+91 8255-266211
info@shreeodiyoor.org

ಹೂವಿನಹಡಗಲಿ

ಧರ್ಮ ಬದುಕನ್ನು ರೂಪಿಸುವ ಸಂವಿಧಾನ. ಧರ್ಮದ ಸೂತ್ರದಲ್ಲಿ ಬದುಕನ್ನು ಕಟ್ಟಿ ಸಂಸ್ಕಾರಯುತ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಹೂವಿನಹಡಗಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಉತ್ತಮ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿರುವುದು ಅಭಿನಂದನೀಯ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಹೂವಿನಹಡಗಲಿಯಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ೩ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಹೂವಿನಹಡಗಲಿ ಘಟಕವನ್ನು ಉದ್ಘಾಟಿಸಿ ಅನುಗ್ರಹ ಸಂದೇಶವಿತ್ತರು.

ಮಹಿಳಾವಿಕಾಸ ಕೇಂದ್ರದ ಗೌರವಾಧ್ಯಕ್ಷರಾದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದು ಶ್ರೀಯುತ ನೀಲಕಂಠಪ್ಪನವರ ಸಾರಥ್ಯದಲ್ಲಿ ಬಳಗವು ಹೂವಿನಹಡಗಲಿಯಲ್ಲಿ ಪ್ರೀತಿಯ …. ಸಂಚಲನಗೊಳಿಸಿದೆ. ಈ ಶಕ್ತಿ ಸಮಾಜಮುಖಿಯಾಗಿ ಸಾಕಾರಗೊಳ್ಳಲಿ. ಆರಂಭಗೊಂಡ ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮಹಿಳೆಯ ಸಂಸ್ಕಾರಯುತ ಬದುಕಿಗೆ ದಾರಿದೀಪವಾಗಲಿ ಎಂದರು.

ದಿವ್ಯ ಸಾನ್ನಿಧ್ಯವನ್ನು ನೀಡಿದ್ದ ಶ್ರೀ ಗವಿಸಿದ್ಧೇಶ್ವರ ಶಾಖಾಮಠದ ಮ.ನಿ.ಪ್ರ. ಡಾ| ಹಿರಿಶಾಂತವೀರ ಮಹಾಸ್ವಾಮಿಗಳವರು ಜಾತಿ, ಮತ, ಬಡವ, ಬಲ್ಲಿದ ಎಂಬ ಬೇಧವಿಲ್ಲದ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀಗಳವರಿ ತಮ್ಮ ಆಧ್ಯಾತ್ಮಿಕ ಬದುಕನ್ನು ಸಮಾಜಮುಖಿಯಾಗಿ ಬೆಳೆಸಿಕೊಂಡದ್ದು ಅನುಸರಣೀಯ ಎಂದರು. ಅವರು ಕಳೆದವರ್ಷ ಶ್ರೀ ಸಂಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದ ಅನುಭವಗಳನ್ನು ಅವರು ಆಶೀರ್ವಚನದಲ್ಲಿ ಹಂಚಿಕೊಂಡರು. ಭಾವನಾತ್ಮಕ ಜೀವನದಲ್ಲಿ ನಿನ್ನೊಳಗಿರುವ ನಿನ್ನನ್ನು ತಿಳಿದುಕೊಂಡು ಮನಸ್ಸಿನ ಹತೋಟಿಯಿಂದ ಜೀವನ ಸಾರ್ಥಕವಾಗುವುದು ಎಂದರು.

ಹೂವಿನಹಡಗಲಿ ಹೀರೆಮಲ್ಲನಕೇರಿ ಮಠದ ಶ್ರೀ ಮ.ನಿ.ಪ್ರ. ಚೆನ್ನಬಸವ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ವ್ಯಕ್ತಿಯ ಅಜ್ಞಾನವನ್ನು ಜಾಡಿಸಿ ಸುಜ್ಞಾನದತ್ತ ಕೊಂಡೊಯ್ಯುವವನೇ ಗುರು. ಒಡಿಯೂರು ಶ್ರೀಗಳು ಬದುಕಿಗೆ ಸಂಸ್ಕಾರದ ಬಣ್ಣ ನೀಡುವ ಆಧ್ಯಾತ್ಮಿಕ ಗುರುಗಳು ಎಂದರು.

ಹೂವಿನಹಡಗಲಿಯ ಸಮಾಜಸೇವಕ ಶ್ರೀ ಓದೂಗಂಗಪ್ಪ, ದಾವಣಗೆರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀ ಶರಣಪ್ಪ ಮುದಗಲ್, ಸಂಡೂರು ಕೃಷಿ ಇಲಾಖೆಯ ಶ್ರೀ ಎಸ್. ಕುಮಾರಸ್ವಾಮಿ, ಪುಣೆಯ ಉದ್ಯಮಿ ಶ್ರೀ ಉಷಾಕುಮಾರ್ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ದಾವಣಗೆರೆ ಘಟಕದ ಅಧ್ಯಕ್ಷ ಶ್ರೀ ಸಿದ್ಧರಾಮಪ್ಪ, ಒಡಿಯೂರು ಶ್ರೀ ವಜ್ರಮಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸುಮಂಗಳ ನೀಲಕಂಠಪ್ಪ ಹಾಗೂ ಮತ್ತಿತರ ಪ್ರದಾಧಿಕಾರಿಗಳು ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಹೂವಿನಹಡಗಲಿ ಘಟಕದ ಅಧ್ಯಕ್ಷ ಶ್ರೀ ನೀಲಕಂಠಪ್ಪ ಪ್ರಸ್ತಾವನೆಗೈದರು. ಉಪನ್ಯಾಸಕಿ ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top