+91 8255-266211
info@shreeodiyoor.org

ಶಿಕ್ಷಕ-ರಕ್ಷಕ ಸಭೆ

ಶಿಕ್ಷಕ ರಕ್ಷಕ ಮತ್ತು ಆಢಳಿತ ಮಂಡಳಿಯು ವಿದ್ಯಾಲಯದ ತ್ರಿವೇಣಿ ಸಂಗಮವಿದ್ದಂತೆ.ಕ್ಷಣ ಕ್ಷಣದಲ್ಲೂ ಪರಿವರ್ತನೆ ಶಿಕ್ಷಣದಿಂದ ಸಾಧ್ಯ. ಶಿಕ್ಷಣದ ಜೊತೆಗೆ ಜೀವನ ಶಿಕ್ಷಣವನ್ನು ಪಡೆಯುವಲ್ಲಿ ಪೋಷಕರ ಜವಾಬ್ದಾರಿ ಮುಖ್ಯ.

ನಾವು ನಾವಾಗುವುದು ನಮ್ಮತನವನ್ನು ನಮ್ಮಲ್ಲಿ ಬೆಳೆಸಿಕೊಂಡಾಗ ಸಾಧ್ಯ. ವಿದ್ಯಾಮಂದಿರವೆಂಬುದು ಸರ್ವರ ದೇವಾಲಯ, ಮನಸ್ಸನ್ನುಸ್ವಚ್ಚಗೊಳಿಸಬೇಕು ಮತ್ತು ತಿದ್ದಿತೀಡುವ ಕಾರ್ಯ ತಾಯಂದಿರಿಂದಾಗಬೇಕು ಎಂದು ಪರಮಪೂಜ್ಯ ಒಡಿಯೂರು ಶ್ರೀಗುರುದೇವಾನಂದ ಸ್ವಾಮಿಗಳವರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ-ರಕ್ಷಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಭೆಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರು ಉಪಸ್ಥಿತಿಯಿದ್ದರು. ಆಡಳಿತ ಮಂಡಲಿಯ ಸದಸ್ಯರಾದ ಶ್ರೀ ಎಚ್.ಕೆ. ಪುರುಷೋತ್ತಮ, ಶ್ರೀ ಟಿ. ತಾರಾನಾಥ ಕೊಟ್ಟಾರಿ, ಶ್ರೀ ಜಯಂತ ಜೆ.ಕೋಟ್ಯಾನ್, ಶ್ರೀ ಬಿ. ಕೆ. ಚಂದ್ರಶೇಖರ್, ಶ್ರೀ ವಾಸುದೇವ ಕೊಟ್ಟಾರಿ ಉಪಸ್ಥಿತರಿದ್ದ ಸಭೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ.ಎ ಸ್ವಾಗತಿಸಿ ಶಾಲಾ ಸಂಚಾಲಕರು ಪ್ರಾಸ್ತಾವನೆಗೈದರು. ಪೋಷಕರು ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಿದರು. ಶಿಕ್ಷಕಿ ಶ್ರೀಮತಿ ಸುಪ್ರಭ ನಿರೂಪಿಸಿದ ಸಭೆಗೆ ಪ್ರಾಥಮಿಕ ಶಾಲಾ ಮಖ್ಯೋಪಾಧ್ಯಾಯಿನಿ ಕು. ನವಿತಾ ಬಿ.ಆರ್. ಧನ್ಯವಾದವಿತ್ತರು.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top