+91 8255-266211
info@shreeodiyoor.org

“ಜೀವನ ಮೌಲ್ಯದ ವೃದ್ಧಿಗೆ ಬದುಕಿನಲ್ಲಿ ಮಧುರತೆಯಿರಬೇಕು” – ಒಡಿಯೂರು ಶ್ರೀ


 
“ನಮ್ಮ ಬದುಕಿನಲ್ಲಿ ಆತ್ಮವಿಶ್ವಾಸ ಹಾಗೂ ಸಂಸ್ಕಾರ ಶಿಕ್ಷಣ ವೃದ್ಧಿಸಲು ಗ್ರಾಮವಿಕಾಸ ಯೋಜನೆಯ ಉದಯವಾಯಿತು. ಮಧುರತೆ ಇದ್ದಲ್ಲಿ ಜೀವನ ಮೌಲ್ಯ ವೃದ್ಧಿಯಾಗುತ್ತದೆ. ಯೋಜನೆಯ ಪ್ರಥಮ ಆಧ್ಯತೆ ಬುದುಕಿನ ಶಿಕ್ಷಣಕ್ಕಾಗಿಯೇ ಮೀಸಲಿರಿಸುವುದು. ಎಲ್ಲಿ ನಿರ್ಮಲವಾದ ಸೇವೆ, ತ್ಯಾಗ, ಭಕ್ತಿ ಇರುತ್ತದೆಯೋ ಅಲ್ಲಿ ಕಲ್ಮಶ ಇರುವುದಿಲ್ಲ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಈ ಸಂದರ್ಭ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ತಾಲೂಕಿನ ಈಶಾನ್ಯ ವಲಯದ ಘಟಸಮಿತಿ ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಯೋಜಕಿ ಶ್ರೀಮತಿ ಲೀಲಾ.ಕೆ ಶ್ಲೋಕವನ್ನು ಹಾಗೂ ಸೇವಾದೀಕ್ಷಿತೆ ಸುಮಿತ್ರಾ ಅಮೃತವಚನವನ್ನು ನಿರ್ವಹಿಸಿದರು. ಜಯಶ್ರಿ ಕಥೆ ಹೇಳಿದರು. ಬಂಟ್ವಾಳ ತಾಲೂಕಿನ ಸಿಬ್ಬಂದಿಗಳು ಭಗವದ್ಗೀತೆ ಅಭ್ಯಾಸ, ಪ್ರಾಣಾಯಾಮ, ಧ್ಯಾನ, ಹಾಗೂ ಭಜನೆಯನ್ನು ನೆರವೇರಿಸಿಕೊಟ್ಟರು.

ಬಂಟ್ವಾಳ ತಾಲೂಕಿನ ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ ಯೋಜನೆಯ ಮಾಸಿಕ ವರದಿ ಮಂಡಿಸಿದರು. ಸಂಯೋಜಕ ಶ್ರೀ ರಾಜ್‍ಕುಮಾರ್ ಸ್ವಾಗತಿಸಿ, ವಂದಿಸಿದರು. ಸೇವಾದೀಕ್ಷಿತೆ ಕೋಕಿಲ ಕಾರ್ಯಕ್ರಮ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿಯಾದ ವಿಶ್ವನಾಥ ಶೆಟ್ಟಿ ಮತ್ತು ವಿಸ್ತರಣಾಧಿಕಾರಿಗಳಾದ ಸುರೇಶ್ ಶೆಟ್ಟಿ ಮೊಗರೋಡಿ, ನವೀನ್ ಶೆಟ್ಟಿ, ಯಶೋಧರ್ ಸಾಲ್ಯಾನ್, ಮುರಳೀಧರ್ ಕಾರ್ಕಳ ಉಪಸ್ಥಿತರಿದ್ದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top