+91 8255-266211
info@shreeodiyoor.org

ಅನ್ನದ ಋಣವನ್ನು, ಆನಂದದ ಕ್ಷಣವನ್ನು ನಾವೂ ಎಂದಿಗೂ ಮರೆಯಬಾರದು

“ಅನ್ನದ ಋಣವನ್ನು, ಆನಂದದ ಕ್ಷಣವನ್ನು ನಾವೂ ಎಂದಿಗೂ ಮರೆಯಬಾರದು”ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ಮಾತೃಪೂಜನ ಕಾರ್ಯಕ್ರಮ-ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ’ಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ವಿಶೇಷವಾದ ಸಂಭ್ರಮದಲ್ಲಿದ್ದೇವೆ. ಇದೊಂದು ಸಂತೋಷದ ಕ್ಷಣವೂ ಹೌದು. ಮರೆತುಹೋದ ವಿಚಾರಗಳನ್ನು ಮತ್ತೆ ನೆನಪಿಸುವ ಕಾರ್ಯ ಮಾಡುವುದಾಗಿದೆ. ಒಂದು ಕಡೆ ಮಾತೃಪೂಜನ ಕಾರ್ಯಕ್ರಮ ಆದರೆ ಇನ್ನೊಂದೆಡೆ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಅನ್ನ ಮತ್ತು ಅಮ್ಮ ಎರಡು ಅಕ್ಷರಗಳಿಗೂ ಸಂಬಂಧವಿದೆ. ಅನ್ನದಿಂದಲೇ ಕೋಶಗಳು ಜಾಗೃತವಾಗುವುದು. ಅನ್ನದ ಋಣವನ್ನು, ಆನಂದದ ಕ್ಷಣವನ್ನು ನಾವು ಮರೆಯಬರದು. ನಾವು ಶಾಲೆಯ ವಿಷಯಗಳಲ್ಲಿ ನೂರಕ್ಕೆ 

ನೂರು ಅಂಕ ಗಳಿಸಲು ಪ್ರಯತ್ನಿಸಿದರೆ ಸಾಲದು, ಜೀವನದಲ್ಲಿ ನೂರಕ್ಕೆ ನೂರು ಯಶಸ್ಸು ಪಡೆಯುವವರಾಗಬೇಕು. ಅದಕ್ಕೆ ಪೂರಕವೆಂಬಂತೆ ಇಂತಹ ಕಾರ್ಯಗಳ ಮೂಲಕ ಸಂಸ್ಕಾರವನ್ನು ಬೆಳೆಸಬೇಕು. ಶಾಲೆಗಳಲ್ಲಿ ಪಾಠ ಮೊದಲು ಪರೀಕ್ಷೆ ಕೊನೆಗೆ. ಆದರೆ ಜೀವನದಲ್ಲಿ ಪರೀಕ್ಷೆ ಮೊದಲು ಪಾಠ ನಂತರ. ಸಮಾಜದಲ್ಲಿ ಇತ್ತೀಚೆಗೆ ನಡೆಯುವ ಅನೇಕ ದುಷ್ಕೃತ್ಯ ಗಳಿಗೆ ಸಂಸ್ಕಾರದ ಕೊರತೆಯೇ ಕಾರಣ. ಸಂಸ್ಕೃತಿಯನ್ನು ಉಳಿಸುವಲ್ಲಿ ಪೋಷಕರ ಪಾತ್ರದ ಬಗ್ಗೆ ಅರಿವಿರಬೇಕು. ನಾವೆಲ್ಲರೂ ಒಂದೊಂದು ದೀಪಗಳು. ದೀಪಕ್ಕೆ ಸಂಸ್ಕಾರ ಸಿಕ್ಕಿದಾಗ ನಿರಂತರ ಉರಿಯುವುದಕ್ಕೆ ಸಾಧ್ಯ. ನಮ್ಮ ಅಂತರಂಗದ ಜ್ಯೋತಿ

 ಬೆಳಗಲು ಜೀವನ ಸಂಸ್ಕಾರ ಬಹುಮುಖ್ಯ. ಆಗ ಸಮಾಜವು ಬೆಳೆಯುತ್ತದೆ, ಬೆಳಗುತ್ತದೆ. ಭಾರತೀಯ ಸಂಸ್ಕೃತಿಯನ್ನು  ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳೋಣ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಆಯೋಜಿಸಿದ ಮಾತೃಪೂಜನ ಕಾರ್ಯಕ್ರಮ ಹಾಗೂ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯ ಸಂದರ್ಭ ಸಂದೇಶ ನೀಡಿದರು.ಕಾರ್ಯಕ್ರಮವನ್ನು ದೀಪೋಜ್ವಲನದೊಂದಿಗೆ ಉದ್ಘಾಟಿಸಿದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಮಾತೃಪೂಜನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.ವೇ|ಮೂ| ಶುಕ್ಲಶ್ಯಾಮ ಭಟ್ ಹಾಗೂ ವೇ|ಮೂ| ನವರಾಜ ಭಟ್ ಅಮೈ ಮಾತೃಪೂಜನ ಕಾರ್ಯಕ್ರಮದ ವಿಧಿ-ನಿಧಾನ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೆಲ್ಲರೂ ಹಣತೆಗಳನ್ನು ಉರಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು.ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ ಮಾತೃಮಂಡಳಿ ಸಂಚಾಲಕಿ ಶ್ರೀಮತಿ ವಿದ್ಯಾಲಕ್ಷ್ಮೀ ಸ್ವಾಗತಿಸಿ, ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಪ್ರಸ್ತಾವನೆಗೈದರು.ಮಾತೃಮಂಡಳಿಯ ಸದಸ್ಯೆ ಶ್ರೀಮತಿ ಹರಿಣಾಕ್ಷಿ ಪಕಳ ವಂದಿಸಿ, ಶಾಲಾ ಶಿಕ್ಷಕ ಶ್ರೀ ಶೇಖರ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top