+91 8255-266211
info@shreeodiyoor.org

ಸ್ವಾತಂತ್ರ್ಯೋತ್ಸವ ದಿನಾಚರಣೆ

ಧರ್ಮ ಪ್ರಜ್ಞೆಯ ರಾಷ್ಟ್ರಪ್ರೇಮ ನಮ್ಮದಾದರೆ ಸಮಾಜ ಸ್ವಸ್ಥ : ಒಡಿಯೂರುಶ್ರೀ

ನಾನು ಎಂಬ ಅಹಂಕಾರವನ್ನು ದೂರವಿಟ್ಟಾಗ ನಮ್ಮ ಅಂತರಂಗ ಬೆಳೆಯುತ್ತದೆ. ಆಗ ಆಧ್ಯಾತ್ಮ ಶಕ್ತಿ ನಮ್ಮಲ್ಲಿ ಬೆಳೆದು ಸಮಾಜ ಸುವ್ಯವಸ್ಥಿತವಾಗಿರುತ್ತದೆ. ಧರ್ಮ ಪ್ರೀತಿಯ ಜೊತೆಗೆ ಮನಸ್ಸು ಶುದ್ಧವಾಗಿರಬೇಕು. ಅದುವೇ ಧರ್ಮಪ್ರಜ್ಞೆ . ಧರ್ಮ ಪ್ರಜ್ಞೆಯ ರಾಷ್ಟ್ರಪ್ರೇಮ ನಮ್ಮದಾದರೆ ಸಮಾಜ ಸ್ವಸ್ಥವಾಗಿರಲು ಸಾಧ್ಯ. ಮಕ್ಕಳಿಗೆ ಪ್ರಾಥಮಿಕದಲ್ಲೇ ಅಡಿಪಾಯವನ್ನು ಗಟ್ಟಿಗೊಳಿಸಿದರೆ ದುಶ್ಚಟಗಳಗೆ ಬಲಿಯಾಗದೆ ಸುಗಮವಾಗಿ ಜೀವನವನ್ನು ಸಾಗಿಸಬಹುದು. ಧರ್ಮಪ್ರಜ್ಞೆಯ ಕಾರ್ಯವು ನೈತಿಕ ಶಿಕ್ಷಣದಿಂದ ಮಾತ್ರ ಸಾಧ್ಯ. ಆ ಶಿಕ್ಷಣ ಕಲಿತ ಮಕ್ಕಳು ರಾಷ್ಟ್ರಕಟ್ಟುವ ಸೇನಾನಾಯಕರುಗಳಾಗುತ್ತಾರೆ. ಯಾವುದನ್ನು ಮರೆತರೂ ಕೂಡ ರಾಷ್ಟಪ್ರೇಮವನ್ನು ಮರೆಯಬಾರದು ಎಂದು ಒಡಿಯೂರಿನ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಇವರು ಆ. 15 ರಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ನಡೆದ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಶ್ರೀಧರ ಶೆಟ್ಟಿ ಗುಬ್ಯ, ಕೃಷ್ಣನ್ ಚೆರ್ವತ್ತೂರು, ಕ್ಷೇತ್ರದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಗ್ರಾಮ ವಿಕಾಸ ಕೇಂದ್ರದ ಪ್ರಧಾನ ಸಂಚಾಲಕ ತಾರನಾಥ ಕೊಟ್ಟಾರಿ, ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿವಿಧ ಆಟೋಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಿತು. ಇದನ್ನು ವಿದ್ಯಾಪೀಠದ ಸಹಶಿಕ್ಷಕರಾದ ಶಶಿಧರ್ ಪಿ. , ಸಹಶಿಕ್ಷಕಿ ವಿದ್ಯಾಲಕ್ಷ್ಮಿ ಯನ್., ಚೈತ್ರಾ, ನವಿತಾ ವಾಚಿಸಿದರು.

ವಿದ್ಯಾರ್ಥಿಗಳಾದ ಮಹೇಶ್, ಅನೀಶ್, ದೀಪಶ್ರೀ, ಅವನೀಶ್, ಜಿತೇಶ್, ಶ್ರೀರಕ್ಷಾರವರಿಂದ ಪ್ರತಿಭಾ ಪ್ರದರ್ಶನ ನಡೆಯಿತು.
ವಿದ್ಯಾರ್ಥಿ ಅವನೀಶ್ ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕ ಶರತ್ ಆಳ್ವ ಕಾರ್ಯಕ್ರಮ ನಿರೂಪಿಸದರು. ಶಾಲಾ ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್. ರೈ ವಂದಿಸಿದರು. ಶಾಂತಿಮಂತ್ರದ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top