+91 8255-266211
info@shreeodiyoor.org

ಗ್ರಾಮೋತ್ಸವ 2018

ಧರ್ಮದ ತಿಳುವಳಿಕೆಯಿಂದ ಅಂತರಂಗ, ಬಹಿರಂಗ ವಿಕಾಸ ಸಾಧ್ಯ. ಬದುಕಿಗೂ ಒಂದು ಸಂವಿಧಾನ ಬೇಕು. ಆ ಸಂವಿಧಾನವೇ ಧರ್ಮ. ಅದನ್ನು ಅರಿತುಕೊಂಡು ಸಮಾಜದ ಬೆಳವಣಿಗೆ ಸಾಧಿಸಬೇಕು. ದಾನ, ಧರ್ಮ, ಸೇವಾಕಾರ್ಯಗಳು ಮುಕ್ತಿಗೆ ಸೋಪಾನ. ಸೇವೆಗಳು ಯೋಗ್ಯರಿಗೆ ಸಲ್ಲಬೇಕು. ಗ್ರಾಮ ಸ್ವಚ್ಛತೆಯ ಜೊತೆಗೆ ಹೃದಯ ಸ್ವಚ್ಛತೆಯಾಗಬೇಕು. ಸಮಾಜೋನ್ನತಿಯ ಬೇರು ಆತ್ಮೋನ್ನತಿಯಲ್ಲಿ ಅಡಗಿದೆ. ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರುವಂಥದ್ದು ಮಾನವೀಯ ಮೌಲ್ಯದ ಕೊಂಡಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೋತ್ಸವ ರಾಷ್ಟ್ರೋತ್ಥಾನಕ್ಕೆ ನಾಂದಿಯಾಗಬೇಕು ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಕರೆದ ಗ್ರಾಮೋತ್ಸವ 2018ರ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್, ಮಂಗಳೂರು ಘಟಕದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಒಡಿಯೂರ‍್ದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿಟ್ಲ ಮಂಡಲ ಅಧ್ಯಕ್ಷ ಶ್ರೀ ಸದಾಶಿವ ಶೆಟ್ಟಿ ಅಳಿಕೆ ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ -ಗ್ರಾಮೋತ್ಸವದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಲೋಕನಾಥ ಶೆಟ್ಟಿ ಮಂಗಳೂರು, ಉಪಾಧ್ಯಕ್ಷರಾಗಿ ಶ್ರೀ ಶಶಿಧರ ಶೆಟ್ಟಿ ನಿಟ್ಟೆ, ಶ್ರೀ ವಿಠಲ ಶೆಟ್ಟಿ ಅಗರಿಬಾಳಿಕೆ, ಶ್ರೀ ಮಂಜು ವಿಟ್ಲ, ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಶ್ರೀಮತಿ ತಾರಾ ಸುಂದರ್ ರೈ, ಶ್ರೀ ಶ್ರೀಧರ ಶೆಟ್ಟಿ ಗುಬ್ಯ, ಶ್ರೀ ಜಯಪ್ರಕಾಶ್ ರೈ ನೂಜಿಬೈಲ್, ಶ್ರೀ ವಿನೋದ್ ಶೆಟ್ಟಿ ಪಟ್ಲಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸದಾಶಿವ ಅಳಿಕೆ, ಕೋಶಾಧಿಕಾರಿಯಾಗಿ ಶ್ರೀ ಬಿ.ಕೆ. ಚಂದ್ರಶೇಖರ್, ಮಂಗಳೂರು ಜತೆ ಕೋಶಾಧಿಕಾರಿಗಳಾಗಿ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಶ್ರೀ ಪ್ರದೀಪ್ ಶೆಟ್ಟಿ ಪಾಲಿಗೆ, ಶ್ರೀಮತಿ ಸರಿತಾ ಅಶೋಕ್‌ಕುಮಾರ್ ಜತೆ ಕಾರ್ಯದರ್ಶಿಗಳಾಗಿ ಶ್ರೀ ಪದ್ಮನಾಭ ಶೆಟ್ಟಿ ಪುತ್ತೂರು, ಶ್ರೀ ಕಿಶೋರ್ ಕೋಡ್ಲಮೊಗರು, ಶ್ರೀ ರಾಜೇಶ್ ವಿಟ್ಲ, ಆರ್.ಕೆ. ಆರ್ಟ್ಸ್, ಶ್ರೀ ಜೆ.ಕೆ. ರೈ ಸುಳ್ಯ, ಶ್ರೀಮತಿ ಅಶ್ವಿತಾ ಜೆ. ಶೆಟ್ಟಿ, ಮಂಗಳೂರು ಮತ್ತು ಇತರ ಉಪಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಶ್ರೀಮತಿ ರೇಣುಕಾ ಎಸ್.ರೈಯವರ ಪ್ರಾರ್ಥನಾಗೀತೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಸ್ತರಣಾಧಿಕಾರಿ ಶ್ರೀ ಸುರೇಶ್ ಶೆಟ್ಟಿ ಮೊಗರೊಡಿ ಸ್ವಾಗತಿಸಿ, ಶ್ರೀ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸದಾಶಿವ ಅಳಿಕೆ ವಂದಿಸಿದರು

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top