+91 8255-266211
info@shreeodiyoor.org

“ಶಾರೀರಿಕ ಬದುಕಿಗೆ ಕೃಷಿ ಬಲ” – ಒಡಿಯೂರು ಶ್ರೀ

ಕಡಮಜಲು, ಮಾ. 6: “ಕೃಷಿ ಮತ್ತು ಋಷಿ ಭಾರತೀಯ ಸಂಸ್ಕøತಿಯ ಎರಡು ಕಣ್ಣುಗಳಿದ್ದಂತೆ, ಋಷಿಯಲ್ಲಿ ಆಧ್ಯಾತ್ಮದ ಅನುಭವ ಸಿಕ್ಕರೆ, ಕೃಷಿ ಶಾರೀರಿಕ ಬದುಕಿಗೆ ಬಲ ತುಂಬುತ್ತದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೃಷಿ ಸಂಸ್ಕøತಿಯ ಉಳಿವಿಗಾಗಿ ಮನಸ್ಸು ಮಾಡಬೇಕು” ಎಂದು ಕಡಮಜಲಿನಲ್ಲಿ ಕಡಮಜಲು ಸುಭಾಷ್ ರೈ 70ರ ಸಂಭ್ರಮ ವರ್ಷಾಚರಣೆಯ ಪ್ರಥಮ ತಿಂಗಳ ಕಾರ್ಯಕ್ರಮ ‘ಸಮಗ್ರ ಕೃಷಿ ದರ್ಶನ’ ಕಾರ್ಯಕ್ರಮದ ಸಮಾರೋಪ, ಶೃಂಗಾರ ಕೃಷಿ ಸನ್ಮಾನ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
“ಮನುಷ್ಯನ ಚೌದ್ಧಿಕ ಬೆಳವಣಿಗೆಗೆ ಸಂಸ್ಕಾರ ಮತ್ತು ಆಧ್ಯಾತ್ಮಿಕ ಮನಸ್ಸು ಅತ್ಯಂತ ಅಗತ್ಯ. ಸಂಘರ್ಷ ನಮಗೆ ಬೇಡ, ಸಂಘಟನೆ ಬೇಕು. ಕೃಷಿಕನಲ್ಲಿ ಹೇಗೆ ಆನಂದ ಇರುತ್ತದೋ ಅದೇ ರೀತಿ ಋಷಿಯಲ್ಲಿಯೂ ಆಧ್ಯಾತ್ಮಿಕದ ಆನಂದ ಇದೆ. ಅದನ್ನು ಅನುಭವಿಸುವ ಮನಸ್ಸನ್ನು ಪ್ರತಿಯೊಬ್ಬರು ತೋರಿಸಬೇಕು’ ಎಂದು ಹೇಳಿ ಅಚ್ಚುಕಟ್ಟಿನ ಕಾರ್ಯಕ್ರಮ ಆಯೋಜಿಸಿದ ಕಡಮಜಲು ಸುಭಾಸ್ ರೈರವರ ಪ್ರೀತಿಗೆ ಶ್ಲಾಘನೆ ವ್ಯಕ್ತಪಡಿಸಿ ಯಾವುದೇ ಕಾರ್ಯಕ್ರಮ ಯಶಸ್ವ್ವಿಯಾಗಬೇಕಾದರೆ ಸೇವಾ ಮನೋಭಾವ ಮುಖ್ಯ. ಎಲ್ಲರನ್ನು ಹತ್ತಿರಗೊಳಿಸುವ ಕಡಮಜಲುರವರ ಹೃದಯದ ದೃಷ್ಟಿ ಉತ್ತಮವಾದುದರಿಂದ ಇಷ್ಟೊಂದು ಸುಂದರ ಕಾರ್ಯಕ್ರಮ ಇಲ್ಲಿ ಮೂಡಿದೆ” ಎಂದು ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶೃಂಗಾರ ಕೃಷಿ ಸಮ್ಮಾನ ಸ್ವೀಕರಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಸುದರ್ಶನ ಮೂಡಬಿದಿರೆ ಶುಭ ಹಾರೈಸಿದರು. ಮಾಜಿ ಶಾಸಕರಾದ ಶ್ರೀ ರುಕ್ಮಯ್ಯ ಪೂಜಾರಿ, ಶ್ರೀ ಪದ್ಮನಾಭ ಕೊಟ್ಟಾರಿ, ಪುತ್ತೂರು ಕೃಷಿಕ ಸಮಾಜದ ಅಧ್ಯಕ್ಷ ಶ್ರೀ ವಿಜಯ್ ಕುಮಾರ್ ರೈ ಕೋರಣಗ, ಗ್ರಾ.ಪಂ. ಅಧ್ಯಕ್ಷ ಶ್ರೀ ರತನ್ ರೈ ಕುಂಬ್ರ, ಶ್ರೀ ರಮೇಶ್ ರೈ ಸಾಂತ್ಯ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಆಳ್ವ ಬೋಳೋಡಿ ಅವರನ್ನು ಸನ್ಮಾನಿಸಲಾಯಿತು.

