+91 8255-266211
info@shreeodiyoor.org

ಕೆ. ಮಧುರಾ ದ.ಕ. ಜಿಲ್ಲೆಗೆ ಪ್ರಥಮ

 

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಕರೋಪಾಡಿ ಗ್ರಾಮ ಬಂಟ್ವಾಳ ತಾಲೂಕು, ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ದುಶ್ಚಟಮುಕ್ತ ಭಾರತಕ್ಕೆ ವಿದ್ಯಾರ್ಥಿಗಳ ಪಾತ್ರ’ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆ.ಮಧುರಾ 10ನೇ ತರಗತಿ ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ ಪುತ್ತೂರು ತಾಲೂಕು, ದ್ವಿತೀಯ ಬಹುಮಾನ ಸಂಧ್ಯಾ ಕೆ. 10ನೇ ತರಗತಿ ಪೊಂಪೈ ಪ್ರೌಢಶಾಲೆ ಉರ್ವ ಮಂಗಳೂರು ಉತ್ತರ ತಾಲೂಕು ಹಾಗೂ ತೃತೀಯ ಬಹುಮಾನ ಅನಿರುದ್ಧ ಕನ್ನಡಗುಳಿ 9ನೇ ತರಗತಿ ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ ಬಂಟ್ವಾಳ ತಾಲೂಕು ಪಡೆದುಕೊಂಡಿದ್ದಾರೆ.

ಅದೇ ರೀತಿ ಮಂಗಳೂರು ಉತ್ತರ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಸಂಧ್ಯಾ ಕೆ. 10ನೇ ತರಗತಿ ಪೊಂಪೈ ಪ್ರೌಢಶಾಲೆ ಉರ್ವ ಮಂಗಳೂರು, ದ್ವಿತೀಯ ಬಹುಮಾನವನ್ನು ಶ್ರೀವಿದ್ಯಾ 8ನೇ ತರಗತಿ, ಸಂಯುಕ್ತ ಪದವಿಪೂರ್ವ ಕಾಲೇಜು ಬಲ್ಮಠ, ತೃತೀಯ ಬಹುಮಾನವನ್ನು ವೈಷ್ಣವಿ 10ನೇ ತರಗತಿ, ಶ್ರೀ ದುರ್ಗಾಪರಮೇಶ್ವರಿ ದೇವಳ ಸಂಯುಕ್ತ ಪದವಿಪೂರ್ವ ಕಾಲೇಜು ಕಟೀಲು ಪಡೆದುಕೊಂಡಿದ್ದಾರೆ.

ಮಂಗಳೂರು ದಕ್ಷಿಣ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಪಲ್ಲವಿ ಸಿ. 10ನೇ ತರಗತಿ, ಸ್ವಾಮಿ ಸದಾನಂದ ಸರಸ್ವತಿ ಆಂಗ್ಲಮಾಧ್ಯಮ ಶಾಲೆ ನಂತೂರು, ದ್ವಿತೀಯ ಬಹುಮಾನವನ್ನು ಪ್ರಜ್ಞ 10ನೇ ತರಗತಿ, ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ, ತೃತೀಯ ಬಹುಮಾನವನ್ನು ತಸ್ಮೈ 10ನೇ ತರಗತಿ. ಶ್ರೀ ರಾಮಕೃಷ್ಣ ಶಾಲೆ ಮಂಗಳೂರು ಪಡೆದುಕೊಂಡಿದ್ದಾರೆ..
ಮೂಡಬಿದ್ರೆ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಸುನಿಧಿ ಎಸ್. 10ನೇ ತರಗತಿ ಜೈನ ಪ್ರೌಢಶಾಲೆ ಮೂಡಬಿದ್ರೆ, ದ್ವಿತೀಯ ಬಹುಮಾನವನ್ನು ಅಶ್ವಿನಿ 10ನೇ ತರಗತಿ ಆಳ್ವಾಸ್ ಕನ್ನಡಮಾಧ್ಯಮ ಶಾಲೆ, ತೃತೀಯ ಬಹುಮಾನವನ್ನು ಪ್ರದ್ಯುಮ್ನ 10ನೇ ತರಗತಿ ರೋಟರಿ ಪ್ರೌಢಶಾಲೆ ಮೂಡಬಿದ್ರೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಅನಿರುದ್ಧ ಕನ್ನಡಗುಳಿ 9ನೇ ತರಗತಿ, ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ, ದ್ವಿತೀಯ ಬಹುಮಾನವನ್ನು ಮಹೇಶ್ ಟಿ. 10ನೇ ತರಗತಿ ಶ್ರೀ ಗುರುದೇವ ಆಂಗ್ಲಮಾಧ್ಯಮ ಪ್ರೌಢಶಾಲೆ ಶಾಲೆ ಒಡಿಯೂರು, ತೃತೀಯ ಬಹುಮಾನವನ್ನು ಪಲ್ಲವಿ 8ನೇ ತರಗತಿ, ದ.ಕ.ಜಿ.ಪಂ.ಹಿ. ಪ್ರೌಢಶಾಲೆ ಕಡಂಬು ಪಡೆದುಕೊಂಡಿದ್ದಾರೆ..

