+91 8255-266211
info@shreeodiyoor.org

“ಯೋಗವು ಆತ್ಮನಿಷ್ಠ ಸಂಸ್ಕೃತಿಯ ಬೆಳಕು” – ಒಡಿಯೂರು ಶ್ರೀ

ಭಾರತ ದೇಶವು ವಿಶ್ವಕ್ಕೆ ಅತ್ಯಮೂಲ್ಯವಾದ ‘ಯೋಗ’ ಮಾರ್ಗವನ್ನು ಕರುಣಿಸಿ ಜಗದ್ಗುರುವಾಗಿದೆ. ಯೋಗವು ಆತ್ಮನಿಷ್ಠ ಸಂಸ್ಕೃತಿಗೊಂದು ಪಠ್ಯವಿದ್ದಂತೆ. ಭಗವಾನ್ ದತ್ತಾತ್ರೇಯರು ಅಲರ್ಕ ಮಹಾರಾಜನಿಗೆ ಯೋಗದ ರಹಸ್ಯವನ್ನು ತಿಳಿಸಿಕೊಡುತ್ತಾರೆ. ಯಮ-ನಿಯಮಗಳು ಅಷ್ಟಾಂಗ ಯೋಗದ ಮುಖ್ಯ ವಿಚಾರ. ಇವೆರಡನ್ನು ಪಾಲಿಸಿಕೊಂಡಾಗ ಮುಂದಿನ ಆರು ವಿಚಾರಗಳು ನಿರಂತರವಾಗುವುದು. ಯೋಗಿಯ ಬದುಕು ಅತ್ಯಮೂಲ್ಯವಾದುದು. ಯೋಗಾಭ್ಯಾಸವು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ; ಆರೋಗ್ಯಪೂರ್ಣವಾಗಿಸುತ್ತದೆ. ಜಗತ್ತಿನಾದ್ಯಂತ ‘ವಿಶ್ವ ಯೋಗ ದಿನಾಚರಣೆ’ಯನ್ನು ಆಚರಿಸುವುದು ಸಂತಸದ ವಿಚಾರ. ಕರೋನಾದ ಕಾಟದಿಂದ ಮನೆಯಲ್ಲಿಯೇ ಯೋಗ ನಡೆಸುವುದು ಉತ್ತಮ. ಯೋಗಾಭ್ಯಾಸವು ಬರೇ ಪ್ರದರ್ಶನಕ್ಕಾಗದೆ ನಿದರ್ಶನವಾಗಬೇಕು. ಯೋಗಾಭ್ಯಾಸದ ಅನುಷ್ಠಾನ ಮಾಡುವುದರಿಂದ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ.

ಆತ್ಮನಿರ್ಭರ ಭಾರತದ ಕನಸು ಕಾಣುವ, ವಿಶ್ವದಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ನಡೆಸುವರೇ ಪ್ರೇರೇಪಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಮೋದಿಜಿಯವರನ್ನು ಅಭಿನಂದಿಸೋಣ. ಮಹರ್ಷಿ ಪತಂಜಲಿಯವರು ನಿರ್ದೇಶಿಸಿದ ಯೋಗಮಾರ್ಗದಿಂದ ಪ್ರಜ್ಞಾವಂತ ಪ್ರಜೆಗಳಾಗೋಣ. ಭವ್ಯ ಭಾರತ ಕಟ್ಟೋಣ. ಕರೋನ ಗೆಲ್ಲೋಣ.

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು  ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top