+91 8255-266211
info@shreeodiyoor.org

ಒಳಾಂಗಣ ಸ್ಪರ್ಧೆ ಉದ್ಘಾಟನೆ


 
“ಪ್ರತಿಯೊಬ್ಬರೂ ದೇಶಪ್ರೇಮವನ್ನು ಬೆಳೆಸಿಕೊಂಡಾಗ ಸುಭದ್ರ-ಸಂಪದ್ಭರಿತ ದೇಶ ಕಟ್ಟಲು ಸಾಧ್ಯ. ಭಗವಂತನಲ್ಲಿ ಪರಿಶುದ್ಧ ಭಕ್ತಿಯಿಂದ ಮಾಡಿದ ಪ್ರಾರ್ಥನೆಗೆ ಅನುಗ್ರಹ ಲಭಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಒಡಿಯೂರು ಗ್ರಾಮೋತ್ಸವ 2019 ಅಂಗವಾಗಿ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆಯೋಜಿಸಿದ್ದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನಗೈದರು.

ವೇದಿಕೆಯಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಮಾಜಿ ಯೋಧ ಶ್ರೀ ವಿಠಲ ಶೆಟ್ಟಿ ಅಗರಿಬಾಳಿಕೆ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಲ| ಎಂ.ಜೆ.ಎಫ್.| ಎ. ಸುರೇಶ್ ರೈ, ನಿರ್ದೇಶಕರಾದ ಶ್ರೀ ಪಿ. ಲಿಂಗಪ್ಪ ಗೌಡ ಪನೆಯಡ್ಕ, ಶ್ರೀ ವೇಣುಗೋಪಾಲ ಮಾರ್ಲ, ಹಿರಿಯ ಪತ್ರಕರ್ತ ಶ್ರೀ ಯಶವಂತ ವಿಟ್ಲ, ಒಡಿಯೂರು ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಪ್ರಚಾರ ಸಮಿತಿಯ ಸಂಚಾಲಕ ಶ್ರೀ ಅಜಿತ್‍ನಾಥ್ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಉಡುಪಿಯ ಕಾರ್ಯದರ್ಶಿ ಶ್ರೀಮತಿ ಅಮಿತಾ ಗಿರೀಶ್, ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಉರ್ವ ಸ್ವಾಗತಿಸಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ವಂದಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕಿ ಶ್ರೀಮತಿ ಲೀಲಾ ನಿರೂಪಿಸಿದರು.

ಬಾಲಕಿಯರಿಗೆ: ಸಂಗೀತ ಕುರ್ಚಿ, ರಂಗೋಲಿ ಸ್ಪರ್ಧೆ, ಭಕ್ತಿಗೀತೆ, ಶಟ್ಲ್ ಬ್ಯಾಡ್ಮಂಟನ್ (ಡಬಲ್ಸ್) ಬಾಲಕರಿಗೆ: ಭಕ್ತಿಗೀತೆ, ಶಟ್ಲ್ ಬ್ಯಾಡ್ಮಿಂಟನ್ (ಡಬಲ್ಸ್), ಪೆನ್ಸಿಲ್ ಡ್ರಾಯಿಂಗ್, ಪುರುಷರಿಗೆ: ಚಕ್ರಾಸನ, ಆನೆಗೆ ಬಾಲ ಬಿಡಿಸುವುದು, ಭಕ್ತಿಗೀತೆ, ತೆಂಗಿನಕಾಯಿ ಸುಲಿಯುವುದು, ಹಣತೆ ಉರಿಸುವುದು. ಮುಕ್ತ ಸ್ಪರ್ಧೆಗಳು – ಆಶುಭಾಷಣ, ಚೀಟಿ ಹೆಕ್ಕಿ ಅಭಿನಯಿಸುವುದು, ಛದ್ಮವೇಷ, ಭಗವದ್ಗೀತೆ ಕಂಠಪಾಠ (8ನೇ ಅಧ್ಯಾಯದ 11ರಿಂದ 18ನೇ ಶ್ಲೋಕದ ತನಕ), ಭಜನಾ ಅಂತ್ಯಾಕ್ಷರಿ, ಕಿರಿಯರ ವಿಭಾಗ – ಮುಕ್ತ ಸ್ಪರ್ಧೆ: ಭಗವದ್ಗೀತೆ ಕಂಠಪಾಠ ಸ್ಪರ್ಧೆ (7ನೇ ಅಧ್ಯಾಯದ 7ರಿಂದ 12 ನೇ ಶ್ಲೋಕದ ತನಕ), ಆಶುಭಾಷಣ, ಚೀಟಿ ಹೆಕ್ಕಿ ಅಭಿನಯಿಸುವುದು, ಛದ್ಮವೇಷ ನಿಧಿ ಶೋಧನೆ ಮುಂತಾದ ಸ್ಪರ್ಧೆಗಳು ನಡೆದುವು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top