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಸಂಧ್ಯಾ ಬಿ. 9ನೇ ತರಗತಿ, ಸರಕಾರಿ ಪ್ರೌಢಶಾಲೆ ಬದನಾಜೆ ಉಜಿರೆ, ದ್ವಿತೀಯ ಬಹುಮಾನವನ್ನು ಅನನ್ಯ ಹೆಗ್ಡೆ 10ನೇ ತರಗತಿ ಸರಕಾರಿ ಪ್ರೌಢಶಾಲೆ ವೇಣೂರು, ತೃತೀಯ ಬಹುಮಾನವನ್ನು ತೇಜಸ್ವಿನಿ ಕೆ. 10ನೇ ತರಗತಿ, ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಪಡೆದುಕೊಂಡಿದ್ದಾರೆ.

ಪುತ್ತೂರು ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಕೆ.ಮಧುರಾ 10ನೇ ತರಗತಿ, ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿ, ದ್ವಿತೀಯ ಬಹುಮಾನವನ್ನು ಸಿಂಚನ ಟಿ. 9ನೇ ತರಗತಿ, ವಿವೇಕಾನಂದ ಕನ್ನಡಮಾಧ್ಯಮ ಶಾಲೆ ತೆಂಕಿಲ, ತೃತೀಯ ಬಹುಮಾನವನ್ನು ಆಯಿಷತ್ ಶಮಾ 9ನೇ ತರಗತಿ ಎಸ್.ಜಿ.ಎಂ ಪ್ರೌಢಶಾಲೆ ಸರ್ವೆ ಪುತ್ತೂರು ಪಡೆದುಕೊಂಡಿದ್ದಾರೆ.

ಸುಳ್ಯ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಸಿಂಚನ ಸರಸ್ವತಿ ಬಿ. 9ನೇ ತರಗತಿ, ರೋಟರಿ ಪ್ರೌಢಶಾಲೆ ಸುಳ್ಯ, ದ್ವಿತೀಯ ಬಹುಮಾನವನ್ನು ಕವನ ಯಂ.ವಿ. 10ನೇ ತರಗತಿ, ಸ್ನೇಹ ಪ್ರೌಢಶಾಲೆ ಸುಳ್ಯ ಪಡೆದುಕೊಂಡಿದ್ದಾರೆ.

ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದಿನಾಂಕ 08/08/2018 ಬುಧವಾರದಂದು ನಡೆಯುವ ಗ್ರಾಮೋತ್ಸವದ ಸಭಾವೇದಿಕೆಯಲ್ಲಿ ಗೌರವಿಸಲಿದ್ದಾರೆ.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top