+91 8255-266211
info@shreeodiyoor.org

ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮ

ಮಾತೆ ಎನ್ನುವುದೊಂದು ಶಕ್ತಿ ಹತ್ತಿಯ ಚೂರುಗಳ ತ್ಯಾಗದಿಂದ ದೀಪ ಬೆಳಗುವಂತೆ ತಾಯಂದಿರು ಶ್ರಮವಹಿಸಿ ಮಗುವಿನ ಬೆಳವಣಿಗೆಗೆ ಸಹಕರಿಸುವ ಅನಿವಾರ್ಯತೆ ಇದೆ. ವಿಶ್ವ ಮಾನವ ಗುಣವನ್ನು ತಿಳಿಸುವ ಪ್ರಯತ್ನ ವಿದ್ಯೆ ಮಾಡಬೇಕು. ಈಗಿನ ಶಿಕ್ಷಣದಲ್ಲಿ ಬದುಕು ಶಿಕ್ಷಣಕ್ಕೆ ಒತ್ತು ಕೊಡಲಾಗಿಲ್ಲ.ನಮ್ಮತನವನ್ನು ನಾವು ಮರೆಯಬಾರದು.   ಮಕ್ಕಳು ಅರಳಬೇಕಾದರೆ ಸದಾ ಪ್ರೋತ್ಸಾಹ ಅಗತ್ಯ. ಒಳ್ಳೆಯ ತನವನ್ನು ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ.  ನಾವೆಲ್ಲರೂ ವಿಶಾಲ ಮನೋಭಾವನೆಯನ್ನು ಹೊಂದಿರಬೇಕು. ತಾಯಂದಿರೆಲ್ಲ ಜೀಜಾಬಾಯಿಯ ಹಾಗೆ ಸಮರ್ಥ ಶಿವಾಜಿಯನ್ನು ನಿರ್ಮಾಣ ಮಾಡುವವರಾಗ ಬೇಕು.  ದೇಶವನ್ನು ಕಟ್ಟುವ ಪ್ರಜ್ಞಾವಂತ ಪ್ರಜೆಗಳನ್ನು ಬೆಳೆಸುವವರಾಗಬೇಕು. ಮನುಜಮತವು   ವಿಶ್ವ ಪಥದಲ್ಲಿ ಸಾಗುವಂತೆ ಮಾಡುವುದೇ ಮಾತೃಪೂಜನಾ ಕಾರ್ಯಕ್ರಮದ ಗುರಿ.  ಅಂತರಂಗ ಶುದ್ಧ ವಾಗಿರಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ವನ್ನು ತುಂಬಿ ಭವ್ಯ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು. ಮಕ್ಕಳಲ್ಲಿಉತ್ತಮ ವಿಚಾರಗಳನ್ನು ಬಿತ್ತುವ ಕಾರ್ಯ ನಿರಂತರವಾಗಿ ಸಾಗಲು ಪ್ರೋತ್ಸಾಹ ನೀಡಬೇಕು ಎಂದು ಪರಮ  ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರುವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಮಾತೃಪೂಜನಾ ಕಾರ್ಯ ಕ್ರಮದಲ್ಲಿ ಆಶೀರ್ವಚನವಿತ್ತರು.

ಸಾಧ್ವಿ ಶ್ರೀ ಮಾತಾನಂದಮಯಿವರು ದೀಪ ಬೆಳಗುವುದರ ಮೂಲಕ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಮಾತೃಪೂಜನಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ತಾಯಿಯಾದವಳು ತ್ಯಾಗಮಯಿ.ಕಲಿಯುಗದಲ್ಲಿ ಭಗವಂತ ತಂದೆ ತಾಯಿಯರ ರೂಪದಲ್ಲಿ ಆವಿರ್ಭವಿಸುತ್ತಾನೆ. ರಾಷ್ಟ್ರ ಮಾತೆಗೂ , ಜಗನ್ಮಾತೆಗೂ ಇವತ್ತು ಗೌರವ ಸಲ್ಲಿಸಿದಂತಾಗಿದೆ. ಶಂಕರಾಚಾರ್ಯರು ಹೇಳುತ್ತಾರೆ ‘ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’. ಎನ್ನುವ ಹಾಗೆ ದುಷ್ಟ ಮಗನಾದರೂ ಹುಟ್ಟಬಲ್ಲ ಆದರೆ ದುಷ್ಟ ತಾಯಿ ಎಂದಿಗೂ ಇರಲಾರಳು.  ಸದೃಢ ಳಾದ ಮಹಿಳೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಆಶೀರ್ವಚನವಿತ್ತರು. ಪುರೋಹಿತರಾದ ಶುಕ್ಲ ಶ್ಯಾಮ್ ಭಟ್ ಮಾತೃಪೂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅತಿಥಿಗಳಾಗಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ  ಕೇಂದ್ರ ಒಡಿಯೂರಿನ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ ಶೆಟ್ಟಿ ಶಾಲಾ ಸಂಚಾಲಕರಾದ ಸೇರಾಜೆ ಗಣಪತಿ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ರೀ ಜಯಪ್ರಕಾಶ ಶೆಟ್ಟಿ ಎ ,ಮಾತೃಮಂಡಳಿ ಸಂಚಾಲಕರು ಶ್ರೀಮತಿ ವಿದ್ಯಾ ಉಪಸ್ಥಿತರಿದ್ದರು. ಭಜನೆ,ಮಕ್ಕಳಹಾಡು ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಮಕ್ಕಳು ದೀಪವನ್ನು ಉರಿಸಿ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿದರು. ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಮಾತೃಪೂಜನಾ ಕಾರ್ಯಕ್ರಮದಲ್ಲ ಭಾಗವಹಿಸಿದರು. ಕಾರ್ಯಕ್ರಮವನ್ನು ಗುರುಕುಲದ ಮಾತಾಜಿ ಶ್ರೀಮತಿ ಸಾಯೀಶ್ವರಿ ನಿರೂಪಿಸಿದರು.ಶ್ರೀಮತಿ ಸಂಧ್ಯಾ ವಂದಿಸಿದರು. ಪ್ರಾಥಮಿಕ ಶಾಲಾಮುಖ್ಯೋಪಾಧ್ಯಾಯಿನಿ ಶ್ರೀಮತಿ ನವಿತಾ ಬಿ  ಮತ್ತು ಎಲ್ಲಾ ಶಿಕ್ಷಕ ಶಿಕ್ಷಕಿಯರು ಸಹಕರಿಸಿದರು.

 

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top