+91 8255-266211
info@shreeodiyoor.org

ಗುರುವಂದನಾ ಕಾರ್ಯಕ್ರಮ

ಜನರು ಸನ್ಮಾರ್ಗಿಗಳಾಗಿ ಬದುಕು ನಡೆಸುವುದೇ ಗ್ರಾಮಾಭಿವೃದ್ಧಿ. ಸಂಸ್ಕಾರಯುತರನ್ನಾಗಿ ಮಾಡುವುದೇ ಗ್ರಾಮಾಭಿವೃದ್ಧಿಗೆ ನಾಂದಿ. ಪ್ರೀತಿಯ ಕೊಡುಗೆಯಿಂದ ಸಂಪತ್ತು ಸದ್ವಿನಿಯೋಗವಾಗುತ್ತದೆ. ಸಂಘಟನೆ ಸದೃಢವಾಗುತ್ತದೆ. ಮನಸ್ಸು ಸ್ವಚ್ಛವಾಗಿದ್ದಾಗ ಎಲ್ಲವೂ ಸ್ವಚ್ಛವಾದಂತೆ. ಸಂತ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ಬದುಕು ಎಚ್ಚರಿಕೆ ಮತ್ತು ಭದ್ರತೆಯಿಂದ ಕೂಡಿರಬೇಕು. ನಾಗರಿಕರ ಬದುಕಿನಲ್ಲಿ ಪರಿವರ್ತನೆ ಮೂಡಿಸುವುದೇ ಗ್ರಾಮಾಭ್ಯುದಯ. ಗ್ರಾಮೋತ್ಸವ ರಾಷ್ಟ್ರೋತ್ಥಾನಕ್ಕೆ ಮುನ್ನುಡಿ. ಸಂತರು ಆತ್ಮೋನ್ನತಿ ಸಾಧಿಸುವ ಮೂಲಕ ಸಮಾಜೋನ್ನತಿಗೆ ಕಾರಣರಾಗುತ್ತಾರೆ. ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಸಂತರ ಪಾತ್ರ ಪ್ರಮುಖವಾದುದು. ಗ್ರಾಮವಿಕಾಸ ಯೋಜನೆಯ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಅದು ಮಕ್ಕಳಿಂದಲೇ ಆರಂಭವಾಗಬೇಕಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಆಯೋಜಿಸಿದ್ದ ಗ್ರಾಮೋತ್ಸವ 2018-ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ-ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಜನ್ಮದಿನದ ಸಂದೇಶ ನೀಡಿದರು.

ಚಿತ್ರದುರ್ಗ ಮುರುಘಾಮಠದ ಪೂಜ್ಯ ಶ್ರೀ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಸಾಧ್ವೀ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿದರು.

ಔಷಧೀಯ ಸಸಿಗಳನ್ನು ವಿತರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿ ಪೂಜ್ಯ ಸ್ವಾಮೀಜಿಯವರ ಯೋಜನೆಗಳಿಗೆ ಬೆಂಬಲ ನೀಡುತ್ತೇನೆ ಮತ್ತು ನೂತನ ಸಭಾಭವನ ನಿರ್ಮಾಣಕ್ಕೆ ಕೈಜೋಡಿಸುತ್ತೇನೆ ಎಂದರು.

ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ನಮ್ಮ ಕುಡ್ಲ ತುಳು ಚ್ಯಾನೆಲ್ ಆಡಳಿತ ನಿರ್ದೇಶಕ ಲೀಲಾಕ್ಷ ಕರ್ಕೇರ, ಪುಣೆ ಉದ್ಯಮಿ ರಂಜಿತ್ ಶೆಟ್ಟಿ ಪುಣೆ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಒಡಿಯೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಎ. ಅಶೋಕ್ ಕುಮಾರ್ ಬಿಜೈ ಕಾಪಿಕ್ಕಾಡ್, ಪುಣೆ ಘಟಕದ ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ, ಜನ್ಮದಿನೋತ್ಸವ ಸಮಿತಿಯ ಮಹಾರಾಷ್ಟ್ರ ಸಮಿತಿಯ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಂಗಳೂರು ವಲಯದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಬೆಂಗಳೂರು ಘಟಕದ ಅಧ್ಯಕ್ಷ ಎಂ. ಬಾಲಚಂದ್ರ ಬೆಂಗಳೂರು, ದಾವಣಗೆರೆ ಘಟಕದ ಅಧ್ಯಕ್ಷ ಸಿದ್ಧರಾಮಪ್ಪ, ಹೂವಿನ ಹಡಗಲಿ ಘಟಕದ ಅಧ್ಯಕ್ಷ ನೀಲಕಂಠಪ್ಪ, ತಿರುವನಂತಪುರ ಘಟಕದ ಅಧ್ಯಕ್ಷ ಅಜಿತ್‌ಕುಮಾರ್ ಪಂದಳಮ್, ಒಡಿಯೂರು ಶ್ರೀಗಳ ಮಾತೃಶ್ರೀ ಅಂತಕ್ಕೆ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ದಾವಣಗೆರೆ ಘಟಕದ ಅಧ್ಯಕ್ಷೆ ಶ್ರೀಮತಿ ಸುಮಾ ರಾಜಶೇಖರ್, ಒಡಿಯೂರ‍್ದ ತುಳುಕೂಟದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ವಲಯದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಬ್ಯಾಡಿ, ವಿಟ್ಲ ಮಂಡಲ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ ವರದಿ ಮಂಡಿಸಿ, ಕಾರ್ಯಕ್ರಮ ನಿರ್ವಹಿಸಿದರು. ರೇಣುಕಾ ಎಸ್. ರೈ, ರವಿರಾಜ ಶೆಟ್ಟಿ ಬಳಗ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಎ. ಜಯಪ್ರಕಾಶ ಶೆಟ್ಟಿ ವಂದಿಸಿದರು.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top