+91 8255-266211
info@shreeodiyoor.org

ಸಜಿಪಮುನ್ನೂರುನಲ್ಲಿ ರಕ್ತದಾನ, ನೇತ್ರದಾನ ತಪಾಸಣಾ ಶಿಬಿರ

ಸಜಿಪಮುನ್ನೂರು, ಮಾ. 12: ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಲ್ಲಡ್ಕ ವಲಯ, ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ ಸಜಿಪ ಮಾಗಣೆ, ವೆಲ್‍ಲಾಕ್ ಆಸ್ಪತ್ರೆ ಮಂಗಳೂರು ಮತ್ತು ಎಸ್ಸಿಲೋರ್ ಮಿಷನ್ ಫೌಂಡೇಶನ್ ಸಹಯೋಗದಲ್ಲಿ ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರ ಸಜಿಪ ಮುನ್ನೂರು ಗ್ರಾಮ ಪಂಚಾಯತಿನಲ್ಲಿ ನಡೆಯಿತು.
ಉದ್ಯಮಿ ಶ್ರೀ ಎಸ್. ಎಂ. ಗೋಪಾಲಕೃಷ್ಣ ಆಚಾರ್ಯ ಉದ್ಘಾಟಿದರು. ಸೀನಿಯರ್ ಟೆಕ್ನಿಶಿಯನ್ ಶ್ರೀ ಅನಿಲ್ ರಾವ್, ಬ್ಲಡ್ ಬ್ಯಾಂಕಿನ ಶ್ರೀ ಆ್ಯಂಟನಿ ಮಾಹಿತಿ ನೀಡಿದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಗೌರವ ಮಾರ್ಗದರ್ಶಕ ಶ್ರೀ ಎ.ಸಿ.ಭಂಡಾರಿ, ವೈದ್ಯಾಧಿಕಾರಿ ಡಾ| ಜಿತಿನ್, ಕುಕ್ಕಾಜೆ ಮಂಚಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಶ್ರೀ ಸುಭೋದ್ ಭಂಡಾರಿ, ಸಜಿಪ ಮುನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಪೌಸ್ತಿನ್ ಡಿ’ಸೋಜಾ, ಉಪಾಧ್ಯಕ್ಷೆ ಶ್ರೀಮತಿ ಸಬೀನ, ಷಷ್ಠ್ಯಬ್ದ ಸಂಭ್ರಮ ಕೇಂದ್ರ ಸಮಿತಿಯ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ, ಗ್ರಾಮ ವಿಕಾಸ ಯೋಜನೆಯ ಮಾರ್ನಬೈಲು ಘಟಸಮಿತಿ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಆಳ್ವ, ಸಜಿಪ ಮಾಗಣೆ ಸಮಿತಿ ಅಧ್ಯಕ್ಷ ಶ್ರೀ ಶ್ರೀಕಾಂತ್ ಶೆಟ್ಟಿ ಸಂಕೇಶ, ಸಜಿಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ಪೂಜಾರಿ, ಶ್ರೀ ವೆಂಕಟೇಶ್ವರ ಭಟ್ ಮುಳ್ಳುಂಜ, ನಂದಗೋಕುಲ ಶ್ರೀ ಮಹಾಬಲ ರೈ, ಶ್ರೀ ಜಯಶಂಕರ ಬಾಸ್ರಿತ್ತಾಯ, ಶ್ರೀಮತಿ ತಮಾ ಭಂಡಾರಿ, ಶ್ರೀ ಯಶವಂತ ದೇರಾಜೆ, ಶ್ರೀ ನೂರುಲ್ ಅಮೀನ್, ಶ್ರೀ ಸುರೇಶ್ ಶೆಟ್ಟಿ ಕೋಯಮಜಲು, ಶ್ರೀ ಚಂದು ಮಾಸ್ಟರ್, ನೀಲ್ಯ ಶ್ರೀ ಚಂದ್ರಶೇಖರ್ ಮಾಸ್ಟರ್, ಶ್ರೀ ಮೊಹಮ್ಮದ್, ಶ್ರೀ ಶೋಭಿತ್ ಪೂಂಜಾ, ಶ್ರೀ ಮೋಹನ್‍ದಾಸ್ ಕುಡುವಪಾಲ್, ಶ್ರೀ ಸಂದೀಪ್ ಮಾರ್ನಲು, ಶ್ರೀಮತಿ ಜಯಲಕ್ಷ್ಮಿ, ಶ್ರೀ ಪ್ರಭಾಕರ ಶೆಟ್ಟಿ ಭಾಗವಹಿಸಿದ್ದರು.
ಶಿಭಿರದಲ್ಲಿ 36 ರಕ್ತದಾನಿಗಳು ರಕ್ತದಾನ ಮಾಡಿದರು. 116 ಜನರ ಕಣ್ಣು ಪರೀಕ್ಷೆ ಮಾಡಲಾಯಿತು. 136 ಜನರಿಗೆ ಕನ್ನಡಕ ವಿತರಿಸಲಾಯಿತು. 8 ನೇತ್ರ ರೋಗಿಗಳ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.
ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಶ್ರೀ ರೋಹಿತ್ ಡಿ ಶೆಟ್ಟಿ ನಗ್ರಿಗುತ್ತು ಸ್ವಾಗತಿಸಿದರು. ಶ್ರೀ ಶಿವಪ್ರಸಾದ್ ಶೆಟ್ಟಿ ನಿರೂಪಿಸಿದರು. ಶ್ರೀ ರತ್ನಾಕರ ನಾಡಾರ್ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top