+91 8255-266211
info@shreeodiyoor.org

‘ಆಧ್ಯಾತ್ಮದ ಉದ್ದೇಶ ಸಮಾಜದ ಉನ್ನತಿ’ – ಒಡಿಯೂರು ಶ್ರೀ

  ಪುತ್ತೂರು, ಮಾ.19: “ವಿಜ್ಞಾನದ ಹುಡುಕಾಟದಲ್ಲಿ ಸಿಗುವ ಫಲಿತಾಂಶಗಳೇ ಆಧ್ಯಾತ್ಮ. ವಿಜ್ಞಾನದಲ್ಲಿ ಆವಿಷ್ಕಾರವಿದ್ದರೆ ಆಧ್ಯಾತ್ಮದಲ್ಲಿ ಆವಿಷ್ಕಾರವೆಂದಿಲ್ಲ. ಆಧ್ಯಾತ್ಮ ಅದುವೇ ಕೊನೆ. ವಿಜ್ಞಾನ ಮತ್ತು ಆಧ್ಯಾತ್ಮ ಎಂಬ ಸಂಗತಿಗಳ ದೃಷ್ಟಿಕೋನಗಳೆರಡು ಒಂದೇ ಆಗಿದ್ದು ಇವೆರಡರ ಒಟ್ಟು ಉದ್ದೇಶ ಸಮಾಜದ ಉನ್ನತಿ. ದೇಹನಿಷ್ಠ ಸಂಸ್ಕøತಿಯು ನಮ್ಮ ಪಂಚೇಂದ್ರಿಯಗಳನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತದೆ. ಆದರೆ ಪಂಚೇಂದ್ರಿಯಗಳಿಗೆ ಸಂಪೂರ್ಣ ತೃಪ್ತಿ ಎಂಬುದು ಯಾವಾಗಲೂ ಪ್ರಾಪ್ತಿಯಾಗುವುದಿಲ್ಲ. ಇದಕ್ಕಿಂತ ಮೀರಿದ್ದು ಆತ್ಮನಿಷ್ಠ ಸಂಸ್ಕøತಿ. ಆತ್ಮೋನ್ನತಿ ಮತ್ತು ಆತ್ಮ ಸಂತೋಷಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಶಾಶ್ವತ […]

Read More

“ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯವೂ ಅಲ್ಲ”-ಒಡಿಯೂರುಶ್ರೀ

ಸ್ವಾತಂತ್ರ್ಯ ವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯ ವೂ ಅಲ್ಲ, ಸುವ್ಯವಸ್ಥಿತ ವಾದ ಆಡಳಿತಕ್ಕೆ ಪ್ರಜ್ಞಾವಂತ ಪ್ರಜೆಗಳಿಂದ ಸಾಧ್ಯ. ದೇಶದ ಉನ್ನತಿಯು ದೇಶದ ಕೌಶಲ್ಯಯುತ ಜನರಿಂದ ಅವಲಂಬಿಸಿದೆ,ದೇಶದ ಬಲಿಷ್ಠ ತೆಗೆ ಬೇಕಾದ ರೂಪುರೇಷೆ ಗಳ ತಯಾರಿ ಹಾಗೂ ದೇಶದ ಸಂರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಬದುಕು ಶಿಕ್ಷಣದ ಅಗತ್ಯಕ್ಕಾಗಿ ಒಂದರಿಂದ ಐದನೆಯ ತರಗತಿಯವರೆಗೆ ಮಾತೃ ಶಿಕ್ಷಣ ಅಗತ್ಯವೆಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು […]

Read More

“ಪ್ರಜ್ಞಾವಂತ ಪ್ರಜೆಗಳಿಂದಲೇ ಆದರ್ಶ ರಾಷ್ಟ್ರ” –ಒಡಿಯೂರು ಶ್ರೀ

“ದಾಸ್ಯದಿಂದ ಮುಕ್ತವಾಗಿರುವುದೇ ಸ್ವಾತಂತ್ರ್ಯ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಸುವ್ಯವಸ್ಥಿತವಾದ ಆಡಳಿತ ನೋಡಬೇಕಾದರೆ ಪ್ರಜ್ಞಾವಂತ ಪ್ರಜೆಗಳಿರಬೇಕು. ಆಗಲೇ ಆದರ್ಶ ರಾಷ್ಟ್ರವಾಗುವುದು. ಧರ್ಮದಂಡದ ಮೂಲಕ ಆಡಳಿತ ನಡೆಸಿದಾಗ ಅಹಂಕಾರವಿರುವುದಿಲ್ಲ. ರಾಜ ದಂಡ, ಧರ್ಮದಂಡ ಎರಡೂ ಅವಶ್ಯಕ. ಧರ್ಮವನ್ನು ಮರೆತ ರಾಜನಿಗೂ ಉಳಿಗಾಲವಿಲ್ಲ. ದೇಶದ ಬಲಿಷ್ಠತೆಗೆ, ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಭಾರತದ ದೇಶದ ಅಡಿಪಾಯವೇ ಅಧ್ಯಾತ್ಮಿಕತೆ. ಇದರಿಂದಾಗಿ ಭಾರತಕ್ಕೆ ಯಾವುದೇ ಅಪಾಯವಿಲ್ಲ. ಇದಕ್ಕೆ ಪೂರಕವಾಗಿ ಮಕ್ಕಳಲ್ಲಿ ಧಾರ್ಮಿಕತೆಯೊಂದಿಗೆ ರಾಷ್ಟ್ರೀಯತೆಯನ್ನು ಬೆಳೆಸಬೇಕು. ಬದುಕು ಶಿಕ್ಷಣವನ್ನು ಕೊಡಿಸಬೇಕು. ಸತ್ಸಂಕಲ್ಪದ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಿರುವ ಪ್ರಧಾನಿ […]

