್ಜನ ಶಕ್ತಿ ಮೌನವಾದಾಗ ದುರ್ಜನ ಶಕ್ತಿ ಎದ್ದು ನಿಲ್ಲುತ್ತದೆ. ಸಮಸ್ಯೆಗಳು ಬಂದಾಗ ನಿವಾರಣೆ ಮಾಡಿ ಸಮಾಜವನ್ನು ಉಳಿಸುವಲ್ಲಿ ಗುರುಪರಂಪರೆಗಳ ಪಾತ್ರ ಮಹತ್ವದ್ದು.ವ್ಯಕ್ತಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಠಗಳ ಪಾತ್ರ ಹೆಚ್ಚಿದೆ. ಗ್ರಾಮಗಳಲ್ಲಿ ಸಂಸ್ಕಾರ ನೀಡಿದಾಗ ಪ್ರತಿಯೊಬ್ಬನನ್ನು ರಾಮನಾಗಿಸಿದಾಗ ದೇಶ ರಾಮ ರಾಜ್ಯವಾಗಬಹುದು ಎಂದು ಹೇಳಿದರು.

ಕುಂಡಾಜೆ, ವರ್ಕಾಡಿ, ಕಬ್ಯಾಡಿ ಘಟ ಸಮಿತಿಗಳಿಗೆ ಆದರ್ಶ ಘಟ ಸಮಿತಿ ಪ್ರಶಸ್ತಿ ನೀಡಲಾಯಿತು. ವಿಸ್ತರಣಾಧಿಕಾರಿ ಶ್ರೀ ಸುರೇಶ್ ಶೆಟ್ಟಿ ಮೊಗರೋಡಿ ಉತ್ತಮ ಕಾರ್ಯವೈಖರಿ ಬಹುಮಾನ ಪಡೆದುಕೊಂಡರು. ವರ್ಕಾಡಿ ಮಮತ ಲಕ್ಷ್ಮಿ ಉತ್ತಮ ಸೇವಾಧೀಕ್ಷಿತೆ ಬಹುಮಾನ ಪಡೆದರು.ಬಂಟ್ವಾಳ ತಾಲೂಕು ಶ್ರೀ ಸದಾಶಿವ ಅಳಿಕೆ ಅವರಿಗೆ ತಾಲೂಕು ಮಟ್ಟದ ಉತ್ತಮ ವಿಸ್ತರಣಾಧಿಕಾರಿಯಾಗಿ ಬಹುಮಾನ ಪಡೆದರು.

ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀ ಸುರೇಶ್ ಬಳ್ಳಾಲ್, ಮಂಗಳೂರು ಅಸಿಸ್ಟೆಂಟ್ ಕಮೀಶನರ್ ಶ್ರೀ ಎ. ಸಿ. ರೇಣುಕಾಪ್ರಸಾದ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್ ಸಿ., ಮುಂಬಯಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ಶ್ರೀ ಚಂದ್ರಹಾಸ ಎಂ. ರೈ ಬೋಳ್ನಾಡುಗುತ್ತು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಉಪಸ್ಥಿತರಿದ್ದರು.

ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಎಚ್. ಕೆ. ಪುರುಷೋತ್ತಮ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಮೇಲ್ವಿಚಾರಕ ಶ್ರೀ ಸದಾಶಿವ ಅಳಿಕೆ ವರದಿ ಮಂಡಿಸಿದರು. ಶ್ರೀ ನವೀನ್ ಶೆಟ್ಟಿ ಮಂಗಳೂರು, ಶ್ರೀ ಸುರೇಶ್ ಶೆಟ್ಟಿ ಮೊಗರೊಡಿ, ಶ್ರೀ ಯಶೋಧರ ಸಾಲ್ಯಾನ್ ಬೆಳ್ತಂಗಡಿ ವಿವಿಧ ಪಟ್ಟಿ ಓದಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಶ್ರೀ ಎ. ಜಯಪ್ರಕಾಶ್ ಶೆಟ್ಟಿ ವಂದಿಸಿದರು. ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

ಸಹಾಯ ಹಸ್ತ ವಿತರಣೆ:
ಗ್ರಾಮೋತ್ಸವದ ಅಂಗವಾಗಿ ವಿದ್ಯಾಭ್ಯಾಸ ಮುಂದುವರಿಕೆಗೆ 203 ವಿದ್ಯಾರ್ಥಿಗಳಿಗೆ 4.83 ಲಕ್ಷ ರೂ., ಪ್ರತಿಭಾ ಪುರಸ್ಕಾರ 18 ಮಕ್ಕಳಿಗೆ 29.5 ಸಾವಿರ ರೂ., ವೈದ್ಯಕೀಯ ಶುಶ್ರೋಷೆಗೆ 125 ಜನರಿಗೆ 397ಲಕ್ಷ ರೂ., ಸಂಘ – ಸಂಸ್ಥೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ 35 ಕೇಂದ್ರಗಳಿಗೆ 589150ರೂ., ನವನಿಕೇತನ-ಮನೆ ರಿಪೇರಿ – ಶೌಚಾಲಯ ನಿರ್ಮಾಣಕ್ಕೆ 21 ಫಲಾಪೇಕ್ಷಿತರಿಗೆ 423150ರೂ., ಮಂಗಳ ಕಾರ್ಯಗಳಿಗೆ 23 ಫಲಾಪೇಕ್ಷಿತರಿಗೆ 69ಸಾವಿರ ರೂ. ಸಹಾಯ ಹಸ್ತ ವಿತರಿಸಲಾಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top