+91 8255-266211
info@shreeodiyoor.org

ಸೇವಾ ಮನೋಭಾವನೆಯಿಂದ ಅಭಿವೃದ್ಧಿ ಸಾಧ್ಯ-ಒಡಿಯೂರು ಶ್ರೀ

 

 

 

 

 

 

 

ಉಪ್ಪಿನಂಗಡಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ 12ನೇ ಶಾಖೆ ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ:

ಕೊಡುಕೊಳ್ಳುವಿಕೆ ನಮ್ಮ ಮನೆಯಿಂದಲೇ ಆರಂಭವಾಗುತ್ತದೆ. ಪರಿಶುದ್ಧ ಮನಸ್ಸಿನೊಂದಿಗೆ ಸೇವಾ ಮನೋಭಾವನೆಯಿದ್ದಾಗ ಸೋಲಲು ಸಾಧ್ಯವಿಲ್ಲ. ಸಹಕಾರಿ ತತ್ತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಹಸನಾಗುತ್ತದೆ. ಇವೆಲ್ಲದಕ್ಕೂ ಮೂಲ ಧರ್ಮ. ಧರ್ಮ ಮೂಲವಿಲ್ಲದ ಬದುಕು ಇದ್ದು ಇಲ್ಲದಂತೆ. ಒಡಿಯೂರು ಶ್ರೀ ಸಂಸ್ಥಾನವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದಿಂದ ಬಂದದನ್ನು ಸಮಾಜಕ್ಕೆ ಅರ್ಪಿಸುತ್ತಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉಪ್ಪಿನಂಗಡಿ ಹಳೆ ಬಸ್‌ನಿಲ್ದಾಣದ ಬಳಿಯ ಪಾರಿಜಾತ ಸಂಕೀರ್ಣದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 12ನೇ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸುಸಂದರ್ಭ ಉಪಸ್ಥಿತರಿದ್ದ ಸಹಕಾರಿ ನಿಯಮಿತ ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ಈಗಾಗಲೇ 12 ಶಾಖೆಯನ್ನು ತೆರೆದಿರುವ ಸಹಕಾರಿಯು ಉತ್ತಮ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ಇದಕ್ಕೆ ಮೂಲ ಕಾರಣ ಗುರುಗಳ ಕೃಪೆ, ಸಮಾಜದ ಎಲ್ಲಾ ಬಾಂಧವರ ಸಹಕಾರ, ಆಡಳಿತ ಮಂಡಳಿಯ ಶ್ರಮ-ಸೇವೆ ಹಾಗೂ ಸಿಬ್ಬಂದಿಗಳ ಶ್ರಮ ಎಂದರು.
ಸಮಾರಂಭದಲ್ಲಿ ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀ ಕಜೆ ಈಶ್ವರ ಭಟ್, ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಉಪ್ಪಿನಂಗಡಿ ವಲಯದ ಅಧ್ಯಕ್ಷ ಶ್ರೀ ರಘುನಾಥ ರೈ ಅಳಿಮಾರ್, ಉದ್ಯಮಿ ಶ್ರೀ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಕರುಣಾಕರ ಸುವರ್ಣ, ನೇತ್ರಾವತಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಡಾ. ನಿರಂಜನ ರೈ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಗಣೇಶ್ ಶೆಣೈ, ಸಹಕಾರಿಯ ಉಪ್ಪಿನಂಗಡಿ ಶಾಖೆಯ ಸಲಹಾ ಸಮಿತಿ ಸದಸ್ಯರುಗಳಾದ ಕಂಗ್ವೆ ಶ್ರೀ ವಿಶ್ವನಾಥ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಶ್ರೀ ಭಾಸ್ಕರ ಮಂಗಲ್ಪಾಡಿ, ನಿರ್ದೇಶಕ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ ಮತ್ತಿತರು ಉಪಸ್ಥಿತರಿದ್ದು ಶುಭಹಾರೈಸಿದರು.
ಸಹಕಾರಿಯ ಅಧ್ಯಕ್ಷ ಶ್ರೀ ಲ| ಎಂ.ಜೆ.ಎಫ್| ಎ. ಸುರೇಶ್ ರೈ ಸ್ವಾಗತಿಸಿ, ಉಪಾಧ್ಯಕ್ಷ ಶ್ರೀ ಟಿ. ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಕಾರಿಯ ಬಿ.ಸಿ. ರೋಡ್ ಶಾಖಾ ವ್ಯವಸ್ಥಾಪಕ ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ ಧನ್ಯವಾದವಿತ್ತರು. ಸಲಹಾ ಸಮಿತಿ ಸದಸ್ಯ ಶ್ರೀ ಅಶೋಕ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

 

 

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top