ಕನ್ಯಾನ ಮತ್ತು ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಗೆ ಸಕಲ ಸೌಕರ್ಯಗಳನ್ನೊಳಗೊಂಡ ಉತ್ತಮ ತಾಂತ್ರಿಕ ತರಬೇತಿ ನೀಡುವ ಉದ್ದೇಶದಿಂದ ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಒಡಿಯೂರು ಇದರ ವತಿಯಿಂದ ಉದ್ಯೋಗ ಖಾತ್ರಿಯ ಒಡಿಯೂರು ಶ್ರೀ ಗುರುದೇವ ಐಟಿಐ (ಪ್ರೈ) ಅನ್ನು ಕನ್ಯಾನದಲ್ಲಿ ಫೆ. 12, 2012ರಂದು ಪ್ರಾರಂಭಿಸಲಾಯಿತು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ. ಸದಾನಂದ ಗೌಡ ಅವರು ಐಟಿಐ ಅನ್ನು ಉದ್ಘಾಟಿಸಿದರು.
ಒಡಿಯೂರು ಐಟಿಐಯಲ್ಲಿ ಡ್ರಾಪ್ಟ್ಸ್‍ಮೆನ್ ಸಿವಿಲ್, ಇಲೆಕ್ಟ್ರೀಷಿಯನ್ ಮತ್ತು ಮೆಕಾನಿಕ್ಸ್ ರೆಫ್ರೀಜರೇಷನ್ ಮತ್ತು ಎರ್‍ಕಂಡೀಷನಿಂಗ್ ಎಂಬ ಎರಡು ವರ್ಷದ ವೃತ್ತಿಗಳ ತರಬೇತಿ ನೀಡಲಾಗುವುದು. ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತು ನವದೆಹಲಿ (ಓಅಗಿಖಿ) ಇದರ ಸಂಯೋಜನೆ ಹಾಗೂ ಕಿuಚಿಟiಣಥಿ ಅouಟಿಛಿiಟ oಜಿ Iಟಿಜiಚಿ ಇದರ ಮಾನ್ಯತೆಯನ್ನು ಈ ಐಟಿಐ ಪಡೆದಿದೆ.
ಅತ್ಯಾಧುನಿಕ ಸಲಕರಣೆಗಳನ್ನೊಳಗೊಂಡ ಪ್ರಯೋಗಾಲಯ, ಗ್ರಂಥಾಲಯ, ಸುಸಜ್ಜಿತ ಕಟ್ಟಡ, ನುರಿತ ಅಧ್ಯಾಪಕರ ತಂಡದೊಂದಿಗೆ ತರಬೇತಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಆಂಗ್ಲ ಭಾಷಾ ತರಬೇತಿ ಕೊಡಲಾಗುವುದು.
ಪ್ರಸಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೈಗಾರಿಕಾ ಸಂಸ್ಥೆಗಳ ಜತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಶೇ. 100 ಉದ್ಯೋಗ ಖಾತ್ರಿಯಾಗಿದೆ.
(ಸಂಪರ್ಕಿಸಿ : 08255-266800. 9449486584)