ಒಡಿಯೂರು ಶ್ರೀಗಳವರ ಜನ್ಮ ಷಷ್ಠ್ಯಬ್ದ ಸಂಭ್ರಮ ಸಮಿತಿ ಅಧ್ಯಕ್ಷ ಸವಣೂರು ಶ್ರೀ ಸೀತಾರಾಮ ರೈ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ. ಅಧ್ಯಕ್ಷ ಶ್ರೀ ರಾಧಾಕೃಷ್ಣ ಬೋರ್ಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಶ್ರೀ ಕೃಷ್ಣ ಕುಮಾರ್ ರೈ ಗುತ್ತು, ವಿಜ್ಞಾನ ಪರಿಷತ್ ದ.ಕ.ಜಿಲ್ಲಾ ಅಧ್ಯಕ್ಷ ಡಾ| ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು, ಗ್ರಾ.ಪಂ. ಸದಸ್ಯರಾದ ಶ್ರೀ ವಿಟ್ಠಲ ರೈ ಮಿತ್ರಂಪಾಡಿ, ಶ್ರೀ ಕೃಷ್ಣ ಕುಮಾರ್ ಗೌಡ ಇದ್ಯಪೆ, ಶ್ರೀ ಸಂತೋಷ್ ರೈ ಬೋಳಿಯಾರ್ ಮತ್ತಿತರರು ಉಪಸ್ಥಿತರಿದ್ದರು. ಕಡಮಜಲು ಶ್ರೀ ಸುಭಾಸ್ ರೈ ಪ್ರಸ್ತಾವನೆಗೈದರು, ಸಮಿತಿ ಕೋಶಾಧಿಕಾರಿ ಶ್ರೀ ಮಹೇಶ್ ಕಜೆ ನಿರೂಪಿಸಿದರು.
ವಜ್ರಮಾತಾ ಮಹಿಳಾ ಭಜನಾ ಸಂಘದವರಿಂದ ನಡೆದ ಭಜನೆಯನ್ನು ಶ್ರೀಮತಿ ಪ್ರೀತಿ ಸುಭಾಸ್ ರೈ ಕಡಮಜಲು ಉದ್ಘಾಟಿಸಿದರು. ಸಮಗ್ರ ಕೃಷಿ ದರ್ಶನ ಸಂಭ್ರಮದಲ್ಲಿ ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಆರ್ಶೀವಚನ ನೀಡಿದರು. ಒಡಿಯೂರ ಶ್ರೀ ಜನ್ಮ ಷಷ್ಠ್ಯಬ್ದ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಹರಿಣಾಕ್ಷಿ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಕೆದಂಬಾಡಿ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕೆ. ಶಶಿಧರ ರಾವ್ ಬೊಳಿಕಲ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ| ಮೋಹನ್ ಎಂ., ಸಹಾಯಕ ಕೃಷಿ ಅಧಿಕಾರಿ ಶ್ರೀ ಕೆ. ನಾರಾಯಣ ಶೆಟ್ಟಿ ಮಾಹಿತಿ ನೀಡಿದರು. ಶ್ರೀ ಆನಂದ್ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top