+91 8255-266211
info@shreeodiyoor.org

“ಆತ್ಮಜ್ಞಾನ ತತ್ತ್ವದಡಿ ಬದುಕು ಸಾಗಿಸಿ” – ಒಡಿಯೂರು ಶ್ರೀ

ಉಡುಪಿ: ಮಾರ್ಚ್.9: ಆತ್ಮಜ್ಞಾನ ತತ್ತ್ವದಡಿ ಬದುಕು ಸಾಗಿಸಿದಾಗ ನಾವು ಬೆಳೆಯುವುದರ ಜತೆಗೆ ಸಮಾಜವು ಅಭಿವೃದ್ಧಿಗೊಳ್ಳಲು ಸಾಧ್ಯ. ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ, ಶರೀರ, ಬುದ್ಧಿ, ಮನಸ್ಸು ಸರಿಯಾಗಿ ಉಪಯೋಗಿಸಿದಾಗ ಎಷ್ಟೇ ಕಷ್ಟದ ಗುರಿಯನ್ನು ಸಹ ಸುಲಭವಾಗಿ ಮುಟ್ಟಲು ಸಾಧ್ಯ. ಮನುಷ್ಯನ ದೇಹ ಕ್ಷೀಣಗೊಳ್ಳುವುದರ ಒಳಗಾಗಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಕಾಣಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಟ್ಯಬ್ದ ಸಂಭ್ರಮ ‘ಜ್ಞಾನವಾಹಿನಿ’ ಉಡುಪಿ ವಲಯ ಸಮಿತಿಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಉಡುಪಿ ವಲಯದ ಘಟಕ ಸಮಿತಿಗಳ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಪ್ರದಾನ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಜ್ಞಾನವಾಹಿನಿ ಉಡುಪಿ ವಲಯ ಸಮಿತಿ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ತಲಾ 60 ಮನೆಗಳಲ್ಲಿ ಮನೆ ಭಜನೆ, ಮನೆ ಸತ್ಸಂಗ, ಹನುಮಾನ್ ಚಾಲೀಸ್ ಪಠಣ, ಮನೆಗೊಂದು ಗಂಧದ ಗಿಡ, ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ, ಭಜನಾ ಸಮಾವೇಶ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂಸ್ಕøತಿ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶ್ರೀ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿ ವಲಯ ಸಮಿತಿಯ ದಶ ಸರಣಿ ಕಾರ್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ಸಾಧ್ವಿ ಶ್ರೀ ಮಾತಾನಂದಮಯೀ ಹನುಮಾನ್ ಚಾಲೀಸ್ ಪಠಣ ಮಾಡಿ ಆಶೀರ್ವಚನ ನೀಡಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಕೇಂದ್ರ ಸಮಿತಿಯ ಅಧ್ಯಕ್ಷ ಡಾ| ಮೋಹನ್ ಆಳ್ವ, ಉಡುಪಿ ವಲಯ ಸಮಿತಿಯ ಅಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು.
ಷಷ್ಠ್ಯಬ್ದ ಸಂಭ್ರಮದ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಯು., ಉಡುಪಿ ವಲಯ ಸಮಿತಿ ಉಪಾಧ್ಯಕ್ಷ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಪರ್ಕಳ ಸುರಕ್ಷಾ ಸಭಾಭವನದ ಮ್ಹಾಲಕ ಶ್ರೀ ರಾಮಮೂರ್ತಿ ಭಟ್ ಉಪಸ್ಥಿತರಿದ್ದರು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟ್ಟಿ ಕದ್ರಿ ಪ್ರಸ್ತಾವನೆಗೈದರು. ಉಡುಪಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಪ್ರಭಾಕರ ಶೆಟ್ಟಿ ಸ್ವಾಗತಿಸಿ, ಜತೆಕಾರ್ಯದರ್ಶಿ ಶ್ರೀ ಮತಿ ಯಶೋದಾ ಕೇಶವ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top