+91 8255-266211
info@shreeodiyoor.org

ಕೆಸರುಗದ್ದೆ ಆಟೋಟ ಸ್ವರ್ಧೆ

ಕ್ರೀಡೆಗಳು ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಮಣ್ಣಿನಲ್ಲಿ ಔಷಧೀಯ ಗುಣಗಳಿದ್ದು ಕೆಸರುಗದ್ದೆಯ ಆಟೋಟಗಳು ಆರೋಗ್ಯ ಸಂರಕ್ಷಣೆಗೂ ಪೂರಕವಾಗಿದೆ. ಗ್ರಾಮೋತ್ಸವ ಸಂಸ್ಕೃತಿಯ ಒಂದು ಭಾಗವಾಗಿದೆ. ಗ್ರಾಮೋತ್ಸವ ಎಂದರೆ ಸಂಸ್ಕೃತಿಯ ಉತ್ಸವ. ಕೃಷಿ ಉಳಿದರೆ ಸಂಸ್ಕೃತಿಯೂ ಉಳಿಯುತ್ತದೆ. ಸಂಸ್ಕೃತಿ ಉಳಿಯಬೇಕಾದರೆ ಭಾಷೆಯೂ ಉಳಿಯಬೇಕು. ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕಿದೆ. ಭಾರತ ದೇಶದ ಸಂಸ್ಕೃತಿಯೇ ಕೃಷಿ ಸಂಸ್ಕೃತಿ. ಆ ಮೂಲಕ ಕೃಷಿಯ ಬಗ್ಗೆ ಆತ್ಮಾವಲೋಕನ ಮಾಡುವಂತಹ ಕಾರ್ಯ ಈ ಗ್ರಾಮೋತ್ಸವದ ಮೂಲಕ ನಡೆಯುತ್ತಿದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.

ಗ್ರಾಮೋತ್ಸವ-ಪೂಜ್ಯ ಶ್ರೀಗಳವರ ಜನ್ಮದಿನೋತ್ಸವದ ಅಂಗವಾಗಿ ಶ್ರೀ ಸಂಸ್ಥಾನದ ಕೃಷಿಭೂಮಿ ಬನಾರಿಯಲ್ಲಿ ಏರ್ಪಡಿಸಿದ್ದ (ಕೆಸರ್‌ಡೊಂಜಿ ದಿನ) ಕೆಸರುಗದ್ದೆ ಆಟೋಟ ಸ್ವರ್ಧೆಗಳನ್ನು ಉದ್ಘಾಟಿಸಿ ಸಂದೇಶ ನೀಡಿದ ಪೂಜ್ಯ ಶ್ರೀಗಳವರು ಒಂದು ದೇಶದ ಸಂಸ್ಕೃತಿಯನ್ನು ಅಳೆಯುವುದು ಅಲ್ಲಿಯ ಶ್ರೀಮಂತಿಕೆ ಅಥವಾ ಭೌಗೋಳಿಕ ನೆಲೆಯಿಂದಲ್ಲ. ಬದಲಾಗಿ ಆ ದೇಶದ ಪ್ರಜೆಗಳು ಎಷ್ಟು ಸುಸಂಸ್ಕೃತರು, ಪ್ರಜ್ಞಾವಂತರು ಎಂಬ ಮಾಪನದಿಂದ. ಆದ್ದರಿಂದ ದೇಶದ ಪ್ರಜೆಗಳು ಪ್ರಜ್ಞಾವಂತರಾದಾಗ ಆದರ್ಶ ಸಮಾಜ ನಿರ್ಮಾಣವಾಗುತ್ತದೆ. ಮಾನವೀಯ ಮೌಲ್ಯಗಳು ಕುಸಿಯುವಂತಹ ಈ ಸಂದರ್ಭದಲ್ಲಿ ದೇಶದ ಸುಸ್ಥಿರವನ್ನು ಕಾಪಾಡುವಲ್ಲಿ ಮಕ್ಕಳಿಗೆ ರಾಷ್ಟ್ರಪ್ರೇಮ ಹುಟ್ಟಿಸುವ ಕಾರ್ಯವನ್ನು ಮಾಡಬೇಕಾಗಿದೆ. ಕೃಷಿ ಸಂಸ್ಕೃತಿಯ ಜೊತೆಗೆ ಋಷಿ ಸಂಸ್ಕೃತಿಯ ಅರಿವಿನೊಂದಿಗೆ ಧರ್ಮಪ್ರಜ್ಞೆಯ ಬದುಕೂ ನಮ್ಮದಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಬದುಕುವ ಶಕ್ತಿ ಧರ್ಮದಲ್ಲಿದೆ. ಅಧರ್ಮದ ವಿರುದ್ಧ ಹೋರಾಡುವ ಸೈನಿಕರಿಗೂ ಶಕ್ತಿ ತುಂಬೋಣ ಎಂದರು.

ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಶೆಟ್ಟಿ ಮಂಗಳೂರು, ಕೋಶಾಧಿಕಾರಿ ಶ್ರೀ ಬಿ.ಕೆ. ಚಂದ್ರಶೇಖರ್, ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಎಚ್.ಕೆ. ಪುರುಷೋತ್ತಮ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ|ಎಂ.ಜೆ.ಎಫ್.|- ಎ. ಸುರೇಶ್ ರೈ, ನಿರ್ದೇಶಕರಾದ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಶ್ರೀ ದೇವಪ್ಪ ನೋಂಡ ಪುತ್ತೂರು, ಶ್ರೀ ವೇಣುಗೋಪಾಲ ಮಾರ್ಲ ಹಾಗೂ ಶ್ರೀ ಯಶವಂತ್ ವಿಟ್ಲ ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ಜನ್ಮದಿನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸದಾಶಿವ ಅಳಿಕೆ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕ ಶ್ರೀ ಎ. ಜಯಪ್ರಕಾಶ್ ಶೆಟ್ಟಿ ವಂದಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top