+91 8255-266211
info@shreeodiyoor.org

ಮಾನವೀಯ ಮೌಲ್ಯಗಳನ್ನು ವೃದ್ಧಿಸಲು ಪ್ರವಚನ ಮಾಲಿಕೆ ಪೂರಕ – ಒಡಿಯೂರು ಶ್ರೀ

“ವಿಶ್ವ ಮಾನವ ಧರ್ಮದ ಪ್ರತಿಪಾದಕರಾಗಿ ದತ್ತಾತ್ರೇಯರು ಅವತರಿಸಿದರು. ಮಾನವೀಯ ಮೌಲ್ಯಗಳನ್ನು ವೃದ್ಧಿಸಲು ಪ್ರವಚನ ಮಾಲಿಕೆ ಪೂರಕ. ಅಂತರ್ಯದ ಕಡೆಗೆ ಗಮನಹರಿಸುವವರು ನಾವಾಗಬೇಕು. ಗುರುಗೀತೆ, ಅವಧೂತ ಗೀತೆಯಂತಹ ಕೃತಿಗಳು ನಮ್ಮ ಜೀವನಕ್ಕೆ ಅನುಕೂಲಕರವಾದ ವಿಚಾರವನ್ನು ತಿಳಿಸಿದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಆರನೆಯ ದಿನ ಜರಗಿದ ಶ್ರೀ ಗುರುಚರಿತಾಮೃತ ಪ್ರವಚನದ ವೇಳೆ ಅವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ “ಪುಷ್ಪದಲ್ಲಿ ಪರಿಮಳ, ಹಾಲಲಿ ತುಪ್ಪ, ಹಣ್ಣನಲ್ಲಿ ಸಿಹಿಯಿದ್ದಂತೆ ಭಾವದಲ್ಲಿ ಭಗವಂತನಿದ್ದಾನೆ. ಪ್ರಯತ್ನದಿಂದ ಅನುಭವಕ್ಕೆ ಬರಲು ಸಾಧ್ಯ. ಮರೆವು-ಅರಿವು ಇವೆರಡೂ ನಮ್ಮಲ್ಲಿದೆ. ಯಾವುದರ ಅರಿವು ಇರಬೇಕು; ಯಾವುದರ ಮರೆವಿರಬೇಕೆಂಬುದು ತಿಳಿದಿರಬೇಕು. ಗುರುತತ್ತ್ವ ಚಿಂತನೆ ನಮ್ಮಲ್ಲಿರಬೇಕು ಆಗ ಬದುಕು ಪಾವನವಾಗುತ್ತದೆ” ಎಂದರು.

ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಗುರುತತ್ತ್ವದ ಪ್ರವಚನವನ್ನುಗೈದ ವಿದ್ವಾನ್ ವಿ.ಬಿ. ಹಿರಣ್ಯ ಅವರು “ಮನಸ್ಸು, ಬುದ್ಧಿ, ಚಿತ್ತ ಹಾಗೂ ಇಂದ್ರಿಯಗಳ ಕ್ರಿಯೆಗಳನ್ನು ತಿಳಿಸಿದರು. ಪ್ರಪಂಚದ ಎಲ್ಲಾ ಚರಾಚರ ವಸ್ತುಗಳಿಗೂ ಗುರು ಇದ್ದಾನೆ. ಗುರುವಿಲ್ಲದ¬¬ ಪ್ರಾಣಿ ಯಾವುದೂ ಇಲ್ಲ. ಎಲ್ಲರಿಂದಲೂ ಶ್ರೇಷ್ಠವಾದ ಭಾವದಿಂದ ಸ್ವೀಕರಿಸಲ್ಪಟ್ಟವನು ಅವಧೂತ. ಪ್ರಪಂಚವೇ ಸಂಸಾರ. ಚಲನಶೀಲವಾದದ್ದು ಸಂಸಾರ. ಸಂಸಾರದಲ್ಲಿರುವ ಮಮತೆಯನ್ನು ಬಿಟ್ಟಿರುವವನೇ ಅವಧೂತ. ನಾನು, ನನ್ನದು ಎಂಬ ಮಮಕಾರ ಬಿಟ್ಟವನು. ಪರಮತತ್ತ್ವವೇ ನೀನಾಗಿದ್ದಿ ಎಂಬ ಭಾವನೆ ಇರುವವವನು ಅವಧೂತ. ನಾಲ್ಕು ವೇದಗಳನ್ನು ತತ್ತ್ವಶಃ ಸಾಕ್ಷಾತ್ಕರಿಸಿದವನು ಅವಧೂತ. ತ್ರಿಕರಣಾತ್ಮಕವಾಗಿ ದೇಹ, ಮಾತು, ಮನಸ್ಸು ಸೇರಿ ನಮಸ್ಕರಿಸಿದಾಗ ಶ್ರೇಷ್ಠತೆ ಇದೆ” ಎಂದರು.

ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ತರಬೇತುದಾರರಾದ ಶ್ರೀ ವಿನೋದ್ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top