+91 8255-266211
info@shreeodiyoor.org

ಶಾಲಾ ಆರಂಭೋತ್ಸವ-ಉಚಿತ ಪುಸ್ತಕ ವಿತರಣಾ ಸಮಾರಂಭ

ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಕನ್ನಡ ಮಾಧ್ಯಮಕ್ಕೆ ದಾಖಲಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಘೋಷಿಸಿದ್ದಾರೆ.

ಶುಕ್ರವಾರ ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವ ಸಮಾರಂಭವನ್ನು ದೀಪೋಜ್ವಲನದ ಮೂಲಕ ಉದ್ಘಾಟಿಸಿದ ಪೂಜ್ಯ ಶ್ರೀಗಳವರು ಶಿಕ್ಷಣ ವ್ಯಾಪಾರೀಕರಣವಾಗದೆ ಭಾರತೀಕರಣ ಆಗಬೇಕು. ಭಾರತೀಯ ತತ್ತ್ವ, ಸಿದ್ಧಾಂತ ಆಧಾರಿತವಾಗಿ ಮಾನವೀಯ ಮೌಲ್ಯದ ಕೊಂಡಿಯೊಂದಿಗೆ ಗುಣಮಟ್ಟದ ನೈತಿಕ ಶಿಕ್ಷಣದಿಂದ ಮಾತ್ರ ಭವ್ಯ ಭಾರತದ ನಿರ್ಮಾಣ ಸಾಧ್ಯ. ಮಕ್ಕಳಿಗೆ ಇರವಿನ ಅರಿವು ಮೂಡಿಸುವ ಸಂಸ್ಕೃತಿ ಶಿಕ್ಷಣ ನೀಡುವುದು ನಮ್ಮ ಗುರಿ ಆಗಿದೆ ಎಂದು ಆಶೀರ್ವಚನಗೈದರು.

ಆಶೀರ್ವಚನಗೈದ ಸಾಧ್ವಿ ಶ್ರೀ ಮಾತಾನಂದಮಯೀಯವರು ಒಂದು ದೇಶದ ಮೌಲ್ಯವನ್ನು ಅಳೆಯುವುದು ಆ ದೇಶದ ಸತ್ಪ್ರಜೆಗಳ ಮೂಲಕ. ಸಂಸ್ಕಾರಯುತ ಸತ್ಪ್ರಜೆಗಳನ್ನಾಗಿಸುವ ಶಿಕ್ಷಣ ನೀಡಬೇಕೆಂಬುದು ಪೂಜ್ಯ ಶ್ರೀಗಳ ಸಂಕಲ್ಪ. ಅದರಂತೆ ಶ್ರೀ ಗುರುದೇವ ವಿದ್ಯಾಪೀಠದಲ್ಲಿ ನೈತಿಕ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು.

ಶ್ರೀ ಗುರುದೇವ ಪ್ರೌಢಶಾಲೆಯ 2017-18ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಮತ್ತು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಾದ ದಿವ್ಯಶ್ರೀ ಎನ್, ಶರಣ್ಯ ಎಸ್, ಸುಜಿತ್ ಶೆಟ್ಟಿ, ಶ್ರೀನಿತಾ ಪಿ., ಯತಿನ್ ಯನ್, ಜೆವಿಟಾ ಪ್ರೀಮಾ ಡಿಸೋಜಾ, ಪ್ರಶಾಂತ, ಕಾವ್ಯಶ್ರೀ, ಚೈತ್ರಾ, ಮಂಜುನಾಥ, ವಂದನಾ ಕೆ, ವೈಷ್ಣವಿ, ಶ್ರೀಹರಿ ಕೆ, ಗುರುಕಿರಣ್ ಬಿ, ಶ್ರವಣ್‌ರಾಜ್ ಇವರನ್ನು ಪೂಜ್ಯ ಸ್ವಾಮೀಜಿಯವರು ಶಾಲು ಹೊದಿಸಿ ಫಲಮಂತ್ರಾಕ್ಷತೆಯಿತ್ತು ಹರಸಿ ಅಭಿನಂದಿಸಿದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕರಾದ ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಜಯಂತ್ ಜೆ. ಕೋಟ್ಯಾನ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಹೆಚ್.ಕೆ. ಪುರುಷೋತ್ತಮ, ಬಿ.ಕೆ. ಚಂದ್ರಶೇಖರ್, ತಾರಾನಾಥ ಶೆಟ್ಟಿ, ಹಿರಿಯ ಪತ್ರಕರ್ತರಾದ ಯಶವಂತ ವಿಟ್ಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಕರುಣಾಕರ ಎನ್.ಬಿ., ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರುಗಳಾದ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀಮತಿ ಶಾರದಾಮಣಿ ಎಸ್.ರೈ ಸುಳ್ಯ, ಪದ್ಮನಾಭ ಶೆಟ್ಟಿ ಪುತ್ತೂರು, ವೇಣುಗೋಪಾಲ ಮಾರ್ಲ ಮಂಗಳೂರು, ಒಡಿಯೂರು ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಇವರು ಈ ಸುಸಂದರ್ಭ ಉಪಸ್ಥಿತರಿದ್ದರು.

ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಶೆಟ್ಟಿ ಎ. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ವಿದ್ಯಾರ್ಥಿ ಮಹೇಶ್ ಟಿ. ಕಾರ್ಯಕ್ರಮ ನಿರೂಪಿಸಿ, ಅನನ್ಯಲಕ್ಷ್ಮೀ ವಂದಿಸಿದರು.

ಮಂಗಳೂರು ಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಮತ್ತು ವಿಜ್ಞಾನ ಪ್ರಯೋಗಾಲಯಕ್ಕೆ ದೇಣಿಗೆ ನೀಡಿ ಸಹಕರಿಸಿದರು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಬಾಯಾರು ಮಾನಸ ಟೆಕ್ಸ್‌ಟೈಲ್‌ನ ಮ್ಹಾಲಕ ಚಂದ್ರಹಾಸ ಇವರು ಶಾಲೆಗೆ ದೇಣಿಗೆ ಸಮರ್ಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top