+91 8255-266211
info@shreeodiyoor.org

ದಶಮಾನೋತ್ಸವ ಕಾರ್ಯಕ್ರಮ

ನಾಡಿನ ಸರ್ವಜನರ ಶ್ರೇಯಸ್ಸು, ಅಭಿವೃದ್ಧಿಗೆ ಸಂಸ್ಕಾರದ ಮೂಲಕ ಜೀವನ ಮೌಲ್ಯವನ್ನು ರೂಪಿಸುವುದರೊಂದಿಗೆ ರಾಷ್ಟ್ರಕಟ್ಟುವ ಕೆಲಸವನ್ನು ಗ್ರಾಮವಿಕಾಸ ಯೋಜನೆ ಮಾಡುತ್ತಿದೆ. ಬದುಕು ಶಿಕ್ಷಣವನ್ನು ನೀಡುವುದರೊಂದಿಗೆ ಸುಸಂಸ್ಕಾರಯುತ ಸಮಾಜವನ್ನು ನಿರ್ಮಿಸುವ ಮೂಲಕ ರಾಷ್ಟ್ರೋತ್ಥಾನಕ್ಕೆ ನಾಂದಿಯಾಗುತ್ತದೆ. ಭಗವಂತನ ಸೇವೆಯನ್ನು ಭಕ್ತರು ಸಾಮೂಹಿಕವಾಗಿ ಮಾಡಿದಾಗ ಅವನ ಅನುಗ್ರಹದೊಂದಿಗೆ ಪುಣ್ಯಪ್ರಾಪ್ತಿಯಾಗುವುದು. ನಿಸ್ವಾರ್ಥ ಭಾವದಿಂದ ಭಗವಂತನ ಸೇವೆಯನ್ನು ದಶಮಾನೋತ್ಸವ ಆಚರಿಸುತ್ತಿರುವ ಉರ್ವ-ಕೋಡಿಕಲ್ ಘಟಸಮಿತಿಯ ಸದಸ್ಯರುಗಳು ಮಾಡಿದ್ದಾರೆ. ಮಹಿಳೆಯರು ಸ್ವಾವಲಂಬನೆಯೊಂದಿಗೆ ಸಂಘಟನಾತ್ಮಕವಾಗಿ ಸಂಸ್ಕಾರಯುತ ಜೀವನವನ್ನು ನಡೆಸಿಕೊಂಡು ಬಂದಾಗ ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಉರ್ವ ಮಾರಿಗುಡಿಯ ಶ್ರೀ ಮಾರಿಯಮ್ಮ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉರ್ವ-ಕೋಡಿಕಲ್ ಘಟಸಮಿತಿಯ ದಶಮಾನೋತ್ಸವ ಕಾರ್ಯಕ್ರಮ-ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆಯ ಸಂದರ್ಭ ಸಂದೇಶ ನೀಡಿದರು.

ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಎಂಬ ಬೀಜವನ್ನು ಪೂಜ್ಯ ಶ್ರೀಗಳವರು ಹಲವು ವರ್ಷಗಳ ಹಿಂದೆ ಬಿತ್ತಿದ್ದರಿಂದ ಇಂದು ಈ ಪರಿಸರದಲ್ಲಿ ಹೆಮ್ಮರವಾಗಿ ಬೆಳೆದು ಇಂದು ದಶಮಾನೋತ್ಸವವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಮಂಗಳೂರು ವಲಯದ ಅಧ್ಯಕ್ಷ ಶ್ರೀ ಜಯಂತ್ ಜೆ. ಕೋಟ್ಯಾನ್, ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಶ್ರೀ ರಾಧಾಕೃಷ್ಣ, ಮಂಗಳೂರಿನ ನ್ಯಾಯವಾದಿ ಶ್ರೀಮತಿ ಅನಿತಾ ಕಿಣಿ, ಉಪನ್ಯಾಸಕಿ ಶ್ರೀಮತಿ ಕಲಾವತಿ ಪದ್ಮನಾಭ ಬಿಜೈ, ದೇವಿಕಾ ಸಾರೀಸ್‌ನ ಜ್ಯೋತಿ ಜೈನ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಲ|ಎಂ.ಜೆ.ಎಫ್.| ಎ. ಸುರೇಶ್ ರೈ, ನಿರ್ದೇಶಕರಾದ ಶ್ರೀ ಎಚ್.ಕೆ. ಪುರುಷೋತ್ತಮ, ಶ್ರೀ ಬಿ.ಕೆ. ಚಂದ್ರಶೇಖರ್, ಶ್ರೀ ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ದಶಮಾನೋತ್ಸವದ ಅಂಗವಾಗಿ 4 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಅನಾರೋಗ್ಯದಿಂದಿರುವ ೪ ಮಂದಿಗೆ ಧನಸಹಾಯ, ವಿಕಾಸವಾಹಿನಿ ಸ್ವ-ಸಹಾಯ ಸಂಘದ ಸದಸ್ಯರ ಈರ್ವರು ಮಕ್ಕಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಗೌರವಾರ್ಪಣೆ, ರಾಷ್ಟ್ರಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಒಡಿಯೂರು ಶ್ರೀ ಚಿರಶ್ರೀ ವಿಕಾಸ ವಾಹಿನಿ ಸಂಘದ ಸದಸ್ಯೆ ಶ್ರೀಮತಿ ರೇಖಾ ಅವರ ಮಗ ಶ್ರೀ ಪ್ರಥಮ್ ಅವರಿಗೆ ಸಾಧನಾ ಪುರಸ್ಕಾರ, ವಿಕಾಸವಾಹಿನಿ ಸಂಘದ ಪ್ರಾರಂಭಿಕ ಹಂತದಿಂದಲೇ ಸದಸ್ಯರಾಗಿದ್ದು ಯೋಜನೆಯ ಹಾಗೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕಾರ ನೀಡುತ್ತಿರುವ ಶ್ರೀಮತಿ ಶಾರದಾ ಟೀಚರ್, ಶ್ರೀಮತಿ ರೋಹಿಣಿ ಟೀಚರ್ ಅವರನ್ನು ಪೂಜ್ಯ ಶ್ರೀಗಳವರು ಫಲಮಂತ್ರಾಕ್ಷತೆಯಿತ್ತು ಹರಸಿದರು.

ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತವ್ರತಪೂಜೆ ನೆರವೇರಿತು. ವಿವಿಧ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.

ಉರ್ವ-ಕೋಡಿಕಲ್ ಘಟಸಮಿತಿಯ ಅಧ್ಯಕ್ಷೆ ಶ್ರೀಮತಿ ವಸಂತಿ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ವರದಿ ಮಂಡಿಸಿದರು. ವಲಯ ಸಂಯೋಜಕಿ ಸುಮತಿ ವಂದಿಸಿದರು. ಯೋಜನೆ ಮಂಗಳೂರು ತಾಲೂಕು ವಿಸ್ತರಣಾಧಿಕಾರಿ ಶ್ರೀ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top