Read More

2019-20ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ

2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀಗುರುದೇವ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿರುತ್ತದೆ ಮತ್ತು ಶ್ರೀ ಗುರುದೇವ ಕನ್ನಡ ಮಾಧ್ಯಮ ಶಾಲೆಯು ಶೇಕಡಾ 80 ರ ಫಲಿತಾಂಶವನ್ನು ಪಡೆದಿರುತ್ತದೆ. 4 ವಿದ್ಯಾರ್ಥಿಗಳು A+ ಗ್ರೇಡ್ ಹಾಗೂ 7ವಿದ್ಯಾರ್ಥಿಗಳು A ಗ್ರೇಡ್‍ಗಳನ್ನು ಪಡೆದಿರುತ್ತಾರೆ. ಆಂಗ್ಲಮಾದ್ಯಮದಲ್ಲಿ ಜಿತೇಶ್ ಪಿ ಶೆಟ್ಟಿ 602 ಅಂಕಗಳೂ ಅಕ್ಷಿತಾ ಎನ್ 579 ಹಾಗೂ ಅನನ್ಯಲಕ್ಷ್ಮಿ 578 ಅಂಕಗಳನ್ನು ಪಡೆದಿರುತ್ತಾರೆ. ಕನ್ನಡಮಾಧ್ಯಮದಲ್ಲಿ ಶ್ರವಣ್ ಕುಮಾರ್ 585 ಅಂಕಗಳನ್ನು […]

Read More

ಒಡಿಯೂರಿನಲ್ಲಿ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟವನ್ನು ಮುಂದೂಡಲಾಗಿದೆ.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಕರೊನಾ ವೈರಸ್‍ನ ಪರಿಣಾಮ ಭಾರತ ಸರಕಾರದ ಅಧಿಸೂಚನೆಯಂತೆ ಮುಂದೂಡಲಾಗಿದೆ.

Read More

“ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು.” – ಒಡಿಯೂರು ಶ್ರೀ

ಭಾರತೀಯತೆ ಅಂದರೆ ಸಂಸ್ಕೃತಿ. ಮಾತೃಹೃದಯ ಎಲ್ಲವನ್ನೂ ಅಪ್ಪಿಕೊಳ್ಳುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಮಕ್ಕಳ ಬಗ್ಗೆ ನಾವು ಕನಸನ್ನು ಕಾಣುವ. ಮಕ್ಕಳ ಜೊತೆ ಸಮಯ ಕಳೆಯಬೇಕು. ತಾಯಂದಿರು ಭಾಷೆಯ ಹಿಂದಿನ ಸಂಸ್ಕೃತಿಗೆ ಗಮನ ನೀಡಬೇಕು. ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು. ಜೀವನ ಮೌಲ್ಯ ತುಂಬುವ ಕೆಲಸ ತಾಯಿಯಿಂದ ಮನೆಯಲ್ಲೇ ಆಗಬೇಕು. ಆಗ ಮಾತ್ರ ಮಕ್ಕಳು ನಮ್ಮ ಜೊತಿಗಿರುತ್ತಾರೆ. ಭಾರತೀಯತೆಯನ್ನು ಅಳವಡಿಸಿಕೊಂಡರೆ ಮಾತ್ರ ನಿಜವಾದ ಬದುಕು ನಮ್ಮದಾಗುತ್ತದೆ. ಸಂಪತ್ತು – ಆಪತ್ತು ಎರಡಕ್ಕೂ ಕಾರಣ ನಮ್ಮ ನಾಲಿಗೆ. ಆದುದರಿಂದ ಮಾತಿನಲ್ಲಿ […]

Read More

‘ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ’ – ಒಡಿಯೂರು ಶ್ರೀ

‘ಬೀಳ್ಕೊಡುಗೆ ಎನ್ನುವುದು ಭವಿಷ್ಯತ್ತಿನ ಕಡೆಗೆ ಹೋಗಲಿರುವ ಕೊಡುಗೆ. ವಿದ್ಯಾರ್ಥಿ ಬದುಕು ಭೋಗದ ಬದುಕಲ್ಲ, ಇದು ತ್ಯಾಗದ ಬದುಕು. ಕಲ್ಪನಾಲೋಕದ ಬದುಕಿಗಿಂತ ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ. ಉತ್ತಮ ಮಿತ್ರರನ್ನು ಸಂಪಾದಿಸಿ ಗುಣಾತ್ಮಕ ಚಿಂತನೆಯನ್ನು ತಮ್ಮದಾಗಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ಪೋಷಕರು ವಿದ್ಯಾಭ್ಯಾಸ ಮುಂದುವರಿಯಲು ಬಿಡಬೇಕು. ಮಾತೃ ಋಣ, ಶಿಕ್ಷಕರ ಋಣ, ದೇಶದ ಋಣ ಸದಾ ನೆನಪಿನಲ್ಲಿರಬೇಕು’ ಎಂದು ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ಬೀಳ್ಕೊಡುಗೆ […]

Read More

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಕೋಲಾರದಲ್ಲಿ ಜರಗಿದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾಳೆ. ಇವಳಿಗೆ ಶಾಲಾ ಸಂಸ್ಕøತ ಅಧ್ಯಾಪಕಿ ಶ್ರೀಮತಿ ನಿವೇದಿತಾ ರವರು ಮಾರ್ಗದರ್ಶನವನ್ನು ನೀಡಿರುತ್ತಾರೆ.

Read More

ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ: ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನ

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನೈತಿಕ ಶಿಕ್ಷಣ ಯೋಜನೆಯನ್ವಯ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ ವಿಭಾಗದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 9ನೇ ತರಗತಿ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾಳೆ

Read More

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top