+91 8255-266211
info@shreeodiyoor.org

ಮಕ್ಕಳಿಗೆ ತಂತ್ರಜ್ಞಾನದ ಜೊತೆಗೆ ತತ್ತ್ವಜ್ಞಾನದ ಅರಿವು ಮೂಡಿಸಬೇಕು

“ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಶಿಕ್ಷಕರ ಮತ್ತು ಪೋಷಕರ ಪ್ರೋತ್ಸಾಹ ಅತ್ಯಗತ್ಯ. ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯಬೇಕಾದರೆ ನೈತಿಕ ಶಿಕ್ಷಣವೂ ಬೇಕು. ಮಕ್ಕಳಿಗೆ ತಾಯಿ ಮೊದಲ ಗುರುವಾದರೆ ಚಟುವಟಿಕೆ ಶಾಲೆಯಿಂದಲೇ ಆರಂಭವಾಗುವುದು. ಪುಟ್ಟ ಮಕ್ಕಳಿಗೆ ಸ್ಪರ್ಧೆ ಬೇಡ; ಇವರ ಪ್ರತಿಭೆಗಳು ಮುಕ್ತವಾಗಿ ಪ್ರದರ್ಶನವಾಗಬೇಕು. ತಾಯಂದಿರು ಮಕ್ಕಳ ಪೋಷಣೆ, ಪಾಲನೆ ಮಾಡುವ ಜೊತೆಗೆ ಬೆಳೆಸುವ ರೀತಿಯನ್ನು ಅವಲೋಕನ ಮಾಡಿಕೊಳ್ಳಬೇಕು. ಯಾಂತ್ರಿಕವಾಗಿ ಮುಂದುವರಿಯುತ್ತಿರುವಾಗ ಮಕ್ಕಳನ್ನು ದಾರಿ ತಪ್ಪಿಸುವ ಯಂತ್ರಗಳಿಗೆ ಕಡಿವಾಣ ಹಾಕಬೇಕು. ತಂತ್ರಜ್ಞಾನದ ಜೊತೆಗೆ ತತ್ತ್ವಜ್ಞಾನದ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಅಧ್ಯಾತ್ಮದ ಶಿಕ್ಷಣಕ್ಕೆ ನಾವೆಲ್ಲರೂ ಮನ ಮಾಡಬೇಕು.” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದ ಸಭೆಯಲ್ಲಿ ಗುರುದೇವ’ ಚಿಣ್ಣರ ಚಿಲುಮೆ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪಬೆಳಗಿಸಿ ಉದ್ಘಾಟಿಸಿದ ಸಾಧ್ವಿ ಶ್ರೀ ಶ್ರೀ ಶ್ರೀಮಾತಾನಂದಮಯೀ ಈ ಸುಸಂದರ್ಭ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕೃಷ್ಣ ಭಟ್, ಹುಬ್ಬಳ್ಳಿ ಆಲ್ಫಾ ಲೈಫ್ ಕೇರ್‌ನ ಕಾರ್ಯನಿರ್ವಹಣಾಧಿಕಾರಿ ಶ್ರೀ ಪಟ್ಲ ದಾಮೋದರ ಶೆಟ್ಟಿ, ಕರೋಪಾಡಿ ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಶ್ವತ್ ಶೆಟ್ಟಿ ಅನೆಯಾಲಮಂಟಮೆ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಶ್ರೀ ಟಿ. ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಂಗಳೂರು ವಯಲದ ಅಧ್ಯಕ್ಷ ಶ್ರೀ ಜಯಂತ್ ಜೆ.ಕೋಟ್ಯಾನ್, ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ಪ್ರಾಂಶುಪಾಲ ಶ್ರೀ ಕರುಣಾಕರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಮೈ ಕೃಷ್ಣ ಭಟ್ ಇವರು ಪಾಲ್ಗೊಂಡಿದ್ದರು.

ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಸಹಶಿಕ್ಷಕಿಯರಾದ ಶ್ರೀಮತಿ ಶಿಲ್ಪಾ, ಶ್ರೀಮತಿ ಪ್ರಮೀಳಾ ಕೆ., ಕು| ಚೈತ್ರಾ, ಕು| ಪವಿತ್ರಾ, ಶ್ರೀಮತಿ ಪೂರ್ಣಿಮಾ, ಕು| ಸವಿತಾ, ಕು| ಮಂಜುಳಾ ವೈ., ದೈಹಿಕ ಶಿಕ್ಷಕಉದಯಕುಮಾರ್ ರೈ ವಾಚಿಸಿದರು.

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀ ಜಯಪ್ರಕಾಶ್ ಶೆಟ್ಟಿ ವರದಿ ವಾಚಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಕು| ನವಿತಾ ಬಿ.ಆರ್. ಧನ್ಯವಾದವಿತ್ತರು. ಶಿಕ್ಷಕಿ ಶ್ರೀಮತಿ ಅನಿತಾ ಎಸ್. ಕಾರ್ಯಕ್ರಮ ನಿರೂಪಿಸಿದರು.

ಗುರುಕುಲ ಮತ್ತು ಪ್ರಾಥಮಿಕ ಶಾಲಾ ಪುಟಾಣಿಗಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಜರಗಿತು. ಸಭೆಯ ಬಳಿಕ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top