+91 8255-266211
info@shreeodiyoor.org

ಸಂಸ್ಕಾರದಿಂದ ಆದರ್ಶ ಪ್ರಜೆಗಳಾಗಲು ಸಾಧ್ಯ

ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಅರಳಿಸುವ ಕಾರ್ಯಗಳನ್ನು ಮಾಡುವ ಶಿಬಿರಗಳು ಅತ್ಯಂತ ಪ್ರಯೋಜನಕಾರಿ. ಹಾಲಿಗೆ ಸಂಸ್ಕಾರ ಸಿಕ್ಕಿದಾಗ ಹೇಗೆ ಮೊಸರು, ಬೆಣ್ಣೆ, ತುಪ್ಪಗಳಂತಹ ಸುವಸ್ತುಗಳು ದೊರಕುತ್ತವೆಯೋ ಹಾಗೆಯೇ ಮಕ್ಕಳಿಗೆ ಸಂಸ್ಕಾರ ದೊರೆತಾಗ ಆದರ್ಶ ಪ್ರಜೆಗಳಾಗಿ ಬೆಳೆಯುತ್ತಾರೆ. ಪುಟ್ಟ ಮಕ್ಕಳ ದಿಟ್ಟ ಹೆಜ್ಜೆಯನ್ನು ಬಲಗೊಳಿಸಲು ಇಂತಹ ಶಿಬಿರಗಳು ಸಹಕಾರಿ. ಶಿಬಿರದಿಂದ ಕಲಿತ ವಿಷಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾತ್ವಿಕರಾದಾಗ ಉತ್ತಮ ಜೀವನ ನಮ್ಮದಾಗುತ್ತದೆ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಮೂರು ದಿನಗಳ ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಈ ಸುಸಂದರ್ಭ ಉಪಸ್ಥಿತರಿದ್ದ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ ವಿದ್ಯಾರ್ಥಿ ಜೀವನವು ಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪೂಜ್ಯ ಶ್ರೀಗಳವರು ಸತ್ಸಂಕಲ್ಪದ ಈ ಶಿಬಿರದಲ್ಲಿ ನಿಮ್ಮೊಂದಿಗೆ ನಾನೂ ಸಹ ಶಿಬಿರದ ಪ್ರಯೋಜನವನ್ನು ಪಡೆಯುತ್ತಿದ್ದೇನೆ ಎಂದರು.

ವೇದಿಕೆಯಲ್ಲಿ ರಂಗ ತರಬೇತಿಯನ್ನು ನೀಡಿದ ಹಿರಿಯ ಪತ್ರಕರ್ತರಾದ ಶ್ರೀ ಮಲಾರು ಜಯರಾಮ ರೈ, ಶ್ರೀ ಶಿವಗಿರಿ ಕಲ್ಲಡ್ಕ, ಮೂರ್ಕಜೆ ಮೈತ್ರೇಯಿ ಗುರುಕುಲದ ಭಗಿನಿ ಶ್ರೀಮತಿ ಚಂಪಕ, ನೃತ್ಯ ಭಜನಾ ತರಬೇತಿ ನೀಡಿದ ಶ್ರೀ ಯೋಗೀಶ್ ನರಿಕೊಂಬು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಹಳೆವಿದ್ಯಾರ್ಥಿ ಕು| ಶ್ರದ್ಧಾ, 2017-18ರ ಶಾಲಾ ವಿದ್ಯಾರ್ಥಿ ನಾಯಕ ಕು| ಯತಿನ್, ಉಪನಾಯಕಿ ಕು| ಶರಣ್ಯ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ನೃತ್ಯ ಭಜನೆ, ಯೋಗ, ಕಿರು ನಾಟಕ ಪ್ರದರ್ಶನಗೈದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಾದ ಶರಣ್ಯ, ಮಂಜುನಾಥ್, ಲಿಖಿತ್ ಶೆಟ್ಟಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶ್ರೀಮತಿ ರೇಣುಕಾ ಎಸ್.ರೈ ಶಿಬಿರಗೀತೆ ಹಾಡಿಸಿದರು. ಕು| ಅಕ್ಷಿತಾ ಸ್ವಾಗತಿಸಿ, ಕು| ಜೆವಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಕು| ಅನನ್ಯಲಕ್ಷ್ಮೀ ವಂದನಾರ್ಪಣೆಗೈದರು.

ಶಿಬಿರದಲ್ಲಿ ದಿನೇಶ್ ಹೊಳ್ಳ ಇವರು ಕನ್ನಡ ಅಕ್ಷರಗಳನ್ನು ಬೇರೆ ಬೇರೆ ಆಕೃತಿಗಳಾದ ವೃತ್ತ, ತ್ರಿಭುಜ, ಆಯತ, ಚೌಕ, ಸರಳರೇಖೆ. ವಕ್ರರೇಖೆಗಳನ್ನು ಬಳಸಿ ಹೇಗೆ ಬರೆಯುವುದು ಹಾಗೂ ಗಾಳಿಪಟ ತಯಾರಿಸುವ ತರಬೇತಿ ನೀಡುವುದರೊಂದಿಗೆ ಪರಿಸರ ಜಾಗೃತಿಯ ಅರಿವು ಮೂಡಿಸಿದರು. ಶಿವಗಿರಿ ಕಲ್ಲಡ್ಕ ಮತ್ತು ಸೇರಾಜೆ ಗಣಪತಿ ಭಟ್ ಇವರು ರಂಗ ತರಬೇತಿ ನೀಡಿದರು. ಮೈತ್ರೇಯಿ ಗುರುಕುಲದ ಭಗಿನಿಯರಾದ ಶ್ರೀಮತಿ ಚಂಪಕ, ಕು| ತೇಜಸ್ವಿನಿ, ಕು| ಮೇಘನಾ ಯೋಗ ತರಬೇತಿ ನೀಡಿದರು. ತಾರಾನಾಥ ಕೈರಂಗಳ ಇವರು ಕೊಲಾಜ್ ಚಿತ್ರ ಬಿಡಿಸುವ ಹಾಗೂ ಯೋಗೀಶ್ ನರಿಕೊಂಬು ಕುಣಿತ ಭಜನೆಯ ತರಬೇತಿ ನೀಡಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top