+91 8255-266211
info@shreeodiyoor.org

ಧರ್ಮ ಇಲ್ಲದಿರುತ್ತಿದ್ದರೆ ಮನುಷ್ಯ ಮನುಷ್ಯನ ನಡವೆ ಸಂಬoಧವೇ ಇರುತ್ತಿರಲಿಲ್ಲ

“ಧರ್ಮ ಇಲ್ಲದಿರುತ್ತಿದ್ದರೆ ಮನುಷ್ಯ ಮನುಷ್ಯನ ನಡವೆ ಸಂಬoಧವೇ ಇರುತ್ತಿರಲಿಲ್ಲ”
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಒಡಿಯೂರು ಶ್ರೀಗಳವರಿಂದ ಆಶೀರ್ವಚನ“ಗಣಪತಿ ಎಂದರೆ ಬಹಳ ಸುಂದರವಾಗಿ ಕಾಣುವ ದೇವರು. ಆಕರ್ಷಣೆಯ ಶಕ್ತಿ ಅವನಲ್ಲಿದೆ. ಹಲವಾರು ತತ್ವಾಗಳು ನಮ್ಮ ಸನಾತನ ಧರ್ಮದಲ್ಲಿದೆ. ಜಲತತ್ವಾಕ್ಕೆ ಅಧಿಪತಿ ಗಣಪತಿ. ಪಂಚತತ್ವವನ್ನು ತಿಳಿಸಿದ ಶಂಕರಾಚಾರ್ಯರುಜಲತತ್ವಾಕ್ಕೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ. ಪಂಚತತ್ವದ ಆಧಾರದಲ್ಲಿ ಪಂಚಾಯತನ ಪೂಜೆಯ ಮೂಲಕ ದೇವರ ಆರಾಧನೆಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ. ಓಂಕಾರ ಸ್ವರೂಪನಾದ ಗಣೇಶ ಜ್ಞಾನ ವಿಕಾಸ, ಬುದ್ಧಿಗೆ ಪ್ರಚೋದನೆ ನೀಡುತ್ತಾನೆ. ಅಧ್ಯಾತ್ಮ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪೂರಕವಾದ ವಿಚಾರಗಳು ಓಂಕಾರದಲ್ಲಿದೆ. ತನ್ನನ್ನು ತಾನು ಅರಿಯುವುದು ಹಾಗೂ ಅದಿ, ಆತ್ಮನ ಬಗ್ಗೆ ವಿಶೇಷವಾದ ಜ್ಞಾನ ನೀಡುವುದೇ ಅಧ್ಯಾತ್ಮ. ಶ್ರದ್ಧಾ-ಭಕ್ತಿಯಿಂದ ಮಾಡುವ ಆಚರಣೆಗಳಿಂದ ಅನುಗ್ರಹ, ಯಶಸ್ಸು ಲಭಿಸುತ್ತದೆ. ಇದೆಲ್ಲವೂ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾಯಕವಾಗಿದೆ. ಧರ್ಮ ಇಲ್ಲದಿರುತ್ತಿದ್ದರೆ ಮನುಷ್ಯ ನಡುವಿನ ಸಂಬoಧವೇ ಇಲ್ಲದಂತಾಗುತ್ತಿತ್ತು.” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದರು.ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಹವನ ನೆರವೇರಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top