+91 8255-266211
info@shreeodiyoor.org

ಶೈಕ್ಷಣಿಕ ವರ್ಷದ ಮಾತೃಮಂಡಳಿ ಉದ್ಘಾಟನೆ

 

ತಾಯಿ ಮತ್ತು ಮಗುವಿನ ಪ್ರೀತಿ, ವಾತ್ಸಲ್ಯಮಯ ಜೀವನ ಸಮಾಜದ ಅಸ್ತಿತ್ವವನ್ನು ಉಳಿಸುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಎಲ್ಲಿದೆಯೆಂದು ಕೇಳಿದರೆ ಅದು ಅಡಕವಾಗಿರುವುದು ತಾಯಿ-ಮಗುವಿನ ವಾತ್ಸಲ್ಯದಲ್ಲಾಗಿದೆ. ನಾವು ಮಕ್ಕಳಿಗೆ ಆಸ್ತಿಯನ್ನು ಮಾಡಿಡುವುದರ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕಾಗಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು 2018-19ನೇ ಶೈಕ್ಷಣಿಕ ವರ್ಷದ  ಮಾತೃಮಂಡಳಿ ಸಭೆಯನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಸಂಸ್ಕಾರದ ಬೆಳಕು ಮೂಡಬೇಕಾದರೆ ಮಹಿಳೆ ಸದಾ ಜಾಗೃತರಾಗಿರಬೇಕು, ಮಕ್ಕಳ ತಪ್ಪುಗಳನ್ನು ಪ್ರೀತಿಯಿಂದ ತಿದ್ದಿದಾಗ ಉತ್ತಮ ಸಮಾಜ ನಿರ್ಮಾಣ ಸಾದ್ಯ ಎಂದು ಸಾಧ್ವಿಶ್ರೀ ಮಾತಾನಂದಮಯಿಯವರು ಹೇಳಿದರು.

ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಶ್ರೀ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಪನ್ಮೂಲ ವ್ಯಕ್ತಿಯಾಗಿ ಡಾ| ರಾಮಚಂದ್ರ ಭಟ್ ಇವರು ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಶ್ರೀ ಜಯಪ್ರಕಾಶ್ ಶೆಟ್ಟಿ ಎ ಮತ್ತು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿಯಾದ ಶ್ರೀಮತಿ ರೇಣುಕಾ ಎಸ್ ರೈ ಮತ್ತು ಶ್ರೀ ಅಜಿತ್‌ನಾಥ್ ಶೆಟ್ಟಿ ಉಪಸ್ಥಿತರಿದ್ದರು. 2018-19ನೇ ವರ್ಷದ ಮಾತೃಮಂಡಳಿಯ ಸಂಚಾಲಕಿಯಾಗಿ ಶ್ರೀಮತಿ ಸವಿತಾಲಕ್ಷ್ಮಿ, ಕಾರ್ಯದರ್ಶಿಯಾಗಿ ಶಾಲಾ ಶಿಕ್ಷಕಿ ಕು. ಚೈತ್ರಾ, ಸಹ ಕಾರ್ಯದರ್ಶಿಯಾಗಿ ಶ್ರೀಮತಿ ಸುಜಾತ ಆಯ್ಕೆಯಾದರು. ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ಕು. ದೀಪಶ್ರೀ ನಿರೂಪಿಸಿ, ಕು. ಸ್ಮಿತಾ ಸ್ವಾಗತಿಸಿ, ಕಿಶನ್ ಕೃಷ್ಣ ಧನ್ಯವಾದವಿತ್ತರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top